ಕಾನ್ಫುಸಿಯಸ್ ಧರ್ಮದ ಬಿಕು (ಮಾಂಕ್) ಲಾವ್ ಝೋ ಧ್ಯಾನಿಸುತ್ತಿರುವಾಗ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿಷ್ಯ ಧೈರ್ಯ ಮಾಡಿ ಇವರ ಬಳಿ ಬಂದು ಅತಿ ವಿನಮ್ರತೆಯಿಂದ “ಕ್ಷಮಿಸಿ ಗುರುಗಳೆ, ನಾನು ತಮ್ಮಲ್ಲಿಗೆ ಬಂದು ವರ್ಷಗಳಾದವು ಆದರೂ ಧ್ಯಾನದ ಬಗ್ಗೆ ನೀವು ನನಗೆ ಏನು ತಿಳಿಸಿಲ್ಲ” ಎಂದಾಗ ಅವರು ಮುಗುಳ್ನಕ್ಕು ಅವರ ಅನುಯಾಯಿಗಳನ್ನು ಕರೆದು ಈ ಶಿಷ್ಯನ ಒಂದು ಕೈಯನ್ನು ಅವನ ಎದೆಗೆ ಬಲವಾಗಿ ಕಟ್ಟಿ ಎಂದು ಆಜ್ಞೆ ನೀಡಿದರು.
ಕಟ್ಟಿಸಿಕೊಂಡ ಶಿಷ್ಯ ಏನು ತಿಳಿಯದವನಂತೆ “ಗುರುಗಳೇ, ನಿಮ್ಮ ಉದ್ದೇಶ?” ಮತ್ತೆ ಮುಗುಳ್ನಗೆ ಇಂದ ಆ ಶಿಷ್ಯನಿಗೆ “ಚಪ್ಪಾಳೆ ಶಬ್ದ ತರೆಸು” ಎಂದರು. ಆತನು ಯಾವುದೇ ಸಾಹಸ ಮಾಡಿದರೂ ಚಪ್ಪಾಳೆ ಶಬ್ದ ತರಿಸಲು ಆಗಲಿಲ್ಲ. ಆಗ ಶಿಷ್ಯನನ್ನು ಕುರಿತು “ಪ್ರಪಂಚ ಪರ್ಯಾಟನೆ ಮಾಡಿ ಬಂದು ನನಗೆ ಚಪ್ಪಾಳೆ ಶಬ್ದ ಬಂತೆನ್ನುವುದನ್ನ ಹೇಳು” ಎಂದು ಹೇಳಿ ಮತ್ತೆ ಧ್ಯಾನಕ್ಕೆ ಜಾರಿದರು. ಶಿಷ್ಯ ಹಲವಾರು ದೇಶಗಳನ್ನು ಪರ್ಯಾಟನೆ ಮಾಡಿ ಬಂದರೂ ಚಪ್ಪಾಳೆ ತರಹದ ಶಬ್ದವನ್ನು ಹೊಮ್ಮಿಸುವುದರಲ್ಲಿ ವಿಫಲನಾದ.

ಮೂರು ನಾಲ್ಕು ವರ್ಷಗಳಿಂದ ಸತತ ಪ್ರಯತ್ನದಿಂದ ಸೋತು ಗುರುಗಳ ಮುಂದೆ ನಿಂತು “ನನಗೆ ಜ್ಞಾನೋದಯ ಆಯಿತು, ನನಗೆ ಜ್ಞಾನೋದಯ ಆಯಿತು” ಎನ್ನುತಾ ಕೂಗಿ ಕುಣಿದು ಕುಪ್ಪಳಿಸಿದ. ಎಂದಿನಂತೆ ಕಣ್ಣು ತೆರೆದು ಧ್ಯಾನಾವಸ್ತೆಯಿಂದ ಗಮನಿಸಿದ ಗುರುಗಳು ಮುಗುಳ್ನಕ್ಕು, ಆಶೀರ್ವಾದಿಸಿ ಮತ್ತೆ ಧ್ಯಾನ ಮಾಡತೊಡಗಿದರು.
