ಇಸ್ರೇಲಿನ ಇತಿಹಾಸಗಾರ “ಯುವಾಲ್ ನೋವಾ ಹರಾರಿ” ಈ ಶತಮಾನದಲ್ಲಿ ಕಂಡ ಅದ್ಭುತ ಬರಹಗಾರ. ಇವರ ಲೇಖನ ಸಂಕೀರ್ಣಗಳು – ಹುಟ್ಟು, ಮಾನವ, ಸಂಘರ್ಷ, ವಿಕಾಸ, ಧರ್ಮ, ವಿಜ್ಞಾನ, ಆರ್ಥಿಕ, ರಾಜಕೀಯ, ಪಕ್ಷ, ಮತೀಯ, ಸಂಘ, ಪಂಗಡ ಇತ್ಯಾದಿಗಳಿಂದ ಕೂಡಿರುತ್ತದೆ. ಇವರ ಅಚ್ಚುಮೆಚ್ಚಿನ ಸಾಧನೆಯ ಬರವಣಿಗೆ “transformation (ಪರಿವರ್ತಕ ಸಾರ)”.. ಹೋಮೋ ಸೆಪಿಯನ್ ಇಂದ ಹೋಮೋ ಡೀಯಸ್ ಕಡೆಗೆ, ಅಂದರೆ ಮಾನವ ನೈತಿಕವಾಗಿ ತನ್ನ ವಿವೇಕ ತನದಿಂದ ದೈವ ತತ್ವದ ಕಡೆಗೆ ಎಂಬುದು. ಈ ವಿಷಯವಾಗಿ ಅವರು ಬರೆದಿರುವ ಪುಸ್ತಕಗಳನ್ನು ಓದಿ ತಿಳಿಯಬೇಕು.

ನನ್ನ ಪ್ರಕಾರ ಧರ್ಮ ಒಳ್ಳೆಯದೇ, ಆದರೆ ಮನುಷ್ಯ ಧರ್ಮದ ಕಟ್ಟುಪಾಡಿಗೆ ಕೆಟ್ಟು ಹೋಗಿದ್ದಾನೆ. ಧರ್ಮ, ಪ್ರಸ್ತುತ ಪೀಳಿಗೆಯವರು ಮಾಡಿದಲ್ಲ ಆದರೆ ನಮ್ಮ ವಂಶವಾಹಿನಿಗಳಿಂದ ಧರ್ಮ ಎಂಬುದು ಬಂದು ಬಿಟ್ಟಿದೆ. ಇಂತಹ ಧರ್ಮಕ್ಕೆ ನಮ್ಮ ಕೊಡುಗೆ ಏನು? ಧರ್ಮ ಹರಿಯದೆ ನಿಂತ ನೀರಿನಂತೆ ಇರಬಾರದು.
ಇದನ್ನು ಓದಿ: “ ಲಾವ್ ಝೋ – ಅಲೋನ್ ನೆವರ್ ಮೇಕ್ಸ್ ಸೌಂಡ್ – ಮ್ಯಾಟರ್ ಈಸ್ ಲೈಫ್ ಲೆಸ್, ಫೂಲ್ ಸೆಡ್ ದಿಸ್ (ತಂತ್ರ ಯೋಗ) – ಕುವೆಂಪು”
ಧರ್ಮ ತನ್ನ ಸಾರವನ್ನು ಕಾಲಘಟ್ಟಕ್ಕೆ ಸರಿಯಾಗಿ ಪರಿವರ್ತನೆ ಪಡೆದು ಹರಿಯುವಂತೆ ಆಗಬೇಕು. ಹರಿಯುವ ನದಿಗೆ ಅಣೆಕಟ್ಟು ಕಟ್ಟಿ ನೀರನ್ನು ಮಾನವನ ಏಳಿಗೆಗೆ ಉಪಯೋಗಿಸುವಂತೆ ಧರ್ಮವನ್ನು ಸದ್ಗುಣ ಮತ್ತು ಸದ್ಭಾವ ಕಾರ್ಯಗಳಿಗೆ ಉಪಯೋಗಿಸಿಕೊಂಡರೆ ಲೇಸು ಅಥವ ಒಳ್ಳೆಯದು. ಆದರೆ ಧರ್ಮಗಳು ಪೈಪೋಟಿಗೆ ನಿಂತಿವೆ. ನಾ ಮೇಲು ನೀ ಕೀಳು ಎನ್ನುವ ಸ್ಪರ್ಧಾತ್ಮಕ ಸಂಘರ್ಷಕ್ಕೆ ಅಣಿ ಆಗುತ್ತಿವೆ. ವಿಪರ್ಯಾಸವೋ ಅಥವ ದುರದೃಷ್ಟಕರವೋ ತಿಳಿಯದು, ಧರ್ಮಗಳು ಪ್ರಶ್ನೆಗಳಿಗೆ ಸಿಗುತ್ತಿಲ್ಲ, ತರ್ಕ ಕಾಣುತ್ತಿಲ್ಲ, ವಿಜ್ಞಾನ ಸತ್ತು ಹೋಗಿದೆ ಮತ್ತು ಉತ್ತರಗಳು ನಿರಾಸಾದಾಯಕವಾಗಿವೆ.

