ಟ್ಯಾಲಿ ಎಂಎಸ್ಎಂಇ ಗೌರವ 2025: ಉದ್ಯಮಶೀಲತೆ, ನಾವೀನ್ಯತೆ ಮತ್ತು ಸಾಮಾಜಿಕ ಬದ್ಲಾವಣೆಗೆ ನಮನ

ಟ್ಯಾಲಿ ಸಲ್ಯೂಷನ್ಸ್ ತನ್ನ ಐದನೇ ಎಂಎಸ್ಎಂಇ ಗೌರವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದು, ದೇಶದಾದ್ಯಂತದ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಾಧನೆಗಳನ್ನು ಗೌರವಿಸಿದೆ. ವಿವಿಧ ವಿಭಾಗಗಳಲ್ಲಿ ನವೀನತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಡಿಜಿಟಲ್ ತಂತ್ರಜ್ಞಾನಗಳಲ್ಲಿ ಪ್ರಗತಿ ತೋರಿದ ಸಂಸ್ಥೆಗಳು ಪ್ರಶಸ್ತಿ ಪಡೆದಿವೆ.