ಈವತ್ತಿನ ಭಾಷೆಯನ್ನು ಕೇಂದ್ರಿಕ್ರೂಡಿಸಿ ರೂಪಿಸಿದ ಗೌರವ ನಮ್ಮ ಹಿಂದಿನ ತತ್ವ ಜ್ಞಾನಿಗಳಿಗೆ ಸಲ್ಲಬೇಕು. ನಾನು ಇಲ್ಲಿ ವಿವರಿಸುವ ಭಾಷೆಯ ಶಬ್ದಾರ್ಥದ ದೃಷ್ಟಿಕೋನ ಮೂಲತತ್ವಕ್ಕೆ ಹೋಲಿಸಿದಾಗ ಅಲಂಕಾರ ಅರ್ಥದಿಂದ ಕೂಡಿದ್ದಾಗಿದೆ. ಈ ಕಾರಣದಿಂದ ನಾನು ಇಂಗ್ಲಿಷ್ ಭಾಷೆಯನ್ನು ಆರಿಸಿಕೊಂಡಿದ್ದೇನೆ. ಈ ಲೇಖನದ ಶಿರೋನಾಮ “ದಿ ಸಿ ಫಾಕ್ಟರ್”. ನಾನು ಲಾಕ್ಷನಿಕವಾಗಿ ಈ ಅಕ್ಷರದಿಂದ ಶುರು ಆಗುವ ಎರಡು ಇಂಗ್ಲಿಷ್ ಪದಗಳನ್ನು “ಕನ್ಸಪ್ಷನ್ (ಪರಿಕಲ್ಪನೆ ಅಥವಾ ಧಾರಣೆ)” ಮತ್ತು “ಕ್ರೌಚಿಂಗ್ (ಬಗ್ಗಿದ)” ತೆಗೆದುಕೊಂಡಿರುವೆ. ಈ “ಸಿ” ಅಕ್ಷರದ ಬಗ್ಗೆ ನನಗೆ ಕುತೂಹಲ ಇದ್ದ ಕಾರಣ, ಗರ್ಭಾವಸ್ಥೆಯಲ್ಲಿರುವ ಮಗುವಿನ ಶಿಲ್ಪಕಲೆಯು ಸಹ ಈ “ಸಿ” ವಿನ್ಯಾಸದಲ್ಲೆ ಇರುತ್ತದೆ.
ನಮಗೆ ಯಾವುದಾದರೂ ಶಾರೀರಿಕ ಸಮಸ್ಯೆ ಆದರೆ ಚಿಕಿತ್ಸೆಗೆ ಸಿದಾ ಆಸ್ಪತ್ರೆಗೆ ಹೋಗುತ್ತೇವೆ. ಆದರೇ ಮನುಷ್ಯನಿಗೆ ಮಂಕು ಬಡಿದಾಗ ಅಥವಾ ಖಿನ್ನತೆಗೆ ಒಳಗದಾಗ ಆತನ ಭಂಗಿ “ಸಿ” ತರಹ ಮುದರಿ ಮೂಲೆಯಲ್ಲಿ ಕೂತಿರುತ್ತಾನೆ. ನನ್ನಲ್ಲಿಗೆ “ಮ್ಯಾನಿಕ್ ಡಿಪ್ರಸಿವ್ ಸೈಕೋಸಿಸ್” ರೋಗಿಗಳ್ನು ಕರೆತರುತ್ತಾರೆ. ಕರೆತಂದಾಗ ಅವರ ಭಂಗಿ “ಸಿ” ಆಕಾರದಲ್ಲಿ ಇದ್ದು ಮೂರು ಪ್ರಮುಖ ಚಿಹ್ನೆಗಳನ್ನು ಅವರಲ್ಲಿ ಕಾಣಬಹುದು. ಅವುಗಳು “Poverty of Thoughts ( ಬರಿದಾಗಿರುವ ಯೋಚನೆಗಳು), “Psycho Motar Retardation (ಮನಸ್ಸು ಮತ್ತು ಶರೀರಗಳ ಕಾರ್ಯ ಕುಂಟಿತವಾಗಿರುವುದು)” ಮತ್ತು “Thoughts of Suicide(ಪದೇ ಪದೇ ಸಾಯಬೇಕೆಂಬಾ ಯೋಚನೆಗಳು)”.