“ಶಬ್ದ ಕೇಳಿಸಿಕೊಳ್ಳಬೇಕಾದರೆ ಇಬ್ಬರು ಇರಬೇಕು. ಒಬ್ಬರಿಂದ ಸಾಧ್ಯವಿಲ್ಲ. ‘ಅಪ್ಪ’ ಚೇತೋನ್ಮಯ, ‘ಅಮ್ಮ’ ಭಾವನಾಮೂರ್ತಿ. ಇಬ್ಬರ ನಡುವಿನ ಸಂಸಾರ ‘ತಂತ್ರ’ದ ಪರಮ ತತ್ವ”ಗಲಾಟೆ ಇಲ್ಲದ ಮನೆ ಸ್ಮಶಾನ ಮೌನ. ಸಂಸಾರದ ಏರು ಪೇರು ಜೀವನದ ಸಮುದ್ರ ಅಲೆಗಳು. ಒಮ್ಮೆ ಶಾಂತ ಮತ್ತೊಮ್ಮೆ ಆರ್ಭಟ. ಸದ್ದು ಸರ್ವ ಚೇತನ. ಚೇತನಗಳಲ್ಲಿ ಸಂಘರ್ಷ, ಭಿನ್ನವಾದ, ವಿರುದ್ಧ ಅಭಿಪ್ರಾಯ, ಇವೆಲ್ಲ ವೂ ಸಂಸಾರದ ಅಂಗ ಸಂಸ್ಥೆಗಳು. ಇವುಗಳನ್ನು ಮೀರಿ ಭಾವನೆಗಳು ಒಂದಾಗಬೇಕು.

ಅರ್ಥ, ವಿವೇಕ, ತಾಳ್ಮೆಗಳ ಜೊತೆ ವ್ಯವಹರಿಸಬೇಕು. ಬುದ್ದಿಯ ಪರಮ ಅರ್ಥ “ಸಮಯ ಪ್ರಜ್ಞೆಯಿಂದ ಕ್ಷಣ ಸಮಸ್ಯೆಯನ್ನು ಬಗೆಹರಿಸು”. ಬಗೆಹರಿಸುವಿಕೆಗೆ ಬೇಕಾಗಿರುವುದು ಕಲಿತ ಕೌಶಲ್ಯದಿಂದ. ಕಲಿಕೆ ಮತ್ತು ಅರಿವು ಈ ಕೌಶಲ್ಯಕ್ಕೆ ಪೂರಕ. ಧ್ಯಾನಾವಸ್ತೆಗೆ ಬೇಕಾಗಿರುವುದು ಸಮ್ಮತಿ, ಸ್ವೀಕಾರ ಮತ್ತು ತಿಳುವಳಿಕೆ. ಪ್ರಸ್ತುತದಲ್ಲಿ ಮಾನವನ ಶಬ್ದಗಳು ಆವತ್ತಿನ ಚಿಂತೆ, ಹಿಂದಿನ ಕೊರಗು ಮತ್ತು ಮುಂದಿನ ಇಲ್ಲದ ಯೋಚನೆಗಳು. “ತಂತ್ರ” ದ ಯಂತ್ರ ಸಲಕರಣೆಗಳು ಗ್ರಹಿಕೆ, ಧಾರಣೆ ಮತ್ತು ತರ್ಕಬದ್ಧವಾದ ಉತ್ತರ. ಇವುಗಳ ನಿರ್ವಹಣೆಯು ಮಂತ್ರ (ಧ್ಯಾನ) ದಿಂದ ಮಾತ್ರ ಸಾಧ್ಯ. ಯಾರು ಈ ಪ್ರಯೋಜನತ್ವದಲ್ಲಿ ನೆಡೆದುಕೊಂಡು ಸಾಗುತ್ತಾರೋ ಅಂತವರು “ಮುಕ್ತಿ” ಯ ಮಾರ್ಗ ತಲುಪಬಹುದು. ಹೇಳಿದಷ್ಟು ಈ ಮಾರ್ಗ ಸುಲಭವಲ್ಲ. ಅರಿವು, ಗಮನ ಮತ್ತು ಶ್ರದ್ಧೆ ಬಹು ಉಪಯುಕ್ತ. ಸಾಧಿಸುವವರಿಗೆ ಮುಕ್ತಿ ಪ್ರಾಪ್ತಿ. ಮುಕ್ತಿ ಅಂದರೆ ಮೋಕ್ಷವಲ್ಲ, ಸಂತೃಪ್ತಿ.