“ನಾನೇ” ಎನ್ನುವುದು ಸಮಾಜ ಗ್ರಹಿಕೆಯ ವಿರುದ್ಧ ನಿಲುವು ಆಗಿದೆ. “ನಾನೇ” ಎಂಬ ಅಹಂಕಾರದಿಂದ ತನ್ನ ಸಮತೋಲನವನ್ನೇ ಕಳೆದುಕೊಂಡಿದ್ದಾನೆ. ಇಂದು “ನಾನೇ” ಎಂಬ ವ್ಯಕ್ತಿತ್ವ ಹೊಂದಿದವನು ತಾನು ಏನು ಬೇಕಾದರೂ ಮಾಡಬಲ್ಲ ಎನ್ನುವ ಅಹಂಲ್ಲಿ ಇರುತ್ತಾನೆ. “ನನ್ನ”ದು ಎನ್ನುವುದಕ್ಕೆ ಎಂದೂ ಅಂತ್ಯವಿಲ್ಲ. ಆದರೆ ನನ್ನದು ಎನ್ನುವುದನ್ನು ನಮ್ಮದು ಎನ್ನುವ ಬದಲಾವಣೆಗೆ ಸಾಕಷ್ಷು ಸಾಧನೆ ಮಾಡಬೇಕು ಮತ್ತು ಈ ಮಾರ್ಗ ಕಠಿಣ ಮಾರ್ಗ. ಈ ಮಾರ್ಗದ ದೃಷ್ಟಾಂತವೇ “ತಂತ್ರ”.
“ವಾಟ್ ಈಸ್ “ಐ” ಇನ್ ಮಿ ಐ ಫೀಲ್ “ಐ” ಈಸ್ ಆಲ್ವೇಸ್ ಬಿಗ್. ಫ್ರಾಂಕ್ಲಿ, “ಐ” ಈಸ್ ಸ್ಮಾಲ್ ವಿತಿನ್ ಫೋರ್ ವಾಲ್ಸ ಐ ಕನ್ಸಟ್ರಕ್ಟ”.
ಈ ವಾಖ್ಯಾನು ಸಾರ “ನಾನು ಅಥವ ನನ್ನದು” ಎಂಬದು ನನ್ನ ದೊಡ್ಡ ಸಾಧನೆ ಅಥವ ಭಾವನೆ. ಆದರೆ ಸತ್ಯ ಸ್ಥಿತಿ “ನಾನು” ಎಂಬುದು ನಾನೆ ಕಟ್ಟಿಸಿದ ನಾಲ್ಕು ಗೋಡೆಗಳ ಮಧ್ಯೆ ಅತಿ ಚಿಕ್ಕ ಮೌಲ್ಯ.
