ಇಂದಿನ ಆಧುನಿಕ ಬದುಕಿನಲ್ಲಿ ಮತ್ತು ಯಾಂತ್ರಿಕ ಜೀವನದಲ್ಲಿ ನಿಷೇಧವೆಲ್ಲಾ ಸ್ವತಂತ್ರ ಆಗಿವೆ ಆದರೆ ಸತ್ಯವನ್ನು ನಿಯಂತ್ರಣ ಮಾಡುತ್ತಾರೆ. ಜೀವಿತಾವಧಿಯಲ್ಲಿ ಒಪ್ಪುವಂತಾದ್ದು ಇಲ್ಲ ಆದರೆ ಲಂಚಾವತಾರ ಅನಿವಾರ್ಯ ಆಗಿದೆ. ಮನೆಯಲ್ಲೇ ಇದ್ದು ತಿನ್ನುವ ಅಹಾರವನ್ನು ಕ್ಷಣಾರ್ಧದಲ್ಲಿ ತರಸಿಕೊಳ್ಳಬಹುದು ಆದರೆ ತುರ್ತು ಚಿಕಿತ್ಸಾ ವಾಹನ ಅಥವ ಅರಕ್ಷಕರನ್ನು ಕರೆಸಿಕೊಳ್ಳಬೇಕಾದರೆ ಸಾಹಸವೇ ಸರಿ.
ಮಾನವ ತನ್ನ ಮೊಬೈಲ್ ಫೋನ್ ಕಳೆದುಕೊಂಡರೆ ದುಃಖಿತನಾಗುತ್ತಾನೆ ಆದರೆ ತನ್ನ ಘನತೆ ಗೌರವಗಳನ್ನು ತುಂಬಾ ಸಲೀಸಾಗಿ ಕಳೆದುಕೊಂಡರೂ ದುಃಖ ಪಡವುದಿಲ್ಲ. ಇಂದಿನ ಮಾನವನ ಮೌಲ್ಯ, ಉಡುಗೆಯ ಉಡುಪಿನ ಮೇಲೆ ನಿರ್ಧಾರಿಸಲಾಗುತ್ತೆ ಆದರೆ ಅವನ ಮನಸ್ಸಿನ ಸುಂದರತಗೆ ಕಿಮ್ಮತ್ತಿಲ್ಲ. ಈಗ ನಿಷ್ಠೆ ಮತ್ತು ನಿಯತ್ತಿಗೆ ಎಲ್ಲಿದೆ ಬೆಲೆ? ಆದರೆ ಮೋಸ ಮತ್ತು ದ್ರೋಹ ಮಾಡುವವರಿಗೆ ಮಾತ್ರ ಬೆಲೆ. ಗೌರವಕ್ಕಿಂತ ಮಿಗಿಲಾದ್ದು ಮತ್ತೊಂದಿಲ್ಲ ಆದರೆ ನಾಚಿಕೆ, ಅಪಮಾನ, ಲಜ್ಜೆಗಳನ್ನು ಅವರವರ ತೋಳಿನ ಮೇಲಿನ ಬಿಲ್ಲೆಗಳಾಗಿ ರಾರಾಜಿಸುತ್ತಿವೆ. ಇವತ್ತು ದುಡ್ಡೇ ದೊಡ್ಡಪ್ಪ ಹಾಗೆಯೇ ದುರಾಸೆಗಳನ್ನು ಸಹ ಪೂಜೆ ಮಾಡುತ್ತಾರೆ.
