ತಂತ್ರ ಸೂತ್ರ ಅನುಸಾರ “ಯಂತ್ರ” ತನ್ನ ಅನ್ವೇಷಣೆಯ ಮೂಲಕ ಮತ್ತು “ಮಂತ್ರ” ತನ್ನ ಕಲ್ಪನೆಗಳ ಮೂಲಕ ಪ್ರಗತಿಯ ಕಡೆ ತಂತ್ರಜ್ಞಾನವು ದಾಪುಗಾಲು ಹಾಕುತ್ತಿದೆ. ಪ್ರಸ್ತುತದಲ್ಲಿ ಪ್ರಪಂಚಾದ್ಯಂತ ಬಹು ಚರ್ಚೆಯಲ್ಲಿ ಇರುವ ತಂತ್ರಜ್ಞಾನ “ಕೃತಕ ಬುದ್ದಿಮತೆ”. ಈ ತಂತ್ರಾಂಶದ ಅಳವಡಿಕೆಯಿಂದ ತಂತ್ರಜ್ಞಾನ ವಿಭಾಗದಲ್ಲಿ ಆಗುವ ಪರಿಣಾಮಗಳ ಬಗ್ಗೆ ಸಾರ್ವತ್ರಿಕ ವಿಚಾರ ವಿನಿಮಯ ನೆಡೆಯುತ್ತಿವೆ. ಉದಾಹರಣೆಗೆ ನೇಮಕಾತಿ, ನೈತಿಕತೆ, ಕಾನೂನು, ಶೈಕ್ಷಣಿಕ, ಮನೋಧರ್ಮ ಇತ್ಯಾದಿ. ಈ ಕ್ಷೇತ್ರದಿಂದ ಭಾರತ ಹಿಂದೆ ಬಿದ್ದಿಲ್ಲ. ಭಾರತ ಸರ್ಕಾರ ಇಂತಹ ಪ್ರಾರಂಭ ಘಟಕಗಳಿಗೆ ಆರ್ಥಿಕ ಸಹಾಯ ಹಸ್ತ ಚಾಚುತ್ತಿದೆ.
ಇಪ್ಪತ್ತೊಂದನೆಯ ಶತಮಾನ ನಾಲ್ಕನೆಯ ಕೈಗಾರಿಕಾ ಕ್ರಾಂತಿಯ ಶತಮಾನ. ಇಂದಿನ ಈ ಕ್ರಾಂತಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ “ತಂತ್ರ” ಮತ್ತು “ಎ ಐ (ಆರ್ಟಿಷಿಶಯಲ್ ಇಂಟಿಲೆಜೆನ್ಸ್)”
ನಡುವಿನ ಸಂಬಂಧವನ್ನು ಪರಿಚಯಿಸುವ ಯತ್ನ ನನ್ನದು. “ಟಾಮ್ ಶಿವರ್” ಲೇಖನಿಸಿದ ಪುಸ್ತಕ “ಎ ಐ ಡಸ್ ನಾಟ್ ಹೇಟ್ ಯು” ವಿಸ್ತೃತವಾಗಿ ಕೃತಕ ಬುದ್ದಿಮತೆಯ ಬಗ್ಗೆ ವಿವರಿಸಲಾಗಿದೆ. ಗಣಕ ಯಂತ್ರದ ಪಿತಾಮಹ “ಅಲನ್ ಟುರಿನ್”. ಇವರಿಂದ ಪ್ರೇರಿತರಾದ ಅನೇಕ ವಿಜ್ಞಾನಿಗಳು ಸಾಧಾರಣ ಗಣಕಯಂತ್ರದಿಂದ ಸೂಪರ್ ಹಾಗು ಕ್ವಾಂಟಮ್ ಗಣಕಯಂತ್ರವನ್ನು ಸುಧಾರಿಸಿದ್ದಾರೆ. ಅಮೇರಿಕಾ ದೇಶದ ಗಣಿತ ತಜ್ಞ, ಗಣಕಯಂತ್ರ ತಜ್ಞ ಮತ್ತು ತಂತ್ರಜ್ಞಾನ ಸಂಶೋಧಕ “ಎಲಿಜರ್ ಯಡ್ಕೊವಿಸ್ಕಿ” ವರ ಉಪಯುಕ್ತ ವಾದ ಅಥವ ಸಿದ್ದಾಂತ ನನ್ನ ಗಮನ ಸೆಳೆಯಿತು. ಇವರ ಸಿದ್ದಾಂತವನ್ನು ನಮ್ಮ ಮನಸ್ಸಿನ ಆಳದಲ್ಲಿ ಅಳೆಯಬೇಕು. ಉದಾಹರಣೆಗೆ ಚಾಲಕ ರಹಿತ ವಾಹನಗಳ ತಯಾರಿಯ ಹಿಂದಿನ ನೀತಿಯನ್ನು ತಿಳಿಯಬೇಕೆನ್ನುವುದಾದರೆ ಎಲಿಜರ್ ಯಡ್ಕೊವಿಸ್ಕಿ ಹೇಳಿದ್ದ ಮಾತು “ನೀವು ತಯಾರು ಮಾಡಿ. ಸ್ವಲ್ಪ ಮಟ್ಟಿಗೆ ಜನರು ಸಾಯಬಹುದು. ಆದರೆ ಬಹುತೇಕ ಮಂದಿಗೆ ಇದರಿಂದ ಖುಷಿ ಆಗಬಹುದು ಮತ್ತು ಪ್ರಯೋಜನ ಪಡೆಯಬಹುದು. ತಯಾರಾದ ಯಂತ್ರದಿಂದ ಅಲ್ಪ ಪ್ರಮಾಣದ ನೋವು ಆಗಲಿ, ಅದರೆ ಪೂರ್ಣ ಮಟ್ಟದ ಸಾವು ಬೇಡ”. ಈ ಯುಕ್ತಿಯ ಸೂತ್ರಿಕರಣ ಭಾವದಿಂದ ಇಂದು ಬಹುಮಟ್ಟಿನ ಸುರಕ್ಷತೆಯ ಚಾಲಕ ರಹಿತ ವಾಹನಗಳನ್ನು ಜನ ಸಾಮಾನ್ಯರಿಗೆ ಎಟುಕುವಂತೆ ವಿಜ್ಞಾನಿಗಳು ತಯಾರು ಮಾಡುತ್ತಿದ್ದಾರೆ.

ಹೀಗೆ ಅನೇಕ ಗಂಡಾಂತರಗಳನ್ನು ಅಳೆದು ತೂಗಿ ಇಂದು ಮಾನವನನ್ನು ಹೋಲುವಂತಾ ಕೃತಕ ಬುದ್ದಿಮತೆ ಹೊಂದಿರುವ ರೋಬೋಟ್ಸಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಇವುಗಳಲ್ಲಿ ಪ್ರಸಿದ್ಧ “ಎಲಿಜಾ, ಶ್ರುಡ್ಲ, ಡೀಪ್ ಬ್ಲೂ, ಸೋಫಿಯಾ, ಅಮೇಕಾ, ಅಟ್ಲಾಸ್ ಹೀಗೆ ಹಲವಾರು.
