ಕೊರಟಗೆರೆ:- ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವೈಭವದಿಂದ ಜರುಗಿತು .
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಕಮನೀಯ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿರುವ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಜಿಲ್ಲೆ, ತಾಲೂಕು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತ ಭಾವನೆಯಲ್ಲಿ ಹಿಂದಿರುಗುತ್ತಿದ್ದು ಕಂಡುಬಂದು.

ಪಾಂಡು ವಂಶದ ಜನಮೆಜಯ ರಾಜ ಪ್ರತಿಷ್ಠಾಪಿಸಲ್ಪಟ್ಟ ಸರಿಸುಮಾರು 5 ಸಾವಿರ ಇತಿಹಾಸವುಳ್ಳ ಕಮನಿಯ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿರುವ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ
ರಾಮ ಲಕ್ಷ್ಮಣ, ಸೀತಾದೇವಿ ಮತ್ತು ಆಂಜನೇಯ ವಿಗ್ರಹ ಕೂರಿಸಿದ ಕ್ಷಣಾರ್ಧದಲ್ಲೇ ಆಕಾಶದಲ್ಲಿ ಗರುಡ ಪಕ್ಷಿ ಕಾಣಿಸಿಕೊಂಡು ಗರುಡ ಪಕ್ಷಿ ರಥವನ್ನು ಪ್ರದಕ್ಷಿಣೆ ಹಾಕಲು ನೋಡಿದ ಸಹಸ್ರಾರು ಭಕ್ತರು ಜೈಕಾರ ಕೂಗಿದ ಕ್ಷಣದಲ್ಲ ಭಕ್ತಾರು ರಥವನ್ನು ಎಳೆಯುವ ಮೂಲಕ ಬ್ರಹ್ಮರಥೋತ್ಸವ ಪುಣ್ಯ ಕಾಲದಲ್ಲಿ ನೆರವೇರಲಿದೆ .

ಬ್ರಹ್ಮ ರಥೋತ್ಸವಕ್ಕೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ .ಜಿ ಪರಮೇಶ್ವರ್ ಚಾಲನೆ ನೀಡಿ ರಾಮ ಸೀತೆ ಆಂಜನೇಯ ಸ್ವಾಮಿಯ ವಿಗ್ರಹ ಪ್ರದಕ್ಷಣೆ ಸಂದರ್ಭದಲ್ಲಿ ತಾವು ದೇವರ ಜೊತೆಯಲ್ಲಿ ಪ್ರದಕ್ಷಿಣೆ ನಡೆಸಿದ್ದು ವಿಶೇಷವಾಗಿ ಕಂಡುಬಂದು, ದೇವರಿಗೆ ಪೂಜೆ ಸಲ್ಲಿಸಿ ಬ್ರಹ್ಮ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು ಬ್ರಹ್ಮರಥೋತ್ಸವ ಬಹಳ ಸುಸೂತ್ರವಾಗಿ ಹಾಗೂ ವೈಭವಿತವಾಗಿ ಆಯೋಜನೆಗೊಂಡಿತು.

ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ಜೊತೆ ಜೊತೆಯಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮಧುಗಿರಿ ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ ತಹಸೀಲ್ದಾರ್ ಮಂಜುನಾಥ್, ಇಓ ಅಪೂರ್ವ ಅನಂತರಾಮು,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಗಳಾದ ಅಶ್ವಥ್ ನಾರಾಯಣ್ ಹಾಗೂ ಅರಕೆರೆ ಶಂಕರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರೇಮ ಮಾಲಿಂಗಯ್ಯ, ರಾಜಣ್ಣ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡರು.

ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಬಹಳ ವ್ಯವಸ್ಥಿತವಾಗಿ ಧಾರ್ಮಿಕ ಕಾರ್ಯಗಳನ್ನ ಆಯೋಜಿಸಲಾಗಿ, ಸ್ವತಹ ತಹಸೀಲ್ದಾರ್ ಮಂಜುನಾಥ್ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟರು, ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಮಂದಿ ಭಕ್ತರಿಗೆ ಯಾವುದೇ ಅಡಚಣೆಯಾಗದಂತೆ ಸಿಪಿಐ ಅನಿಲ್ ಹಾಗೂ ಪಿಎಸ್ಐ ತೀರ್ಥೇಶ್ ಪೊಲೀಸ್ ಬಂದೋಬಸ್ ನೀಡಲಾಗಿ ಸಾರ್ವಜನಿಕರಿಗೆ ಈ ಬಾರಿ ಪುಂಡಪೋಕ್ರಿ ಹುಡುಗರಿಂದ ಯಾವುದೇ ಕಿರಿಕಿರಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿ ಇಡೀ ಬ್ರಹ್ಮರಥೋತ್ಸವದ ಧಾರ್ಮಿಕ ಕಾರ್ಯ ಬಹಳ ಸುಸೂತ್ರವಾಗಿ ಜರುಗಿತು.

ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ..
ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಆಯೋಜನೆಗೊಳ್ಳುವ ದನಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವಂತ ಉತ್ತಮ ರಾಸುಗಳಿಗೆ ತಾಲೂಕು ಆಡಳಿತ ಹಾಗೂ ಪಶು ಸಂಗೋಪನ ಇಲಾಖೆ ವತಿಯಿಂದ ನಗದು ಬಹುಮಾನ ಹಾಗೂ ಪಾರಿತೋಷಕ ನೀಡುವ ಮೂಲಕ ಹಲವು ರೈತರಗಳೀಗೆ ಬಹುಮಾನವನ್ನು ವಿತರಿಸಲಾಯಿತು ,
ಪಾಂಡವರ ವಂಶದ ಜನಮೆ ಜಯರಾಜ ಕಳೆದ 5 ಸಾವಿರ ವರ್ಷಗಳ ಹಿಂದೆ ಆಂಜನೇಯ ಮೂರ್ತಿಯನ್ನ ಪ್ರತಿಷ್ಠಾಪಿಸಿದರು ಎನ್ನಲಾಗಿದ್ದು, ಈ ಕ್ಷೇತ್ರವನ್ನ
ಕಮನೀಯ ಕ್ಷೇತ್ರ ಎನ್ನಲಾಗಿ ಇಂದು ಕ್ಯಾಮೇನಹಳ್ಳಿ ಪುಣ್ಯಕ್ಷೇತ್ರ ಆಗಿದೆ, ಹನುಮ, ಭೀಮ ಮತ್ತು ಮಧ್ವ ಮೂರು ಅವತಾರ ಇರುವಂತಹ ಕ್ಷೇತ್ರದಲ್ಲಿ ಹತ್ತಾರು ಪವಾಡ ನಡೆಯುತ್ತವೆ ಈ ಕ್ಷೇತ್ರಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾದಿಗಳು ಆಗಮಿಸಿ ದೇವರಿಗೆ ಮೊರೆ ಹೋಗಲಿದ್ದಾರೆ .
ರಾಮಾಚಾರ್ .. ಪ್ರಧಾನ ಅರ್ಚಕರು ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ.
ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೂವಿನ ಅಲಂಕಾರ ಸೇರಿದಂತೆ ದೇವಸ್ಥಾನದ ಎಲ್ಲಾ ಮೂರ್ತಿಗಳಿಗೂ ಹೂವಿನ ಅಲಂಕಾರವನ್ನು ವಿಶೇಷವಾಗಿ ಮಾಡಲಾಗಿ ಜೊತೆಗೆ ಬ್ರಹ್ಮ ರಥೋತ್ಸವದ ರಥೋತ್ಸವಕ್ಕೆ ಹೂವಿನ ಅಲಂಕಾರವ ಮಾಡಿಸಲಾಗಿದೆ, ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ದಾಸೋಹದ ಜೊತೆಗೆ ನೀರಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ನಮ್ಮ ತಂದೆ ತಾಯಿಗಳ ಹೆಸರಿನಲ್ಲಿ ಪ್ರತಿ ವರ್ಷ ಈ ಕಾರ್ಯ ನಡೆಸಿಕೊಂಡು ಬಂದಿದ್ದು ಮುಂದೆಯೂ ನಡೆಸಿಕೊಡಲಾಗುವುದು .
ಪಿ ಎನ್ ಕೃಷ್ಣಮೂರ್ತಿ..
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು .
– ಶ್ರೀನಿವಾಸ್ .ಕೊರಟಗೆರೆ.
