
ಮನುಷ್ಯ ಬದುಕಬೇಕೆಂದರೆ ಹೇಗಾದರೂ ಬದುಕಬಹುದು ಆದರೆ ತನ್ನಿಷ್ಟದಂತೆ ಬದುಕಬೇಕಾದರೆ ಅದಕ್ಕೆ ತಕ್ಕ ಶ್ರಮ ಪಡಬೇಕಾಗುತ್ತದೆ…..!
ಕಮ್ಯುನಿಸಂ ಸರ್ಕಾರವನ್ನು ವಿರೋದಿಸಿದ್ದನ್ನೇ ಅಪರಾಧವನ್ನಾಗಿ ಮಾಡಿ ಸೋವಿಯತ್ ಸರ್ಕಾರ ಹದಿಹರೆಯದ ಹುಡುಗರನ್ನು ತಂದಿಟ್ಟದ್ದು ಮಹಾಗೋಡೆಗಳಿಂದ ಆವೃತವಾದ ಜೈಲಿನಲ್ಲಿ,ಜೈಲಿನ ಸುತ್ತಲೂ ಅಮನುಷವಾದ ಸ್ಮಶಾನ ಮೌನದ ಕಾಡು. ಜೈಲಿನ ಸುತ್ತ ನೂರಾರು ಮೈಲಿಗಳ ವರೆಗೆ ಕಡು ಶೀತ ಪ್ರದೇಶ ಜೈಲಿನ ಸುತ್ತಲೂ ಇದ್ದ ವಾಚ್ ಟವರ್ ಅದರ ಮೇಲೆ ಮಶೀನ್ ಗಗನ್ ಹಿಡಿದ ಜೈಲ್ ಗಾರ್ಡ್ ಗಳು.
ಒಳಗಿದ್ದ ಖೈದಿಗಳಾರು ಕೊಂದು ತಿಂದವರಲ್ಲ ಕದ್ದು ಓಡಿದವರಲ್ಲ ಅವರ ಧ್ವನಿ ಎತ್ತಿದ್ದು ಸ್ವಾತಂತ್ರಕ್ಕಾಗಿ ಕೇವಲ ಮತ್ತು ಕೇವಲ ಸ್ವಾತಂತ್ರಕ್ಕಾಗಿ, ಈ ಕಟ್ಟಾಳಿಕೆ ಹಾಗು ದಬ್ಬಲಿಕೆಗಳಿಂದ ಹೊರಬರಲು ಸತತ ಸುಮಾರು ೪,೫೦೦ ಮೈಲಿಗಳಷ್ಟು ದೂರವನ್ನು, ಕಡಿದಾದ ಪರ್ವತಗಳನ್ನು, ರಷ್ಯಾದ ಹಿಮಾವೃತ ಸರೋವರಗಳನ್ನು, ಮಂಗೋಲಿಯಾದ ಮರಭೂಮಿಯನ್ನು ದಾಟಿ ದಾರಿ ಮಧ್ಯದಲ್ಲಿ ಸಿಗುವ ಕಾಡು ಮೃಗಗಳನ್ನು, ವಿಷಕಾರಿ ಹಾವುಗಳನ್ನು ತಿಂದು ಬದುಕಿ ಬಂದ ಕಥೆಯೇ ಪೂರ್ಣ ಚಂದ್ರ ತೇಜಸ್ವಿ ಅವರ, ಮಹಾ ಪಲಾಯನ
-ಶಿವಾನಾಗೌಡ ಪಾಟೀಲ