
ಆಧುನಿಕ ಜಗತ್ತನ್ನು ಇಂದು ನಡೆಸುತ್ತಿರುವ ಅತ್ಯಂತ ಶಕ್ತಿಶಾಲಿ ಸಾಧನೆವೆಂದರೆ, ಅದು ಎಲ್ಲರ ಒಳಗೆ ಒಂದಾಗಿರುವ ಮೊಬೈಲ್ ಫೋನ್ ಗಳು ಲ್ಯಾಪ್ಟಾಪ್ಗಳು ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳು ಇಂದು ಭೂಮಿಯಿಂದ ಬಾಹ್ಯಾಕಾಶದ ವರೆಗೆ ಶಾಲೆಯಿಂದ ವೈದ್ಯಕೀಯ ಕ್ಷೇತ್ರದ ವರೆಗೆ ಬದುಕಿನಿಂದ ಭದ್ರತೆವರೆಗೆ ಅಗತ್ಯವೂ ಅನಿವಾರ್ಯವೂ ಆಗಿ ಹೋಗಿವೆ. ಆದರೆ ಅವುಗಳನ್ನು ಅತಿಯಾಗಿ ಬಳಸುವ ರೀತಿಯಿಂದಾಗಿ ಅದರ ಅನುಕೂಲಕ್ಕಿಂತ, ದುಷ್ಪರಿಣಾಮಗಳೇ ಹೆಚ್ಚಾಗಿ ಎಲ್ಲರನ್ನೂ ಬಾಧಿಸ ತೊಡಗಿವೇ ಹಾಗೂ ಇದರಿಂದ ಅತಿ ಹೆಚ್ಚು ತೊಂದರೆ ಅನುಭವಿಸುತ್ತಿರುವುದು ನಮ್ಮ ಮಕ್ಕಳು ಎಂಬುದು ನಾವು ಯೋಚಿಸಬೇಕಾಗಿರುವ ಸಂಗತಿ.
ಇಂದಿನ ಶೈಕ್ಷಣಿಕೆ ಕ್ಷೇತ್ರಗಳಲ್ಲಿ ಎಲ್ಲವೂ ತಂತ್ರಜ್ಞಾನವನ್ನು ಅವಲಂಬಿಸಿದ್ದು, ಮಕ್ಕಳು ಅನಿವಾರ್ಯವೆಂಬಂತೆ ಈ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವಂತ ಸ್ಥಿತಿ ಬಂದೊದಗಿದೆ. ಈ ಸಾಧನಗಳು ಎಷ್ಟು ಅನೂಕುಲವಾಗಿದ್ದೀಯೋ ಅಷ್ಡೇ ಅಪಾಯಕಾರಿಯೂ ಆಗಿದೆ. ಇಲ್ಲಿ ಪರದೆ ಸಮಯವೆಂದರೆ(Screen Time) ಟಿವಿ, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಮುಂತಾದ ಸಾಧನಗಳ ಬಳಕೆಗೆ ಕಳೆಯುವ ಸಮಯ. ಅತಿಯಾಗಿ ಪರದೆ ನೋಡುವುದರಿಂದ ಮಕ್ಕಳ ಆರೋಗ್ಯ, ಮನೋಸ್ಥಿತಿ, ಮತ್ತು ಕಲಿಕೆಯಲ್ಲಿ ಹಾನಿಕರ ಪರಿಣಾಮಗಳಾಗಬಹುದು.
ಅತಿಯಾದ ಪರದೆ ಬಳಕೆಯಿಂದ ಉಂಟಾಗುವ ಸಮಸ್ಯೆಗಳು:
– ಕಣ್ಣಿನ ಸಮಸ್ಯೆಗಳು – ಬಹಳ ಹೊತ್ತಿನ ಪರದೆ ಬಳಕೆಯಿಂದ ಕಣ್ಣುಗಳು ಬೇಸರಗೊಳ್ಳುತ್ತವೆ, ಮತ್ತು ತಲೆನೋವು ಉಂಟಾಗಬಹುದು.
– ನಿದ್ರಾ ಸಮಸ್ಯೆ – ರಾತ್ರಿ ಹೆಚ್ಚಾಗಿ ಪರದೆ ನೋಡುವುದರಿಂದ ಮಕ್ಕಳ ನಿದ್ರೆ ಕಡಿಮೆಯಾಗಬಹುದು.
– ಗಮನ ಕೆಡುವಿಕೆ – ಆನ್ಲೈನ್ ವೀಡಿಯೋಗಳು ಮತ್ತು ಆಟಗಳು ಹೆಚ್ಚು ಆಕರ್ಷಕವಾಗಿರುವುದರಿಂದ ಮಕ್ಕಳು ಪಾಠದಲ್ಲಿ ಗಮನ ಕೊಡಲು ಕಷ್ಟಪಡುವ ಸಾಧ್ಯತೆ ಇದೆ.
– ಶಾರೀರಿಕ ಚಟುವಟಿಕೆ ಕಡಿಮೆ – ಪರದೆ ಮುಂದೆ ಸಮಯ ಕಳೆಯುವುದರಿಂದ ಆಟವಾಡಲು ಹೋಗುವುದಿಲ್ಲ, ಇದು ದೇಹದ ಆರೋಗ್ಯಕ್ಕೆ ಕೆಟ್ಟದು.
– ಸಾಮಾಜಿಕ ಸಂಪರ್ಕ ಕಡಿಮೆ – ಮಿತ್ರರೊಂದಿಗೆ ಮಾತನಾಡುವುದು, ಕುಟುಂಬದೊಂದಿಗೆ ಸಮಯ ಕಳೆಯುವುದು ಕಡಿಮೆಯಾಗಬಹುದು.
ಪರದೆ ಬಳಕೆಗೆ ಸಮತೋಲನ ಹೇಗೆ ತರುವದು?
– ಪರದೆ ಸಮಯವನ್ನು ಮಿತಿಯಾಗಿ ನೋಡಿರಿ.
– ಊಟದ ಸಮಯ ಮತ್ತು ನಿದ್ರೆಗೆ ಮುಂಚೆ ಪರದೆ ಬಳಕೆ ತಪ್ಪಿಸಿ.
– ಮಕ್ಕಳಿಗೆ ಪುಸ್ತಕ ಓದಲು, ಬಣ್ಣಗೆಯಲು ಅಥವಾ ಬೇರೇನು ಹೊಸ ಹವ್ಯಾಸಗಳನ್ನು ಪ್ರೋತ್ಸಾಹಿಸಿ.
– ಪೋಷಕರು ಸಹ ತಾವು ಪರದೆ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳಿಗೆ ಮಾದರಿ ಆಗಿರಿ.
– ಮಕ್ಕಳ ಪರದೆ ಬಳಕೆಯ ವಿಷಯಗಳನ್ನು ಗಮನಿಸಿ, ಶೈಕ್ಷಣಿಕ ಮತ್ತು ವಯೋಚಿತ ವಿಷಯಗಳನ್ನು ಆಯ್ಕೆಮಾಡಿ.
ಪರದೆ ಬಳಕೆಯನ್ನು ಸಮತೋಲನದಲ್ಲಿ ಇಟ್ಟರೆ, ಮಕ್ಕಳು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬಹುದು ಹಾಗೂ ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಲು ಕಲಿಯಬಹುದು.
-ಪ್ರೀತಿ ಮನು
(Mental Health & Wellness Counselor @ Chethana Neuro Centre, Hassan)