ತುಮಕೂರು:ಭಾರತದ 50 ನಗರಗಳಲ್ಲಿ ಟಾಟಾ ಐಪಿಲ್ ಕ್ರಿಕೆಟ್ ನ್ನು ಎಲ್.ಐ.ಡಿಗಳ ದೊಡ್ಡ ಪರದೆಗಳ ಮೇಲೆ ತೋರಿಸಲಾಗುವುದು,ಹಾಗೇ ಕರ್ನಾಟಕದ 4 ಕಡೆ ನಡೆಯಲಿದ್ದು ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಏಪ್ರಿಲ್ 26 ಮತ್ತು 27ರಂದು ಬೃಹತ್ ಎಲ್.ಐ.ಡಿ.ಪರದೆ ಮೇಲೆ ಕ್ರಿಕೆಟ್ ಆಟವನ್ನು ಲೈವ್ ತೋರಿಸುತ್ತಿದ್ದು ಈ ಕ್ರಿಕೆಟ್ ವೀಕ್ಷಣೆಗೆ ಸುಮಾರು 8 ಸಾವಿರ ಜನ ಸೇರುವ ನಿರೀಕ್ಷೆ ಇದೆ,ಮಕ್ಕಳಿಗೆ ಸಹ ವಿವಿಧ ಬಗೆಯ ಆಟಗಳನ್ನು ಆಡಲು ವ್ಯವಸ್ಥೆ ಮಾಡಿದ್ದು,ತಿಂಡಿ-ತಿನಿಸುಗಳನ್ನು ತಿನ್ನಲು ಸ್ಟಾಲ್ ಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ,ದ್ವಿಚಕ್ರ ವಾಹನ,ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ,ಜನರನ್ನು ನಿಯಂತ್ರಿಸಲು ಸುಮಾರು 25 ಜನ ಸೆಕ್ಯುರಿಟಿಗಳನ್ನು ನೇಮಕ ಮಾಡಲಾಗಿದೆ ಈ ಎಲ್ಲ ಖರ್ಚು ವೆಚ್ಚಗಳನ್ನು ಬಿಸಿಸಿಐ ನೀಡುತ್ತಿದೆ,ಇದು ತುಮಕೂರಿನಲ್ಲಿ 4ನೇ ಬಾರಿ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ತುಮಕೂರು ಇನ ಚಾರ್ಜ್ ಸುನಿಲ್ ಪಟೇಲ್ ರವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಿಸಿಸಿಐ ಪ್ರತಿನಿಧಿ ಅಮಿತ್ ಸಿದ್ದೇಶ್ವರ್ ರವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ಕ್ರಿಕೆಟ್ ನ್ನು ಬಿಸಿಸಿಐ ಮತ್ತು ಕೆ.ಸಿ.ಎಸ್.ಎ. ಸ್ಟೇಡಿಯಂನಲ್ಲಿ ನೋಡುವಂತೆ ನೋಡಬಹುದು ಜೊತೆಗೆ ಸ್ನೇಹಿತರು,ಬಂಧುಗಳು,ಕುಟುಂಬ ಸದಸ್ಯರ ಜೊತೆ ಕೂತು ಪಂದ್ಯಗಳನ್ನು ವೀಕ್ಷಣೆ ಮಾಡಿ ಖುಷಿ ಪಡಬಹುದು ಎಂದು ತಿಳಿಸಿದರು.