ನಮ್ಮ ಸಂಸ್ಕೃತಿಯನ್ನು ಆಡಿಕೊಳ್ಳುತ್ತಾರೆ ಆದರೆ ಅನೈತಿಕತೆ ಮತ್ತು ದುರ್ನಡತೆಗಳನ್ನು ಮೋಜು ಮಸ್ತಿ ಎಂದುಕೊಳ್ಳುತ್ತಾರೆ. ಸುಳ್ಳನ್ನು ಬುದ್ದಿವಂತಿಕೆ ಎಂದು ಸಮರ್ಥಿಸುತ್ತಾರೆ ಮತ್ತು ಲಜ್ಜೆಗೇಡಿತನವನ್ನು ಚತುರತೆ ಎಂದೆನ್ನುತ್ತಾರೆ. ಸಾಮಾನ್ಯ ಬದುಕನ್ನು ಹಳತು ಎಂದು ಹೇಳುತ್ತಾರೆ ಆದರೆ ಬೆತ್ತಲೆಯನ್ನು ಸ್ವಾಗತ ಮಾಡುತ್ತಾರೆ. ಸೊಕ್ಕಿದವನನ್ನು ಧೈರ್ಯವಂತ ಎಂದು ಉಬ್ಬಿಸುತ್ತಾರೆ ಆದರೆ ಸೀದಾ ಸಾದ ಮನುಷ್ಯನನ್ನು ದುರ್ಬಲ ಎಂದು ಮಾತನಾಡಿಕೊಳ್ಳುತ್ತಾರೆ. ಸ್ವಾಮಿನಿಷ್ಠೆ ಈವತ್ತಿನ ಜಗತ್ತಿಗೆ ಮೂರ್ಖತನ ಮತ್ತು ವಂಚನೆಯನ್ನು ಕಾರ್ಯತಂತ್ರ ಎಂದೆನ್ನುತ್ತಾರೆ. ಇಂದು ನಕಲಿತನವನ್ನು ಆರಾಧಿಸುತ್ತಾರೆ ಮತ್ತು ನಿಜವನ್ನು ಕಡೆಗಣಿಸುತ್ತಾರೆ.
ಪ್ರಭಾವಿಗಳು ಯುವಪಳಿಗೆಯ ಮನಸ್ಸುಗಳನ್ನು ರೂಪಿಸುತ್ತಾರೆ ಆದರೆ ಯುವಕರು ಪೋಷಕರ ಮಾತನ್ನು ಕೇಳುವುದೇ ಇಲ್ಲ. ಸಾಮಾಜಿಕ ತಾಣಗಳ ಲೈಕ್ಸ್ ಇಂದು ತಮ್ಮ ಆತ್ಮ ಮಾನ್ಯತೆ ಗಳಸಿಕೊಳ್ಳುತ್ತೆ ಎಂದು ಕೊಂಡಿದ್ದಾರೆ ಮತ್ತು ತಮ್ಮ ರೀಲ್ಸ ವೀಕ್ಷಣೆಯನ್ನು ಯಶಸ್ಸು ಎಂದು ತಿಳಿದುಕೊಂಡಿದ್ದಾರೆ. ಅಂತರ್ಜಾಲದ ಓಳಗೆ ನಾವು ಬೆಸದಿದ್ದೇವೆ ಎಂದುಕೊಂಡರೂ ಏಕಾಂಗಿತನದ ಸಾಂಕ್ರಾಮಿಕ ರೋಗದಿಂದ ಬಳಲುತ್ತಿಲ್ಲವೇ? ಇಂದು ಸರಿ ತಪ್ಪಾಗಿ ಕಾಣುಸುತಿದೆ ಆದರೆ ತಪ್ಪು ಸರಿ ಎಂದು ವಿಮರ್ಶಿಸುತ್ತಾರೆ. ಇಂದು ಪ್ರೇಮ ಎಂಬುದು ವ್ಯವಹಾರ ಆಗಿದೆ ಮತ್ತು ಪ್ರೇಮದ ಬದ್ದತೆ ತುಂಬಾ ದುಬಾರಿ ಆಗಿದೆ. ಬಾಂಧವ್ಯ ತಮ್ಮ ತಮ್ಮ ಅನುಕೂಲಕ್ಕಾಗಿ ಇದೆ ಆದರೆ ದೈವತ್ವದ ಬಾಂಧವ್ಯವನ್ನು ಲೇವಡಿ ಮಾಡುತ್ತಾರೆ.
ಇಂದು ದುಡ್ಡು ಇದ್ದವನಿಗೆ ಕಾಮ, ಕವಡೆ ಕಾಸು ಆದರೆ ಪವಿತ್ರ ಪ್ರೀತಿ ಸೂಕ್ಷ್ಮ ದರ್ಶಕದಲ್ಲಿ ನೋಡಬೇಕಾಗಿದೆ. ಸತ್ಯ ದರ್ಶನಗಳು ಆಕ್ರಮಣಕಾರಿ ಆಗಿವೆ ಮತ್ತು ಸುಳ್ಳು ಸಬಲೀಕರಣ ಆಗಿವೆ. ಇಂದು ಅಶಕ್ತನನ್ನು ಹಿಂಸಿಸುತ್ತಾರೆ ಆದರೆ ದರುಳನನ್ನು ತಮ್ಮ ಭುಜದ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುತ್ತಾರೆ. ಈಗ ಗೌರವ ಕೊಳ್ಳುವಂತಾದ್ದು ಆದರೆ ಗಳಿಸುವುದು ಅಲ್ಲ. ಪಾಪವನ್ನು ದುಡ್ಡಿನಿಂದ ಮುಚ್ಚುತ್ತಾರೆ ಮತ್ತು ತೋಳ್ಬಲದಿಂದ ನ್ಯಾಯವನ್ನು ಸಹ ಖರೀದಿಸುತ್ತಾರೆ. ಪ್ರಜ್ಞಾವಂತನಿಗೆ ಪ್ರಜ್ಞೆ ಹೊರೆ ಆಗಿದೆ ಮತ್ತು ಸಮಗ್ರತೆ ಹೊಸ ಯುವಕರಿಗೆ ಮಾತ್ರ.