ನಾನು ಈ ಮನೋ ಸಮಸ್ಯೆಯನ್ನು ವಿವರಿಸುವ ಉದ್ದೇಶ ನಾವು ಎಂದು ಮಿಲನೋತ್ಸವದಲ್ಲಿ ಪಾಲುಗೊಳ್ಳುತ್ತೇವೋ ಆಗ ತುಟ್ಟ ತುದಿಯ ಉತ್ಸುಕದ ಭಂಗಿ “ಸಿ” ಆಗಿರುತ್ತದೆ. ಅಂದರೆ “ಬಾಗುವಿಕೆ”. ಈ ಕ್ಷಣ ಕ್ರಿಯೆಯನ್ನು ಇಂಗ್ಲಿಷ್ನಲ್ಲಿ “flexion reflex (ಬಾಗೋ ಪ್ರತಿಫಲನ)” ಎಂದು ಕರೆಯುವೆವು. ಈ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳುವುದು ಬೇಡ. ಈ ತರ್ಕ ನನ್ನ ವೈಯಕ್ತಿಕ.
“ಸಿ” ಅಕ್ಷರವನ್ನು ಸಮಾನಾಂತರವಾಗಿ ನೋಡಿದಾಗ ಹುಟ್ಟುವಾಗ “ಸಿ”, ಸಾಯುವಾಗ “ಸಿ”. ಆದರೆ ನಾವು ಬದುಕಿದ್ದಾಗ ಎದೆಯನ್ನು ಉಬ್ಬಿಸಿ ಅಹಂಕಾರವನ್ನು ಮೆರೆಯುತ್ತೇವೆ. ಎಲ್ಲವನ್ನು ಬಾಚಿಕೊಳ್ಳುವ ಹುನ್ನಾರದಲ್ಲಿ ಇರುತ್ತೆವೆ. ಹಿರಿಯರಿದ್ದಾರೆ, ಕಿರಿಯರಿದ್ದಾರೆ ಮತ್ತು ವಯಾಸ್ಸಾದವರೂ ಇದ್ದಾರೆ, ಸ್ವಲ್ಪ ಬಗ್ಗಿ ನೆಡೆ ಎಂದರೂ ಕೇಳುವುದಿಲ್ಲ. ಸಂಪಾದನೆ ಮಾಡಿದ್ದನ್ನು ವಿಸ್ತರಿಸುವ ಯೋಚನೆಯಲ್ಲೇ ಇರುತ್ತೇವೆ.
ಈ ಸಮಯದಲ್ಲಿ ನನ್ನದೇ ಆದಂತಾ ಚಿಕಿತ್ಸಾ ವಿಧಾನವನ್ನು ವಿಶ್ಲೇಷಿಸುತ್ತೇನೆ. ಈ ವಿಷಯ ನನ್ನ ವೈಯಕ್ತಿಕ ವಿಚಾರ. ನನ್ನ ವೃತ್ತಿ ನಿರತನಾದ ಸಂದರ್ಭದಲ್ಲಿ ಕೆಲವರು “Premature Ejaculation (ಶೀಘ್ರ ಸ್ಖಲನ)” ಎಂಬ ಲೈಂಗಿಕ ಸಮಸ್ಯೆಗಳಿಗೆ ಬರುತಿದ್ದರು. ಅವರಿಗೆ ಅನೇಕ ತರಹದ ಆತ್ಮ ಸಮಾಲೋಚನೆ ನೀಡಿ “ಮಾಸ್ಟರ್ ಅಂಡ್ ಜಾನ್ಸನ್” ಚಿಕಿತ್ಸಾ ವಿಧಾನವನ್ನು ನೀಡುತ್ತಿದ್ದೆ. ಮುಖ್ಯವಾಗಿ ಈ ಸಮಸ್ಯೆಯ ಕಾರಣ ಗಾಬರಿ ಮತ್ತು ಲೈಂಗಿಕತೆಯನ್ನು ಸರಿಯಾಗಿ ಅರಿಯದೇ ಇರುವುದರಿಂದ. ಈ ತೊಂದರೆಗೆ ಒಳಗಾಗಿರುವರು ತಮ್ಮ ಲೈಂಗಿಕಾಂಗ ಪ್ರಚೋದನೆಗೊಂಡಾಗ ತ್ವರಿತವಾಗಿ “ಸಿ” ಭಂಗಿಯಲ್ಲೇ ಸ್ಕಲನವಾಗಿಬಿಡುತ್ತದೆ. ಈ ತೊಂದರೆಗೆ ಚಿಕಿತ್ಸಾ ವಿಧಾನ ಕಷ್ಟಕರ ಮತ್ತು ಈ ಸಮಸ್ಯೆ ಉಳ್ಳವರು ನಮ್ಮ ಆತ್ಮ ಸಮಾಲೋಚನೆಯ ಸ್ಟೇಜಸ್ (Stages) ಸರಿಯಾಗಿ ಪಾಲಿಸುವುದಿಲ್ಲ. ನನಗೆ “ಸಿ” ಫ್ಯಾಕ್ಟರ್ ಬಗ್ಗೆ ಆಲೋಚನೆ ಮಾಡುತ್ತಿದ್ದಾಗ ಯಾವುದಾದರೂ ಸುಲಭದ ಚಿಕಿತ್ಸಾ ಪದ್ಧತಿ ಇದೆಯೇ ಎಂದು ಯೋಚಿಸುತ್ತಿದ್ದಾಗ ನನಗೆ ಹೊಳೆದಿದ್ದು ನಮ್ಮ ಪ್ರಜಾಪ್ರಭುತ್ವ. ಈ ಸಂಯುಕ್ತ ವ್ಯವಸ್ಥೆಯಲ್ಲಿ ‘ಪಕ್ಷ’ ಅಂತ ಇರಬೇಕಾದರೆ ‘ಪ್ರತಿ ಪಕ್ಷ’ ಇರಬೇಕಲ್ಲವೆ. ಹೀಗಿರುವಾಗ ‘Flexion (ಸಂಕುಚಿತ)’ ವಿರುದ್ಧ ಪದ ‘Extend (ಹಿಗ್ಗಿಸು)’. ಶೀಘ್ರ ಸ್ಕಲನ ಸಮಸ್ಯೆ ಇರುವಂತಾ ವ್ಯಕ್ತಿಗಳಿಗೆ ಶರೀರವನ್ನು extend ಮಾಡಿದಾಗ ಶೀಘ್ರ ಸ್ಕಲನ ಕಮ್ಮಿ ಆಗಬಹುದೇನೋ? ಬಹು ಸುಲಭದ ಚಿಕಿತ್ಸಾ ವಿಧಾನ. Master and Janson technique ಗೆ ಖರ್ಚು ಹೆಚ್ಚು ಮತ್ತು ತುಂಬಾ ಸಮಯ ತೆಗೆದುಕೊಳ್ಳುವುದು.
ಮೇಲೆ ತಿಳಿಸಿದ ವಿಚಾರದ ಉದ್ದೇಶ ನಾನು ಇನ್ನೊಂದು ಅರ್ಥದಲ್ಲಿ ವಿವರಿಸುವೆ. ಮನೋಧರ್ಮದ ಆಯಾಮದಲ್ಲಿ ಎರಡು ಭಾವನೆಗಳನ್ನು ನೋಡಬಹುದು. ಒಂದು ಸಂಕುಚಿತ (ಫ್ಲೆಕ್ಷನ್), ಇನ್ನೊಂದು ವಿಶಾಲವಾದ (ಎಕ್ಸ್ಟೆನ್ಸನ್) ಮನೋಭಾವನೆಗಳು. ಈ ಯುಗದಲ್ಲಿ ಮಾನವರಿಗೆ ಕಾರಣಾಂತರಗಳಿಂದ ಸಂಕುಚಿತ ಮನೋಭಾವವೆ ಹೆಚ್ಚು. ವಿಶಾಲ ಸಹೃದಯ ಕೆಲವರಿಗೆ ಮಾತ್ರ ಸೀಮಿತವಾಗಿದೆ. ಇಂತಹ ಸ್ಥಿತಿಯನ್ನು ಸಂಪಾದನೆ ಮಾಡಬೇಕಾದರೆ ಸಾಧನಾ ಯುಕ್ತನಾಗಬೇಕು. ಇದು ಸುಮ್ಮನೆ ಬರುವುದಿಲ್ಲ. ಈ ಅವಸ್ಥೆಯನ್ನು ಸರ್ವ ಶ್ರೇಷ್ಠ ಬುದ್ಧನಲ್ಲಿ ಕಾಣಬಹುದು. ಬುದ್ದನಾಗಬೇಕಾದರೆ ತಾಳ್ಮೆ, ಪರಿಶ್ರಮ ಮತ್ತು ಶ್ರದ್ಧೆ ಇರಬೇಕು. ಇಂತಹ ಸ್ಥಿತಿಯನ್ನು ಆಸ್ತಿಯಾಗಿಸಬೇಕಾದರೆ ಜ್ಞಾನವುಳ್ಳವನಾಗಿರಬೇಕು. ಮೊದಲನೆ ವಿಷಯವನ್ನು “Acute (ಅಕ್ಯೂಟ್)” ಅಥವ ಎರಡನೆ ವಿಷಯವನ್ನು “Obtuse (ಅಬ್ಟ್ಯೂಸ್)” ಯೋಚನೆ ಅಂತಲೂ ಕರೆಯಬಹುದು.