ಇದನ್ನು ಓದಿ:“ ಅನ್ವೇಷಣೆ – ದೇವ ಕಣ – ಟ್ಯೂಬರಸ್ ಸ್ಲೀರೋಸಿಸ್ – ಸ್ಟಾಪ್ ಪೋಚಿಂಗ್ ರೈನೋಸ್”
ಹೇಳಬೇಕೆಂದರೆ ತಂತ್ರ ವಿಜ್ಞಾನ ಪ್ರಾಯೋಗಿಕ. ಪ್ರಯೋಗಾಲಯದಲ್ಲಿ ಸಂಶೋಧನೆ ಮಾಡಿ ಒಳ್ಳೆಯ ಉತ್ಪನ್ನ ತಯಾರಿಸಿದಂತೆ. ತಂತ್ರ ಪಥಗಳು ಹಲವಾರು. ಹಿಡಿಯುವ ಮಾರ್ಗ ನಮ್ಮದು. ತಂತ್ರ ಕುತಂತ್ರ ದಾರಿ ಅಲ್ಲ. ಇದರಲ್ಲಿ ದುರುದ್ದೇಶ ಇಲ್ಲವೇ ಇಲ್ಲ. ತಂತ್ರ, ಜೀವನದ ಚೇತೋನ್ಮಯ. ತಂತ್ರವನ್ನು ಅರಿಯದೆ ಇರುವರು ತಂತ್ರವನ್ನು ಅಧರ್ಮ ಎಂದು ಕರೆದಿದ್ದಾರೆ. ತಂತ್ರ ಗ್ರಂಥಗಳಲ್ಲಿ ರಹಸ್ಯದ ಪದವೇ ಇಲ್ಲ. ಒಂದಂತ್ತು ನಿಜ, ತಂತ್ರವೇ ನಿಗೋಡ. ತಿಳಿದಿರುವರಿಗೆ ತಂತ್ರ ಸುಲಭದ ಗಣಿತ, ತಿಳಿಯದೇ ಇರುವವರಿಗೆ ತಂತ್ರ ವಿಜ್ಞಾನ ಜೀವಮಾನದ ಕುಣಿಕೆ. ಹೇಳಬೇಕೆಂದರೆ ಜೀವನವೇ ಗೊಂದಲ. ಈ ಗೊಂದಲದ ರಹಸ್ಯವನ್ನು ಬಿಚ್ಚಿ ಇಡುವ ವ್ಯಕ್ತಿ ಪ್ರಜ್ಞಾವಂತ. ಆಗ ತಂತ್ರ ಆ ಪ್ರಜ್ಞಾವಂತನಿಗೆ ಕತ್ತಲಿಗೆ ದಾರಿದೀಪ. ಬೆಳಗಿದ ಬೆಳಕಿನ ದಿವ್ಯ ದೀಪ ಅವನನ್ನು ಬ್ರಹ್ಮಾಂಡ ಸಾಗರದ ಕಡೆ ಒಯ್ಯಬಲ್ಲದು.

ಬದುಕು ಬೃಹತ್ ಬಂಡೆ. ಈ ಬಂಡೆ ರೂಪವನ್ನು ಪಡೆಯಬೇಕು ಎಂದರೆ ಉಳಿ ಮತ್ತು ಸುತ್ತಿಗೆಯಿಂದ ಕೆತ್ತ ಬೇಕು. ಕೆತ್ತಲ್ಪಟ್ಟ ಮೂರ್ತಿಗೆ ಜೀವನದ ದೇವಸ್ಥಾನ ಕಟ್ಟಬೇಕು. ಕೆಲವರು ತಮ್ಮ ಮನಸ್ಸಿನ ದೇವಾಲಯ ಕಟ್ಟದೆ ಹುಚ್ಚು ಅಭಿಮಾನದಿಂದ ಸೆಲಬ್ರಿಟಿ ದೇವಾಲಯಗಳನ್ನು ಕಟ್ಟಿರುತ್ತಾರೆ. ಇಂತಹ ಅಂಧ ಅಭಿಮಾನ ಒಂದು ವಿಪರ್ಯಾಸವೇ ಸರಿ. ಬದುಕಿನ ರೂಪಕ್ಕೆ ಜ್ಞಾನದ ಕೊರತೆ ಇರಬಾರದು. ಕಲಿಕೆ ನಿರಂತರ. ನಮ್ಮ ಉಸಿರು ಇರುವವರಿಗೂ ನಮ್ಮ ಮನಸ್ಸಿಗೆ ಜ್ಞಾನ ತುಂಬುತ್ತಾ ಹೋಗಬೇಕು. ಹೀಗೆ ಹೋದಾಗ ಮಾತ್ರ ಮಾನವ ತನ್ನ ಘನತೆ, ಗೌರವ ಮತ್ತು ಸಾಧನೆಯ ಬದುಕನ್ನು ಕಂಡುಕೊಳ್ಳುವುದರಲ್ಲಿ ಯಶಸ್ವಿ ಆಗುತ್ತಾನೆ.