ಈಗಿನ ಗಣಕಯಂತ್ರಗಳ ಸಾಮರ್ಥ್ಯ ವೇಗ ಮತ್ತು ಅಂಕಿ ಸಂಖ್ಯೆಗಳ ಮೇಲೆ ಅವಲಂಬಿಸಿರುತ್ತದೆ. ನಾವು ಎಷ್ಟು ಅಂಕಿ ಅಂಶಗಳನ್ನು ಒದಗಿಸುತ್ತೇವೋ ಮತ್ತು ಅರೆವಾಹಕಗಳನ್ನು ಗುರುತಿಸಿ ಯಂತ್ರದಲ್ಲಿ ಅಳವಡಿಸುತ್ತೇವೋ ಆಗ ಯಂತ್ರಕ್ಕೆ ಎಣಿಸುವುದು ಸುಲಭ ಮತ್ತು ತ್ವರಿತ. ಇಂತಹ ಯಂತ್ರಗಳ ಹೆಸರು “ಮೆಟಾ, ಜಮಿನಿ, ಚಾಟ್ ಬಾಟ್” ಇತ್ಯಾದಿ. ಈ ಯಂತ್ರಗಳಿಂದ ಮಾನವ ಸಾಧಿಸುವ ಒಂದು ವರ್ಷದ ಕೆಲಸವನ್ನು ಒಂದು ನಿಮಿಷದಲ್ಲಿ ಸಾಧಿಸಬಹುದು. ಆಗ ಮಾನವನ ಸ್ಥಿತಿ ಅಥವ ಪರಿಸ್ಥಿತಿಯನ್ನು ಊಹಿಸಲು ಅಸಾಧ್ಯ. ಆದರೂ “ಆಲ್ ಈಸ್ ವೆಲ್”. ಕಾರಣ, ಮಾನವ ಈ ಸ್ಥಿತಿ ಎದುರಾಯಿತು ಎಂದು ಇವನು ನಿಲ್ಲುವಹಾಗಿಲ್ಲ, ಓಡುತ್ತಲೇ ಇರಬೇಕು, ಅಂದರೆ ತನ್ನ ಜ್ಞಾನವನ್ನು ವೃದ್ಧಿಸುತ್ತಾ ಹೋಗಬೇಕು. ಆಗ ನೇಮಕಾತಿಗಳು ತಾನಾಗಿ ಬರುತ್ತವೆ. ಸ್ಪರ್ಧೆ ಖಚಿತ, ಜೊತೆ ಜೊತೆಯಲ್ಲೆ ಮಾನಸಿಕ ಒತ್ತಡಗಳು ಅಪಾರ. ಈ ಆಪತ್ತನ್ನು ಸರ್ಕಾರ, ನ್ಯಾಯಾಂಗ, ಸುವ್ಯವಸ್ತೆ, ವೈದ್ಯಕೀಯ ಇಲಾಖೆ ಇತ್ಯಾದಿಗಳೆಲ್ಲಾ ಭಾಗಿದಾರರು ಆಗಬೇಕು.
ಇದನ್ನು ಓದಿ:“ಅನ್ವೇಷಣೆ – ದೇವ ಕಣ – ಟ್ಯೂಬರಸ್ ಸ್ಲೀರೋಸಿಸ್ – ಸ್ಟಾಪ್ ಪೋಚಿಂಗ್ ರೈನೋಸ್”
ಜಾಲತಾಣ ಜಾಹೀರಾತು ಹೀಗಿತ್ತು “ಕ್ರೂಸ್ ಪ್ರಯಾಣ ಬಯಸಿದವರಿಗೆ ಸೆಕ್ಸ್ ರೋಬೋಟ್ ಉಚಿತ”. ಮಾನವರು ದೇಹ ಸಂಬಂಧ ಕಳೆದುಕೊಳ್ಳುತ್ತಿದ್ದಾರೆ. ಕಾಮ ಕೇಳಿಯೇ ಪ್ರಧಾನ ಕೇಂದ್ರವಾಗಿದೆ. ಪ್ರೇಮ ನಶಿಸುತ್ತಿದೆ. ಪಾವಿತ್ರತೆ ಸೂಕ್ಷ್ಮ ದರ್ಶಕದ ಬಿಂದು ಆಗಿದೆ. ಮನುಷ್ಯರು ಚಟ ಮತ್ತು ಅಮಲಿಗೆ ದಾಸರಾಗುತ್ತಿದ್ದಾರೆ. ಹೊಣೆಗಾರಿಕೆಯಿಂದ ಬದುಕಲು ಹಿಂದೆ ಸರಿಯುತ್ತಿದ್ದಾರೆ. ಒಮ್ಮೆ ಊಹಿಸೋಣ “ಬುದ್ದಿ ಮತ್ತು ರೂಪ ಎರಡರಲ್ಲೂ ಮನುಷ್ಯನನ್ನು ಮೀರಿದ ಸೆಕ್ಸಬೋಟ್” ಬಂದರೆ?

