ಕೆ.ಆರ್.ಪೇಟೆ,ಅ.25: ವಾಲ್ಮಿಕಿ ಸಮಾಜವನ್ನು ಟೀಕಿಸಿರುವ ಮಾಜಿ ಸಂಸದ ರಮೇಶ್ ಹತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಾಲ್ಲೂಕು ಅಧ್ಯಕ್ಷರು ಹಾಗೂ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರಾದ ಎ.ಆರ್.ರಾಜನಾಯಕ್ ನೇತೃತ್ವದಲ್ಲಿ ಪಟ್ಟಣದ ಪೊಲೀಸರಿಗೆ ಮನವಿ ಸಲ್ಲಿಸಿದರು.
ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್.ರಾಜಾನಾಯಕ್ ಮಾತನಾಡಿ ಮೊನ್ನೆ ಬೆಳಗಾವಿಯ ಬಿ.ಕೆ ಮಾಡೇಲ್ ಹೈಸ್ಕೂಲ್ ಮೈದಾನದಲ್ಲಿ ಡಿಸಿಸಿ ಬ್ಯಾಂಕಿನ ಚುನಾವಣೆ ವೇಳೆ ಚಿಕ್ಕೋಡಿ ಮಾಜಿ ಸಂಸದ ಬೆಲ್ಲದ ಬಾಗೇವಾಡಿಯ ರಮೇಶ ಕತ್ತಿ ತಂದೆ ವಿಶ್ವನಾಥ ಕತ್ತಿ, ಲಿಂಗಾಯತ ಜಾತಿ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ತನ್ನ ಬೆಂಬಲಿಗರೊಂದಿಗೆ ಮಾತನಾಡುತ್ತಾ ಬೇಡರ ಸೂಳೆ ಮಕ್ಕಳು” ಎಂದು ಸಾರ್ವಜನಿಕವಾಗಿ ವಾಲ್ಮೀಕಿ ಬೇಡನಾಯಕ ಜನಾಂಗವನ್ನು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ವಾಲ್ಮೀಕಿ ಸಮಾಜಕ್ಕೆ ಅವಮಾನಿಸಿದ್ದು ಇದರ ವಿಡಿಯೋ ಸಮಾಜಿಕ ಜಾಲತಣಗಳಲ್ಲಿ ಹಾಕಲಾಗಿದೆ.

ರಾಜ್ಯಾದಾದ್ಯಂತ ಇರುವ ಎಲ್ಲಾ ವಾಲ್ಮೀಕಿ ಸಮುದಾಯದ ಜನರ ಮನಸ್ಸಿಗೆ ತೀವ್ರ ನೋವು ಉಂಟಾಗಿದೆ. ನಮ್ಮ ವಾಲ್ಮಿಕಿ ಸಮಾಜ ರಾಜ್ಯದಲ್ಲಿ 70 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ ಆದರೂ ನಾವು ಯಾವುದೇ ಸಮಾಜಕ್ಕೂ ನೋವುಂಟು ಮಾಡದೆ ಎಲ್ಲಾ ಸಮಾಜ ಜೊತೆಯಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸಿಕೊಂಡು ಹೋಗುತ್ತಿದ್ದೇವೆ ಇಂತಹ ಸಮಾಜದ ಬಗ್ಗೆ ಅವಹೇಳನ ಕಾರ್ಯ ಪ್ರಚೋದನೆ ಮಾತುಗಳನ್ನು ರಮೇಶ್ ಕತ್ತಿ ಹಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಎಂದು ತಿಳಿಸಿದರು.
ತಾಲೂಕು ವಾಲ್ಮೀಕಿ ನಾಯಕ ಕ್ಷೇಮ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಜಿ.ಪಿ.ರಾಜು ಮಾತನಾಡಿ ವಾಲ್ಮೀಕಿ ಸಮಾಜಕ್ಕೆ ಜಾತಿ ನಿಂದನೆ ಮಾಡಿರುವ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಕ್ಕಿಹೆಬ್ಬಾಳು ಮಹೇಶ್ನಾಯಕ. ರಾಜನಾಯಕ. ಗ್ಯಾಸ್ ತಮ್ಮಯ್ಯ. ಸ್ವಾಮಿ ನಾಯಕ, ಬೊಮ್ಮರಾಯಿ ನಾಯಕ, ಶಿವನಾಯಕ, ಸಿದ್ದರಾಜು, ರಾಮಚಂದ್ರನಾಯಕ, ಕಾಮನಹಳ್ಳಿ ಮಂಜುನಾಯಕ. ಆನಂದ ನಾಯಕ, ಬೈರನಾಯಕ, ಬೋಜ ನಾಯಕ, ಮಂಜುನಾಯಕ, ಶೇಖರ್ ನಾಯಕ, ಮಹದೇವ್, ಶಶಾಂಕ್, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
- ಶ್ರೀನಿವಾಸ್ ಆರ್.