ತಂತ್ರ ಎಂದೂ ನಿಲ್ಲು ಎನ್ನುವುದಿಲ್ಲ. ಯಶಸ್ವಿ ಕಾಣಬಹುದು ಅಥವ ಕಾಣದೇ ಇರಬಹುದು ಆದರೆ ತಂತ್ರವು ಕೆಟ್ಟದ್ದನ್ನು ಮಾಡು ಅಥವ ಮುಗ್ಧರಿಗೆ ಕೆಟ್ಟದ್ದನ್ನು ತುಂಬು ಎಂದು ಎಂದಿಗೂ ತಿಳಿಸುವುದಿಲ್ಲ. ತಂತ್ರ ಎಲ್ಲರಿಗೂ ಚಲಿಸು ಎಂದಷ್ಟೇ ಪ್ರಚೋದಿಸುತ್ತದೆ. ತಂತ್ರ ಅನುಸಾರ
“ನೀ ಮುಂದೆ ಸಾಗು, ಪ್ರಯತ್ನ ನಿನ್ನ ಜನ್ಮ ಸಿದ್ದ ಹಕ್ಕು, ಪ್ರಯತ್ನದಿಂದ ನೀನು ಯಶಸ್ವಿ ಆಗುತ್ತಿಯೋ ಅಥವ ಆಗುವುದಿಲ್ಲವೋ ಆದರೆ ಪ್ರಯತ್ನವು ನಿನ್ನದೇ ಆಗಿರುತ್ತೆ”.
ಆದುದರಿಂದ ಯಾರೂ ಸಹ ತಮ್ಮ ಆತ್ಮ ಭರವಸೆಯನ್ನು ಬಿಡಬಾರದು. ತಂತ್ರ ವಿಜ್ಞಾನ, ತಾರ್ಕಿಕ ಮತ್ತು ಅಧ್ಯಾತ್ಮಿಕ ಮಿಶ್ರಣ. ಆದುದರಿಂದ ತಂತ್ರ ವಿಚಾರಗಳು ಜಡ, ಚುರುಕಿಲ್ಲದ, ಉತ್ಸಾಹ ರಹಿತ, ಮನಸ್ಸಿನ ಅಭಾವ ಮತ್ತು ಆಗದೇ ಇರುವಂತವರಿಗೆ ಉತ್ತೇಜನ ಮತ್ತು ಶಕ್ತಿ ತುಂಬುವ ಧರ್ಮ ಗ್ರಂಥ ಆಗಿರುತ್ತದೆ.
ಇದನ್ನು ಓದಿ: “ಅಪಸ್ಮಾರ – ಆರ್ಗಾಸ್ಮಿಕ್ ಎಪಿಲೆಪ್ಸಿ – ಜಡತ್ವ – ವೆಲಕಮ್ ವಾತ್ಸಾಯಾನ”
ತಂತ್ರಯೋಗದ ಮೂಲ ಉದ್ದೇಶ,
“ಮನುಷ್ಯ ಎಂಬುವನು ಯಾವಾಗಲು ಸಂಚಲನ ಶೀಲಾ ವ್ಯಕ್ತಿ. ಇವನು ನಿಂತು ಹಿಂದೆ ನೋಡಿದರೆ ಈತನನ್ನು ನಂಬಬಹುದೇ ಎನ್ನುವ ಅನುಮಾನ ಹುಟ್ಟುತ್ತದೆ. ಕಾರಣವಿಷ್ಟೆ, ನಾವು ನಿಂತು ನೋಡುವುದು ಯಾರನ್ನು? ಅವನು ನನಗಿಂತ ಹೆಚ್ಚು ಸಂಪಾದನೆ ಮಾಡಿದ್ದಾನಾ? ಮಾಡಿದ್ದರೆ ಅಸೂಯೆ. ಮಾಡದೆ ಇದ್ದರೆ ಸಂತೋಷ”.