ಸೃಷ್ಟಿಕರ್ತ ಮೂರ್ಖರ ಸ್ವರ್ಗದಲ್ಲಿ ಮಾನವನನ್ನು ಸೃಷ್ಟಿಸಿ ಬಿಟ್ಟಿದ್ದಾನೆ. “ವಿಜ್ಞಾನಿಗಳು, ಅನುಭವಾದಿಗಳು, ವಿಕಸಿಕರು”, ಇವರುಗಳನ್ನು ಸೃಷ್ಟಿಕರ್ತನಿಗೆ ಹೋಲಿಸಿದಾಗ ಇವರುಗಳ ಪಾತ್ರ ಸೃಷ್ಟಿಕರ್ತನ ಮುಂದೆ ಏನೇನು ಇಲ್ಲ. ಭೂಮಿ ಮತ್ತು ಜೀವ ಸೃಷ್ಟಿ ಆಗಿವೆ. ಆದರೆ ಈಗ ಈ ಸೃಷ್ಟಿಯ ಜನನ ಹೇಗೆ ಆಯಿತು ಎಂಬುದೇ ಇವರುಗಳ ಚಿಂತೆ. ಪ್ರಪಂಚ ವೈವಿಧ್ಯಮಯ ಪ್ರಕೃತಿಯ ಕೊಡುಗೆ. ಯಾವುದೇ ವಸ್ತುವನ್ನು ವಿವರಿಸುವಾಗ ಆ ವಸ್ತುವಿನ ವಸ್ತು ನಿಷ್ಠೆ ಅಲ್ಲದೆ ವಿರುದ್ಧ ವಸ್ತು ಇರಲೇ ಬೇಕು. ಆದುದರಿಂದ ಪ್ರಪಂಚದ ಸೃಷ್ಟಿ ವಿರುದ್ಧ ಅವಸ್ಥೆಯಿಂದಲೇ ಆಗಿದೆ. ಉದಾಹರಣೆಗೆ, ಕಪ್ಪು- ಬಿಳಿ, ಮ್ಯಾಟರ್ – ಆಂಟಿ ಮ್ಯಾಟರ್, ಹೆಣ್ಣು – ಗಂಡು ಇತ್ಯಾದಿ.

“ಘನಾವಸ್ತೆಗೆ ಜೀವ ಇಲ್ಲ, ಮೂರ್ಖನೋರ್ವ ಹೇಳಿದ. ಇದೇ ಮೂರ್ಖ ನುಡಿದ ಘನ ಪದಾರ್ಥ ಕೆಲಸಕ್ಕೆ ಬರುವುದಿಲ್ಲ . ಆದರೆ ಆತನಿಗೆ ತಿಳಿಯದು ಘನಾವಸ್ತೆಯ ಅಣುವಿನ ಒಳಗೆ ಹೊಕ್ಕಾಗ ಅಮೋಘವಾದ ಜೀವ ಇದೆ ಎಂಬುದು”.ವಿಶ್ವದ ಸಮಸ್ತ ವಸ್ತು ಎಲ್ಲವೂ ಅಣುವಿನ ವಿನ್ಯಾಸ ಮತ್ತು ಅಣು ಜೋಡಣೆಯಿಂದಲೇ ಆಗಿರುವುದು. ಉದಾಹರಣೆಗೆ, ಅನಿಲ, ನೀರು, ಲೋಹ, ಗಿಡ, ಮರ ಮತ್ತು ಜೀವಿ.
ಸಾಮಾನ್ಯವಾಗಿ ಯಾವುದೇ ವಸ್ತು ತನ್ನ ಗುಣ ಮತ್ತು ಲಕ್ಷಣಗಳನ್ನು ಹಿಡಿದಿಟ್ಟುಕೊಳ್ಳುವಾಗ ಅ ವಸ್ತುವಿನ ಅಣುಗಳು ಇರಲೇ ಬೇಕು. ಕೇಂದ್ರ ಬಿಂದು “ನ್ಯೂಕ್ಲಿಯಸ್” ತನ್ನ ಸ್ಥಳದಲ್ಲಿ ಕಾಯ್ದಿರಿಸಲು ಇದರ ಸುತ್ತ ಶಕ್ತಿಪ್ರದಾಯಕ ನೆಗಟಿವ್ ಎಲಾಕ್ಟ್ರಾನ್, ತಮ್ಮ ಪತಗಳಲ್ಲಿ ತಮ್ಮದೇ ಆದ ವೇಗದಲ್ಲಿ ಸುತ್ತಿ ಅಣುವನ್ನು ಸಂರಕ್ಷಿಸುತ್ತವೆ. ಇವುಗಳ ರಸಾಯನಿಕ ಮತ್ತು ಭೌತಿಕ ಗುಣ ಮತ್ತು ಲಕ್ಷಣಗಳನ್ನು ನಾವು ಬಿಸಿ ಅಥವ ಅಗ್ನಿಗೆ ಮತ್ತು ಮತ್ತೊಂದು ವಸ್ತುವನ್ನು ಸೇರಿಸಿ ಕರಗಿಸಿದರೆ ಇನ್ನೊಂದು ವಸ್ತು ಆಗಿ ಪರಿವರ್ತನೆ ಆಗುತ್ತದೆ. ಆದುದರಿಂದ ನಮ್ಮನ್ನು ನಾವು ಹೇಗೆ ಸಂರಕ್ಷಿಸಿಕೊಳ್ಳುತ್ತೇವೋ ಹಾಗೆಯೇ ವಸ್ತುಗಳು ಸಹ ಭೌತಿಕವಾಗಿ ಸಂರಕ್ಷಿಸಿಕೊಳ್ಳುತ್ತವೆ.
