ರಾಮನಾಥಪುರ – ಉತ್ತರಾಧಿ ಮಠದಲ್ಲಿ ಶ್ರೀಗುರು ರಾಘವೇಂದ್ರಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಹಾಗೂ ಉತ್ಸವ ಜರುಗಿತು.
ರಾಮನಾಥಪುರದ ಶ್ರೀಮಠದ ಅವರಣದಲ್ಲಿ ಶ್ರೀಗುರುರಾಯರ ಅಷ್ಟಕ್ಷರ ಹೋಮ ಹವನಾಧಿಗಳು, ಸೇರಿದಂತೆ ವಿವಿಧ ಪೂಜೆ, ಧಾರ್ಮಿಕ ಸೇವಾ ಕಾರ್ಯಗಳು ಜರುಗಿದವು. ಶ್ರೀಸ್ವಾಮಿಯವರ ಬೃಂದಾವನಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಬೆಳಿಗ್ಗೆಯಿಂದಲೇ ಭಕ್ತರು ಶ್ರೀಮಠಕ್ಕೆ ಅಗಮಿಸಿ ಭಕ್ತಿಭಾವದಿಂದ , ಅರತಿ ದೀಪ ಬೆಳಗಿಸಿ ಗುರುರಾಯರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಫೆಬ್ರವರಿ 24 ರಂದು ಶ್ರೀ ರಾಘವೇಂದ್ರಸ್ವಾಮಿ ಉತ್ತರಾಧಿ ಮಠದಲ್ಲಿ ಶ್ರೀ ರಾಘವೇಂದ್ರ ವೈಭವೋತ್ಸವ, ಶ್ರೀ ರಾಘವೇಂದ್ರಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ಹಾಗೂ 5 ದಿವಸವಾದ ನಾಳೆ

ಶ್ರೀರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ನಾಳೆ ಮಂಗಳವಾರ. ಬೆಳಿಗ್ಗೆ 11 ಗಂಟೆಗೆ ಮಹಾ ರಥೋತ್ಸವ ಮಹಾಮಂಗಳಾರತಿ ನಡೆಯಲಿದ್ದು ಭಕ್ತರು ಪಾಲ್ಗೊಂಡು ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವೇ. ಕನಕಾಚಾರ್ಯರು ವಿನಂತಿಸಿದ್ದಾರೆ.
ವರದಿ : ಕುಮಾರಸ್ವಾಮಿ
