
ಗ್ಯಾಸ್ಟ್ರಿಕ್ ಬ್ರೂಡಿಂಗ್ ಕಪ್ಪೆ
ನಮ್ಮ ಭೂಮಿ ಅದೆಷ್ಟೋ ಜೀವಿಗಳಿಗೆ ನೆಲೆ. ಭೂಮಿ ಮೇಲೆ ವಿಚಿತ್ರ ವಿಚಿತ್ರ ಪ್ರಾಣಿಗಳಿವೆ. ಪ್ರತಿ ಜೀವಿಗೂ ಪುನರುತ್ಪಾದಕ ವ್ಯವಸ್ಥೆ ಇದೆ ಅಂತ ಗೊತ್ತೇ ಇದೆ. ಮತ್ತೊಂದು ಜೀವಿಗೆ ಜನ್ಮ ಕೊಡೋ ಕ್ರಮದಲ್ಲಿ ಒಂದೊಂದು ಜೀವಿಗೂ ಒಂದೊಂದು ಪ್ರಕ್ರಿಯೆ ಇರುತ್ತದೆ. ಆದ್ರೆ ಬಾಯಿಂದ ಮರಿ ಹಾಕೋ ಜೀವಿ ಕೂಡ ಇದೆ ಅಂತ ನಿಮಗೆ ಗೊತ್ತಾ?
ಮನುಷ್ಯರ ಜೊತೆಗೆ ಈ ಭೂಮಿ ಮೇಲೆ ಅದೆಷ್ಟೋ ಜೀವಿಗಳು ಬದುಕುತ್ತಿವೆ. ಎಲ್ಲಾ ಜೀವಿಗಳ ದೇಹ ರಚನೆ ಭಿನ್ನವಾಗಿರುತ್ತದೆ. ಹಾಗೆಯೇ ಅವುಗಳ ಪುನರುತ್ಪಾದಕ ವ್ಯವಸ್ಥೆ ಕೂಡ ಭಿನ್ನವಾಗಿರುತ್ತದೆ. ಕೆಲವು ಜೀವಿಗಳು ಮೊಟ್ಟೆಗಳ ಮೂಲಕ ಮರಿಗಳಿಗೆ ಜನ್ಮ ನೀಡಿದರೆ, ಇನ್ನು ಕೆಲವು ನೇರವಾಗಿ ಮರಿಗಳಿಗೆ ಜೀವ ತುಂಬುತ್ತವೆ. ಆದರೆ ಬಾಯಿಂದ ಮರಿ ಹಾಕೋ ಒಂದು ಜೀವಿ ಇದೆ ಅಂತ ನಿಮಗೆ ಗೊತ್ತಾ? ಏನದು ಆ ಜೀವಿ? ಅದರ ಪುನರುತ್ಪಾದಕ ವ್ಯವಸ್ಥೆ ಹೇಗಿರುತ್ತದೆ? ಈಗ ತಿಳಿದುಕೊಳ್ಳೋಣ.
ಕಪ್ಪೆಗಳು ನಮಗೆ ನಿತ್ಯ ಕಾಣುತ್ತಲೇ ಇರುತ್ತವೆ. ಸಾಮಾನ್ಯವಾಗಿ ಕಪ್ಪೆಗಳು ಎಲೆಗಳ ಮೇಲೆ, ನೀರಿನಲ್ಲಿ ಮೊಟ್ಟೆ ಇಡುತ್ತವೆ. ಆದರೆ ಒಂದು ಕಪ್ಪೆ ಮಾತ್ರ ಮೊಟ್ಟೆಗಳನ್ನು ಪೊದೆಯಲು ಅದರ ಬಾಯನ್ನೇ ಉಪಯೋಗಿಸುತ್ತದೆ. ಆ ಕಪ್ಪೆಯ ಹೆಸರು ಗ್ಯಾಸ್ಟ್ರಿಕ್ ಬ್ರೂಡಿಂಗ್ ಕಪ್ಪೆ. ಇದು ಮರಿಗಳಿಗೆ ಜನ್ಮ ನೀಡುವ ವಿಧಾನ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಈ ಕಪ್ಪೆಗಳು ಮೊಟ್ಟೆಗಳನ್ನು ಇಟ್ಟ ತಕ್ಷಣ ಮೊದಲು ನುಂಗುತ್ತವೆ. ಆದರೆ ಈ ಮೊಟ್ಟೆಗಳ ಮೇಲಿರುವ ವಿಶೇಷ ರಾಸಾಯನಿಕ ಪದರವು ಅವುಗಳನ್ನು ಹೊಟ್ಟೆಯ ಆಮ್ಲದಿಂದ ರಕ್ಷಿಸುತ್ತದೆ.
ಮೊಟ್ಟೆಗಳು ಮರಿಯಾಗುವವರೆಗೂ ಹೊಟ್ಟೆಯಲ್ಲೇ ಇರುತ್ತವೆ. ಮರಿಯಾದ ನಂತರ ಕಪ್ಪೆ ಮರಿಗಳು ಬಾಯಿಂದ ಹೊರಬರುತ್ತವೆ. ಈ ಕಪ್ಪೆಗಳು ಒಂದೇ ಬಾರಿಗೆ 25 ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಈ ರೀತಿಯ ಕಪ್ಪೆಗಳು 1980 ರಲ್ಲೇ ಅಳಿದು ಹೋಗಿವೆ ಎಂದು ತಜ್ಞರು ಹೇಳುತ್ತಾರೆ. ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ಒಂದು ಸಣ್ಣ ಪ್ರದೇಶದಲ್ಲಿ ಈ ಕಪ್ಪೆಯನ್ನು ಗುರುತಿಸಲಾಗಿದೆ. ಹೀಗೆ ಪ್ರಪಂಚದಲ್ಲಿ ಬಾಯಿಂದ ಮರಿ ಹಾಕುವ ಏಕೈಕ, ಜೀವಿ ಗ್ಯಾಸ್ಟ್ರಿಕ್ ಬ್ರೂಡಿಂಗ್ ಕಪ್ಪೆ ಎಂದು ಗುರುತಿಸಿಕೊಂಡಿದೆ.