ಈ ಸಲಕರಣೆಗಳು ಮನಸ್ಸಿನಿಂದ ಕಿತ್ತು ಮಾನವೀಯತೆಯ ಸಲಕರಣಾ ಮಾರ್ಗದ ಕಡೆ ನಿರಂತರವಾಗಿ ಸಾಗಬೇಕು.

ತಂತ್ರ ಗ್ರಂಥ, ಕಾಮ ಸೂತ್ರದಿಂದ ಒಳಗೊಂಡಿದ್ದು ಕೆಲವರು ಈ ತಂತ್ರದ ವಿಚಾರವನ್ನು ಕಾಮ ಸ್ವತಂತ್ರ ಎಂದು ಬಿಂಬಿಸುತ್ತಿರುವರು. ಇದು ಅಸಹ್ಯಕರವಾದ ಕಲ್ಪನೆ. ಈ ಗ್ರಂಥಗಳಲ್ಲಿ ಭೌತಿಕವಾಗಿ ಹುಟ್ಟು, ಬದುಕು ಮತ್ತು ಸಾವಿನ “ಚಕ್ರ” ವಿವರಿಸಲಾಗಿದೆ. ಈ ಚಕ್ರ ಸಿದ್ದಾಂತ ತಟಸ್ಥ ಆಗುವುದಿಲ್ಲ. ಆದರೆ ನಾವಿಲ್ಲ ಅಂದರೆ ಪ್ರಪಂಚ ಇರುವುದಿಲ್ಲ. ತಂತ್ರ ವಿಜ್ಞಾನದಲ್ಲಿ ಜೀವಿ ಇಲ್ಲದೇ ವಿಶ್ವ ಇರಬಹುದು ಎನ್ನುವ ಕಲ್ಪನೆ ಇಲ್ಲವೇ ಇಲ್ಲ. ಇಂದು ಸಮಸ್ತ ವಿಶ್ವ ಅರಿವಿ(ಜ್ಞಾನ)ನಿಂದ ನಿಂತಿದೆ. ಅರಿಯುವನೇ ಇಲ್ಲದಿದ್ದಾಗ ಯಾವ ಪ್ರಪಂಚ ಅಥವ ವಿಶ್ವ?
“ಕಾಲ” ಸಮಯ, ಮತ್ತು “ಜಗ” ಬೈರವ. ನಮ್ಮ ಹಿಂದೂ ಧರ್ಮದಲ್ಲಿ ಕಾಲವನ್ನು ಮತ್ತು ಜಗವನ್ನು ಆರಾಧಿಸಲ್ಪಟ್ಟಿದೆ. ಈ ಪೂಜಾ ಪದ್ದತಿಯನ್ನು ಅನಾವರಣ ಮಾಡಿದಾಗ ನನಗೆ ಅನ್ನಿಸುವ ತರ್ಕ,
“ಸಮಯದ ಏಕಾಂಶ ‘ಕ್ಷಣ’. ಪ್ರಪಂಚದ ವಿಶಾಲ ಜಗದಲ್ಲಿ ಕ್ಷಣ ಕ್ಷಣಕ್ಕೂ ಅಸಂಖ್ಯ ಜೀವಿಗಳಿಂದ, ನಿರಂತರ ಪ್ರೇಮೋತ್ಸವ ಮತ್ತು ಮಿಲನೋತ್ವವ ಆಗುತ್ತಿರುತ್ತದೆ. ಹೀಗೆ, ಕುಲ ವೃದ್ಧಿ. ಕಾಲ ಕಾಲಕ್ಕೂ, ಅರಿವು (ಶಿವ) ಮತ್ತು ಶಕ್ತಿ (ಪಾರ್ವತಿ) ಸಮ್ಮಿಲನದಿಂದ ಮತ್ತೆ ಮತ್ತೆ ಹುಟ್ಟು”.
ಈ ಸಿದ್ದಾಂತ “ಕಾಲ ಬೈರವ ವೈಜ್ಞಾನ್” ತಂತ್ರ ಗ್ರಂಥದ ಅಂಶ. …
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

