
The giant phone had to shout; Big display.. Massive storage.. Do you know the price?
ಸದ್ದಿಲ್ಲದೆ ಹೊಸ ಫೋಲ್ಡಬಲ್ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಇದು ಹುವಾವೇ ಮೇಟ್ X6 (Huawei Mate X6) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೌದು, ಕಂಪನಿಯು Huawei Mate X5 ಫೋನಿನ ಉತ್ತರಾಧಿಕಾರಿಯಾಗಿ ಹುವಾವೇ ಮೇಟ್ X6 ಅನ್ನು ಪರಿಚಯಿಸಿದೆ.
ಹೊಸ ಫೋಲ್ಡಬಲ್ ಫೋನ್ 12GB RAM ಮತ್ತು 512GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಆಂಡ್ರಾಯ್ಡ್ 15 ಓಎಸ್ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 7.93 ಇಂಚಿನ ಮುಖ್ಯ ಡಿಸ್ಪ್ಲೇ ಮತ್ತು 6.45 ಇಂಚಿನ ಬಾಹ್ಯ ಡಿಸ್ಪ್ಲೇ ಇದೆ. ಹಾಗೆಯೇ 5110mAh ಬ್ಯಾಟರಿ ಮತ್ತು 66W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಹುವಾವೇ ಮೇಟ್ X6 ಬೆಲೆ ಮತ್ತು ಲಭ್ಯತೆ
ಹುವಾವೇ ಮೇಟ್ X6 ಸ್ಮಾರ್ಟ್ಫೋನ್ ಕಪ್ಪು, ನೆಬ್ಯುಲಾ ಗ್ರೇ ಮತ್ತು ನೆಬ್ಯುಲಾ ರೆಡ್ ಬಣ್ಣದಲ್ಲಿ ಬಿಡುಗಡೆಯಾಗಿದೆ. ಫೋನಿನ ಬೆಲೆಯು ಯುಎಇನಲ್ಲಿ (UAE) 1,66,000 ರೂ. (AED 7199) ಮತ್ತು 12GB RAM + 512GB ಸ್ಟೋರೇಜ್ ರೂಪಾಂತರದ ಬೆಲೆ 1,65,000 ರೂ. (SAR 7299) ಇದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮುಂಗಡ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ನೀವು, ಉಚಿತವಾಗಿ ಹುವಾವೇ ವಾಚ್ GT 4 46mm ಮತ್ತು ಹುವಾವೇ ಕೇರ್ + ಪಡೆಯಬಹುದು.
ಹುವಾವೇ ಮೇಟ್ X6 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹುವಾವೇ ಮೇಟ್ X6 ಮೊಬೈಲ್ 7.93 ಇಂಚಿನ ಮುಖ್ಯ ಡಿಸ್ಪ್ಲೇ ಹೊಂದಿದೆ. ಇದು 2440 × 2240 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1800 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಬೆಂಬಲ ಪಡೆದಿದೆ. ಫೋನಿನಲ್ಲಿ 6.45 ಇಂಚಿನ ಬಾಹ್ಯ ಡಿಸ್ಪ್ಲೇ ಲಭ್ಯವಿದೆ. ಇದು 2440 × 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 300Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 2500 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಹುವಾವೇ ಮೇಟ್ X6 ಫೋನ್ ಆಂಡ್ರಾಯ್ಡ್ ಆಧಾರಿತ EMUI 15 ಆಪರೇಟಿಂಗ್ ಸಿಸ್ಟಮ್ನಲ್ಲಿ ಕೆಲಸ ನಿರ್ವಹಿಸುತ್ತದೆ. ಕಂಪನಿಯು ಪ್ರೊಸೆಸರ್ ಬಗ್ಗೆ ಮಾಹಿತಿ ನೀಡಿಲ್ಲ. ಆದಾಗ್ಯೂ, ಈ ಫೋನ್ Kirin 9100 ಪ್ರೊಸೆಸರ್ ಹೊಂದಿದೆ ಎಂದು ಹೇಳಲಾಗುತ್ತಿದೆ.
ಸ್ಟೋರೇಜ್ ಆಯ್ಕೆ
ಹುವಾವೇ ಮೇಟ್ X6 ಸ್ಮಾರ್ಟ್ಫೋನ್ 12GB RAM ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿದೆ. ಚೀನಾದಲ್ಲಿ 256GB ಮತ್ತು 512GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ.
ಕ್ಯಾಮೆರಾ ಸೆಟಪ್
ಹುವಾವೇ ಮೇಟ್ X6 ಮೊಬೈಲ್ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 40 ಹುವಾವೇ ಮೇಟ್ X6 ದ್ವಿತೀಯ ಕ್ಯಾಮೆರಾ, 48 ಹುವಾವೇ ಮೇಟ್ X6 ತೃತೀಯ ಕ್ಯಾಮೆರಾ ಮತ್ತು OIS, 100x ವರೆಗೆ ಡಿಜಿಟಲ್ ಜೂಮ್, 1.5 ಮೆಗಾಪಿಕ್ಸೆಲ್ ಕ್ರೋಮಾ ಕ್ಯಾಮೆರಾ ಲಭ್ಯವಿದೆ. ಈ ಫೋನ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಹುವಾವೇ ಮೇಟ್ X6 ಫೋನನ್ನು 5110mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಚಾರ್ಜ್ ಮಾಡಲು, 66W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಹುವಾವೇ ಮೇಟ್ X6 ಸ್ಮಾರ್ಟ್ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ (ಸ್ಪ್ಲಾಶ್) IPX8 ರೇಡಿಂಗ್ ಪಡೆದಿದೆ. ಇದು ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.2, ಜಿಪಿಎಸ್, ಎನ್ಎಫ್ಸಿ, ಯುಎಸ್ಬಿ 3.1 ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.