ನಮ್ಮ ಚೇತನ ಹೇಗೆ ಒಂದು ಕಾಲದಲ್ಲಿ ಇರುವುದಿಲ್ಲವೋ ಹಾಗೆಯೇ ಅವುಗಳ ಚೇತನವೂ ಕೂಡ ಕಾಲಾನಂತರ ಇರುವುದಿಲ್ಲ. ತಂತ್ರ ಗ್ರಂಥಾನುಸಾರ, ಅವಿರತ ಚಲನಾ ಶಕ್ತಿಯಿಂದ ಸಮಸ್ತ ವಿಶ್ವವು ಜೀವ ಮತ್ತು ನಿರ್ಜೀವ ವಸ್ತುಗಳ ನಡುವೆ ಪರಸ್ಪರ ಅಭಿನವ ಸಂಪರ್ಕ ಹೊಂದಿದೆ. ನನ್ನ ಈ ಹೇಳಿಕೆಯ ಉದ್ದೇಶ, ನಾವು ಇಲ್ಲವಾದರೆ ಪ್ರಪಂಚ ಸಹ ಇರುವುದಿಲ್ಲ. ಮೂಲತಹ ತಂತ್ರದ ಸಾರ ಯಂತ್ರ ವಿನ್ಯಾಸ ಮತ್ತು ಮಂತ್ರಧ್ಧೊರಾಣೆ (ಜ್ಞಾನ).

ಇವೆಲ್ಲವನ್ನೂ ಯೋಚಿಸಿದಾಗ ನನಗೆ ದೇವರು ಯಾರು ಇರಬಹುದೆಂಬ ಪ್ರಶ್ನೆ ಕಾಡಿತು. ನಾನು ನನ್ನ “ಔಟ್ ಆಫ್ ದ ಬಾಕ್ಸ್ ತಿಂಕಿಂಗ್” ಮಾಡಿದಾಗ ಅಣು ತನ್ನ ಅಹಂಕಾರವನ್ನು ಮೆರೆಯದೆ ತನ್ನದೆ ಆದ ವಿನ್ಯಾಸದ ಮತ್ತೊಂದು ಅಣುವಿನ ಜೊತೆ ಬೆಸೆದಿರುವ ಅಂಶವೇ “ದೇವರು (God)”. ಉದಾಹರಣೆಗೆ, ಅಗಾಧವಾದ ಸಾಗರ ಆಗಬೇಕಾದರೆ ಒಂದೊಂದ್ದು ನೀರಿನ ತೊಟ್ಟು ತನ್ನ ಅಹಂಕಾರವನ್ನು ತೊರೆದು ಮತ್ತೂಂದು ನೀರಿನ ತೊಟ್ಟಿನ ಜೊತೆ ಮಿಲನವಾದಾಗ ಮಾತ್ರ ಸಾಗರ. ಮಹಾನ್ ಗೌತಮ ಬುದ್ಧರು ಅಂದು ವಿಶ್ವವನ್ನು ಕುರಿತು “ಬ್ರಹ್ಮ ಸಮೂಹವು ಅಂತರ ಹೊಂದಾಣಿಕೆ, ಅಂತರ ಸಂಪರ್ಕ ಮತ್ತು ಅಂತರ ಕ್ರಿಯೆ, ಇವುಗಳಿಂದ ಕೂಡಿರುತ್ತದೆ” ಎಂದಿದ್ದರು.
ಒಮ್ಮೆ ಯೋಚಿಸಿದರೆ ಜಗತ್ತಿನಲ್ಲಿ ಮಾನವೀಯತೆಯ ಧರ್ಮ ಇದ್ದು “ವಿಶ್ವ ಪ್ರೇಮ” ಅನುಸರಿಸಿದರೆ ಋಷಿ ಕುವೆಂಪುರವರ ವಾಖ್ಯಾನ “ಆಗು ಆಗು ನೀ ವಿಶ್ವ ಮಾನವನಾಗು” ನಿಜ ಆಗಿಸಬಹುದಲ್ಲವೇ?..
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]