ಟಾಟಾ–ಏರ್‌ಬಸ್ ಜಂಟಿಯಾಗಿ H125 ಹೆಲಿಕಾಪ್ಟರ್‌ ನಿರ್ಮಾಣಕ್ಕೆ ಮುಂದಾಗಿವೆ

ಟಾಟಾ ಗ್ರೂಪ್ ಮತ್ತು ಏರ್‌ಬಸ್ ಕರ್ನಾಟಕದ ಕೋಲಾರದಲ್ಲಿ ದೇಶದ ಮೊದಲ ಖಾಸಗಿ H125 ಹೆಲಿಕಾಪ್ಟರ್ ಉತ್ಪಾದನಾ ಘಟಕ ಸ್ಥಾಪಿಸುತ್ತಿವೆ. 2027ರ ಆರಂಭಕ್ಕೆ ಸಂಪೂರ್ಣ ಭಾರತದಲ್ಲಿ ತಯಾರಾದ ಮೊದಲ ಹೆಲಿಕಾಪ್ಟರ್ ವಿತರಣೆಯ ಗುರಿಯನ್ನು ಕಂಪನಿಗಳು ಹೊಂದಿವೆ.