
ಹೊಟ್ಟೆಯಲ್ಲಿರುವ ಮಗುವಿನ ಹೊಟ್ಟೆಯಲ್ಲೊಂದು ಭ್ರೂಣ ಪತ್ತೆ
ಬುಲ್ಧಾನ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಿಲ್ಲಾಸ್ಪತ್ರೆಗೆ ಪರೀಕ್ಷೆಗೆಂದು ಬಂದಿದ್ದ ಗರ್ಭಿಣಿಯೊಬ್ಬರ ಹೊಟ್ಟೆಯಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವುದು ಪತ್ತೆಯಾಗಿದೆ.
ಗರ್ಭಿಣಿಯು ಮೂರು ದಿನಗಳ ಹಿಂದೆ ಸೋನೋಗ್ರಫಿಗೆಂದು ಬುಲ್ಧಾನಾ ಜಿಲ್ಲಾಸ್ಪತ್ರೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.
ವೈದ್ಯರು ಮಹಿಳೆಯ ಸೋನೋಗ್ರಫಿ ಮಾಡಿಸಿದಾಗ ಗರ್ಭದಲ್ಲಿದ್ದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಸ್ಪಷ್ಟವಾಗಿ ಗೋಚರಿಸಿತ್ತು. ವೈದ್ಯರು ಯಾವುದೇ ಅಪಾಯವನ್ನು ತೆಗೆದುಕೊಳ್ಳದೆ ಮಹಿಳೆಗೆ ಹೆರಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಹಿಳೆಗೆ 32 ವರ್ಷ ವಯಸ್ಸಾಗಿದ್ದು, ಈಗಾಗಲೇ ಇಬ್ಬರು ಮಕ್ಕಳಿದ್ದಾರೆ.
ಸದ್ಯ ತಾಯಿಯ ಗರ್ಭದಲ್ಲಿ ಭ್ರೂಣವು ಬೆಳವಣಿಗೆಯಾಗುತ್ತಿರುವುದನ್ನು ಕಂಡು ವೈದ್ಯರೂ ಅಚ್ಚರಿಗೊಂಡಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ, ಒಂಬತ್ತು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಮಗು ಬೆಳೆಯುವ ಗರ್ಭಧಾರಣೆಯನ್ನು ‘ಫೀಟ್ ಇನ್ ಫೂಟಸ್’ ಎಂದು ಕರೆಯಲಾಗುತ್ತದೆ.
ಶಸ್ತ್ರಚಿಕಿತ್ಸಕ ಭಗವತ್ ಭೂಸಮರಿ ಪ್ರಕಾರ, ಇದು ಶಿಶುಗಳಲ್ಲಿ ಸಾಮಾನ್ಯ ಘಟನೆಯಾಗಿದೆ. ಇದರಲ್ಲಿ ಒಂದು ಮಗುವಿನ ಹೊಟ್ಟೆಯಲ್ಲಿ ಇನ್ನೊಂದು ಮಗು ಬೆಳೆಯುತ್ತದೆ. ಈ ಅಪರೂಪದ ಘಟನೆಯು ಪ್ರಪಂಚದಾದ್ಯಂತ ಕೇವಲ 200 ಪ್ರಕರಣಗಳಿದ್ದರೆ ಭಾರತದಲ್ಲಿ ಕೇವಲ 15-20 ಪ್ರಕರಣಗಳು ವರದಿಯಾಗಿದೆ. ಆದಾಗ್ಯೂ, ಆ ಮಗುವಿನ ಜನನದ ನಂತರ ಮಗು ಸಮಸ್ಯೆಗಳನ್ನು ಎದುರಿಸಬಹುದು.
ಸದ್ಯ ವೈದ್ಯರು ಯಾವ ರೀತಿಯ ಪರಿಹಾರವನ್ನು ನೀಡುತ್ತಾರೆ ಎಂಬುದು ಈಗ ಕುತೂಹಲಕಾರಿಯಾಗಿದೆ.