ಈ ಪ್ರಪಂಚವೇ ಭ್ರಮೆಯ ಗೂಡಾಗಿದೆ. ಕೃತಕ ಬುದ್ದಿಮತೆಯಿಂದ ನಾವು ಬಂಧಿಗಳಾಗುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯದ ಬದುಕನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಗಮನ ಮತ್ತು ಗ್ರಹಿಕೆ ಹಾಳಾಗುತ್ತಿದ್ದಾವೆ. ಮನಸ್ಸಿನ ಸೌಕರ್ಯ ಅಸಮತೋಲನ ಆಗುತ್ತಿವೆ. ನಮ್ಮ ನೆಮ್ಮದಿ ಮತ್ತು ಆಸೆಗಳು ಕಮ್ಮಿ ಆಗುತ್ತಿವೆ. ನಾವು ಹೊಣೆಗಾರಿಕೆಗಳಿಂದ ಮತ್ತು ಸ್ವಾವಲಂಬಿತನದಿಂದ ವಂಚತರಾಗುತ್ತಿದ್ದೇವೆ. ಯಾಂತ್ರಿಕವಾಗಿ ಎಲ್ಲಾ ಸೌಲಭ್ಯಗಳು ಇದ್ದರೂ ವೀವೇಕ ಇಲ್ಲದಂತಾಗಿದೆ.
ಎಲ್ಲರೂ ಮಾತನಾಡುವವರೆ, ಆದರೆ ಯಾರು ಚರ್ಚೆ ಮಾಡುವುದಿಲ್ಲ. ವಿಪರ್ಯಾಸ ಅಂದರೆ ನಾವು ಜೀವಂತ ಇದ್ದೀವಿ ಎನ್ನಿಸಿದರೂ ಭಾವ ಇಲ್ಲದಂತಾಗಿದೆ. ಬೆಳವಣಿಗೆ ಮತ್ತು ಅಭಿವೃದ್ಧಿ ಸುಮ್ಮನೆ ಬರುವುದಿಲ್ಲ. ಈ ಬೆಳವಣಿಗೆ ಬೆಳಯಬೇಕಂದರೆ ಕಠಿಣ ಶ್ರಮ, ಸತ್ಯ ಅನ್ವೇಷಣೆ ಮತ್ತು ನಕಾರಾತ್ಮಕ ಚಿಂತನೆಗಳ ಮುಕ್ತಿ ಇವುಗಳಿಂದ ಮಾತ್ರ ಸಾಧ್ಯ.
ಇವುಗಳಿಂದ ಹೊರ ಬರಲು ಸಾಧ್ಯವೇ?
ನಾನು ಲೇಖನಿಸಿದ ಇಪ್ಪತೈದು ಕಂತುಗಳ ಅಧ್ಯಾತ್ಮಿಕ “ತಂತ್ರ – ಜೀವವೊಂದು ಯಂತ್ರ ಶಾಸ್ತ್ರವೇ – ಹೊಸ ಅನಾವರಣ” ಸಧ್ಯದಲ್ಲೇ ವಾರಕ್ಕೊಮ್ಮೆ ಪ್ರಕಟ ಆಗಲಿದೆ. ಓದಿ, ವಿಮರ್ಶಸಿ, ಟಿಪ್ಪಣಿಸಿ.. ಓದುಗರು ತಮ್ಮ ಜೀವವನದಲ್ಲಿ ನಾನು ತಿಳಿಸಲಾದ ಮೆದುಳಿನ ಸಲಕರಣೆಗಳನ್ನು ಅಳವಡಿಸಿ ಪರಿವರ್ತನೆ ಆದರೆ ಅದೇ ನನಗೆ ಸ್ವರ್ಗಾನುಭವ……..!!!!
– ಡಾ|| ಎ.ಎಂ.ನಾಗೇಶ್