ಜೀವ ಶಾಸ್ತ್ರಜ್ಞ “ರೀಚರ್ಡ ಡಾಕಿನ್ಸ” ಮಾನವ ಮತ್ತು ಈಗಿರುವ ಗಣಕಯಂತ್ರವನ್ನು ಹೋಲಿಸಿದರೆ ಅವರು “ಇಂದಿನ ಶಕ್ತಿಶಾಲಿ ಗಣಕಯಂತ್ರ ನಮ್ಮ ಕಣ್ಣಿನ ರೆಪ್ಪೆಯ ಒಂದು ಮಿಟುಕಿಗೆ ಸಮ” ಎಂದಿದ್ದರು. ಹೀಗಿದ್ದಾಗ ನಮ್ಮ ಜೀವನ ಪರ್ಯಂತ ಅದೆಷ್ಟು ಬಾರಿ ನಾವು ಕಣ್ಣು ಮಿಟುಕಿಸಿರಬಹುದು? ಆದುದರಿಂದ ಯಾವುದೇ ಅತ್ಯಂತ ಬಲಿಷ್ಟವಾದ “ಎ ಐ” ಮನುಷ್ಯನಿಗೆ ಹೋಲಿಸಲು ಅಸಾಧ್ಯ.
ಇದನ್ನು ಓದಿ:“ಅಪಸ್ಮಾರ – ಆರ್ಗಾಸ್ಮಿಕ್ ಎಪಿಲೆಪ್ಸಿ – ಜಡತ್ವ – ವೆಲಕಮ್ ವಾತ್ಸಾಯಾನ”
ಉದಾಹರಣೆಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ತೀರ್ಪು ಪರ ಮತ್ತು ವಿರೋಧಗಳ ಚರ್ಚೆಯ ನಂತರ ಹಾಗು ಸಾಕ್ಷಿ ಆಧಾರದ ಮೇಲೆ ನಿಂತಿರುತ್ತವೆ. ನಮ್ಮ ದೇಶದ ರಾಜಧಾನಿಯ ವಾಯು ಮಾಲಿನ್ಯ ಹಲವು ತಿಂಗಳುಗಳು ವಿಷ ಅಥವ ಪಾಷಾಣ ಮಟ್ಟಕ್ಕೆ ಏರುತ್ತದೆ. ಈ ಗಾಳಿಯನ್ನು ಸೇವನೆ ಮಾಡಿದವನಿಗೆ ಆತನ ಲಂಗ್ಸಗೆ ನಂಜು ಹಿಡಿದು ಸಾಯುವಂತಹ ಸ್ಥಿತಿ ಬರಬಹುದು. ಆಗ ನ್ಯಾಯಾಧೀಶರು “ರೋಬೋಟ್” ಎಂದುಕೊಳ್ಳೊಣ. ಇಲ್ಲಿ ವಾದ ಮಾಡುವಂತಹವರೂ ರೋಬೋಟ್ಸೇ ಆಗಿರುವರು. ಇಲ್ಲಿಯ ಪರ ವಾದ ಮತ್ತು ವಿರುದ್ದ ವಾದ ಅಂಕಿ ಸಂಖ್ಯೆಯಿಂದ ಕೂಡಿರುವುದರಿಂದ ವಿವೇಕದ ಅಡಿ ಬರುವುದಿಲ್ಲ. ಹೀಗಿದ್ದಾಗ ನ್ಯಾಯಾಧೀಶ ಮಾನವನಾಗಿದ್ದರೆ ಪರ ಮತ್ತು ವಿರೋಧಗಳಿಗೆ ಸೊಪ್ಪು ಹಾಕದೆ ತಮ್ಮ ವಿವೇಚನೆಯ ಮೂಲಕ ತೀರ್ಪು ನೀಡುತ್ತಿದ್ದರು ಎಂಬುದು ನನ್ನ ವೈಯಕ್ತಿಕ ಅನ್ನಿಸಿಕೆ.

ಪ್ರಸ್ತುತತದಲ್ಲಿ ನ್ಯಾಯಾಧೀಶರ ಮನೆಯಲ್ಲೇ ನ್ಯಾಯಾದೀಶರು ಕೋಟ್ಯಾಂತರ ಹಣವನ್ನು ಕೂಡಿಟ್ಟಾಗ ಯಾವ ವಿವೇಕ, ಯಾವ ನ್ಯಾಯ, ಯಾವ ಬುದ್ದಿ?