ಪತಂಜಲಿಯ ಕ್ರಿಯಾ ಯೋಗವು ಇದನ್ನೇ ಹೇಳುವದು. ಈ ಕ್ರಿಯಾ ಯೋಗದ ತ್ರೈ ತತ್ವವು “ತಪಸ್, ಸ್ವ ಅಧ್ಯಾಯ ಮತ್ತು ಈಶ್ವರ ಪ್ರಾಣಿಧಾನಹ”. ಯಾರು ತಪಸ್ಸು (ಶ್ರದ್ಧೆ) ಮಾಡುತ್ತಾರೂ, ಯಾರು ಸ್ವಯಂ ಪ್ರೇರಣೆಯಿಂದ ಜ್ಞಾನಿಗಳಾಗುತ್ತಾರೋ ಮತ್ತು ಆ ಸೃಷ್ಟಿಕರ್ತನಿಗೆ ತಲೆ ಬಾಗುತ್ತಾರೋ, ಇವರುಗಳು ವಿಶಾಲವಾದಂತಾ ಮನಸ್ಸು ಮತ್ತು ಹೃದಯ ಹೊಂದಿರುತ್ತಾರೆ.
ಈವತ್ತಿನ ದಿನಗಳಲ್ಲಿ ಭಕ್ತಿ ಹುಡಕಬೇಕಿದೆ. ಹೆಣ್ಣು ಗಂಡಿನ ದೈವಿಕ ಮಿಥನೋತ್ಸವಾಗಬೇಕಾದರೆ ಇಬ್ಬರ ನಡುವೆ ಮಾನಸಿಕ ಭಕ್ತಿ ಅಪಾರವಾಗಿ ಇರಬೇಕು.ಇಂದಿನ ಮಾಹಿತಿ ಮತ್ತು ತಾಂತ್ರಿಕ ಯುಗದಲ್ಲಿ ಮನೋ ಉಲ್ಲಾಸಗಳು ಕಾಣದಂತೆ ಆಗಿವೆ. ಇವುಗಳಿಂದ ಕುಟುಂಬ ವ್ಯವಸ್ಥೆಗಳು ಹದಗೆಟ್ಟಿವೆ.
ಈ ಪ್ರಪಂಚವು ವಿರುದ್ಧ ಅವಸ್ಥೆಯಲ್ಲೇ ನಿಂತಿದೆ. ಎಲ್ಲಿ ಬಿಳಿ, ಅಲ್ಲಿ ಕಪ್ಪು ಇರಲೇ ಬೇಕು. ಹೆಣ್ಣು ಮತ್ತು ಗಂಡಿನ ಸಂಸಾರವಿದ್ದರೆ ಮಾತ್ರ ಈ ಪ್ರಪಂಚ. ಇಲ್ಲ ಅಂದರೆ ಅಂದೇ ಪ್ರಳಯ. “ತಂತ್ರ” ವಿಜ್ಞಾನದಲ್ಲಿ ನಿರ್ಗುಣ ಸಂಪನ್ನನಾದ ಈಶ್ವರನು ನೀಡಿದ ಶಕ್ತಿಯನ್ನು ಶಾಂತಿಯುತ ಪಾರ್ವತಿ ತಾಳ್ಮೆಯಿಂದ ತನ್ನ ಮಡಲಿನಿಂದ ಸ್ವೀಕರಿಸಿ ಈ ವಿಶ್ವದಲ್ಲಿ ಸಂಸಾರಕ್ಕೆ ಕಾರಣಳಾದಳು ಎಂಬುದರ ವಾಖ್ಯಾನಗಳು “ತಂತ್ರ ವಿಜ್ಞಾನ” ಗ್ರಂಥಗಳಲ್ಲಿ ಓದಲು ಸಿಗುವುದು. ಈ ವಿಷಯವನ್ನು ಭಗವಾನ್ ಬುದ್ಧನು ತನ್ನ ಹೀನಾಯಾನ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ನಾನು ಇಲ್ಲಿ ವಿವರಿಸಿರುವ ಸದುದ್ದೇಶ ಏನಂದರೆ, ನಾವೆಲ್ಲ ಸಂಕುಚಿತ ಮನೋಭಾವ ಬಿಟ್ಟು ವಿಶಾಲವಾದ ದೃಷ್ಟಿಕೋನದಿಂದ ಯೋಚನೆ ಮಾಡಿದರೆ ಒಳ್ಳೆಯದಲ್ಲವೇ…
ಮುಂದುವರಿಯುವುದು …
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