ತಂತ್ರಾನುಸಾರ ಸಂಸಾರದಲ್ಲಿ ದೇಹ ಸಮೀಪ ಸಾನಿಧ್ಯ ಇಲ್ಲವಾದರೆ, ನಾನು “ವಿಶ್ವಾಮಿತ್ರ ಸಿದ್ದಾಂತ” ವನ್ನು ಕೆಲವೇ ವಾಖ್ಯಗಳಲ್ಲಿ ತಿಳಿಸುವ ಪ್ರಯತ್ನ ಮಾಡುವೆ. ಸನಾತನ ಧರ್ಮದ ಋಗ್ವೇದ ಗ್ರಂಥದಲ್ಲಿ ನಮೂದಿಸಿರುವ “ಗಾಯಿತ್ರಿ ಮಂತ್ರ” ದ ಜನಕ ಋಷಿ ವಿಶ್ವಾಮಿತ್ರರು. ಅತಿ ಕೋಪಿಷ್ಟ, ನಿಕೃಷ್ಟ ಹಾಗು ಯಃಕಶ್ಚಿತ್ತ. ಇವರ ಮುಂದೆ ಯಾವ ದೇವಾನು ದೇವತೆಗಳು ನಿಲ್ಲುತ್ತಿರಲಿಲ್ಲ. ವಿಶ್ವಾಮಿತ್ರರು ಈಶ್ವರನ ಮೂಲ ಜನಕ ಪ್ರತಿಪಾದಕ. ಪೌರಾಣಿಕವಾಗಿ ದೇವ “ಇಂದ್ರ” ಇವರ ಸಂಸಾರದಲ್ಲಿ ಹುಳಿ ಹಿಂಡಿದ್ದ ಎನ್ನುವ ಉಲ್ಲೇಖಗಳು ಇವೆ. ಆದರೆ ಇವರಿಗೆ ಸಪಿಂಡ ವಾದ ನೆನೆದರೆ ಎಲ್ಲಿಲ್ಲದ ಕೋಪ.
ಈಗಿನ ಪ್ರಪಂಚ ಮಾನವೀಯತೆಯ ದೃಷ್ಟಿಯಿಂದ ಸಪಿಂಡರಿಗೆ ತೆರೆದ ಪುಸ್ತಕ. ಇದರ ಜೊತೆಗೆ ತರತರಹ ಖುಷಿ ಕೊಡುವ ಹಾಗು ತೃಷೆ ನೀಗಿಸುವ ಸೆಕ್ಸ್ ಟಾಯ್ಸ ಮತ್ತು ರೋಬೋಟ್ಸ್, ಪ್ರಯೋಗಾಲಯದಲ್ಲಿ ಮಕ್ಕಳ ತಯಾರಿಸುವ (ಎಲಾನ್ ಮಸ್ಕರ ಪ್ರಯೋಗಾಲಯ), ಗರ್ಭಧಾರಣೆ ಸಗಟು ವ್ಯಾಪಾರವಾಗಿದೆ, ಹೀಗಿರುವಾಗ ಬಿಸಿ ದೇಹಗಳು ತಣ್ಣನೆಯ ಚರ್ಮದ ಚೀಲಗಳಾಗಿವೆ ಮತ್ತು ಮೋಹಕ ಹಾಗು ಮೋಹನಿಯರು ಅಳಿವಿನ ಅಂಚಿನಲ್ಲಿ ಇದ್ದಾರೆ. ಅಕಾಸ್ಮಾತ್ ವಿಶ್ವಾಮಿತ್ರ ಈಗ ಇದ್ದಿದ್ದರೆ…ಯೋಚಿಸಿ ಯಾವ ಸಿಡಿಮದ್ದನ್ನು ಋಷಿ ವಿಶ್ವಾಮಿತ್ರರು ಸಿಡಿಸುತ್ತಿದ್ದರು….
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

