ಹಾಸನ- ನಗರದ ವಿವಿಧ ರಸ್ತೆ ವಿಭಜಕದ ಮಧ್ಯೆ ಹಾಗೂ ಇಕ್ಕೆಲಗಳಲ್ಲಿ ಗಿಡಗಳ ರಕ್ಷಣೆಗೆಂದು ಹಿಂದೆ ಹಾಕಿದ್ದ ತಂತಿ ಬೇಲಿ, ಈಗ ಮರದ ಬೆಳವಣಿಗೆಗೆ ಧಕ್ಕೆ ಉಂಟು ಮಾಡಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಮಲೆನಾಡು ರಕ್ಷಣಾ ಸೇನೆ ಜಿಲ್ಲಾ ಘಟಕದಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಗಿಡಗಳು ದೊಡ್ಡದಾಗಿ ಬೆಳೆದಿದ್ದು, ತಂತಿ ಬೇಲಿಯಿಂದ ಕಾಂಡ ಬೆಳವಣಿಗೆಗೆ ತೊಂದರೆಯಾಗಿದೆ. ಮರದ ಬುಡ ಕಾಂಡದ ಒಳಗೆ ಸೇರಿಕೊಂಡಿದ್ದು, ಮರದ ಬೆಳವಣಿಗೆಗೆ ತೊಂದರೆಯಾಗುತ್ತಿದ್ದು, ಇದನ್ನು ಕತ್ತರಿಸಿ ತೆರವುಗೊಳಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ದರ್ಶನ್ ಮಲ್ನಾಡ್, ನಗರದಲ್ಲಿ ಹಲವಾರು ವರ್ಷಗಳಿಂದ ಸೌಂದರ್ಯ ಹೆಚ್ಚಿಸುವ ಉದ್ದೇಶ ಹಾಗೂ ಪರಿಸರದ ಕಾಳಜಿಯಿಂದ ಸ್ವಚ್ಛ ಭಾರತ್ ಮಿಷನ್ ಹಾಗೂ ಹಲವಾರು ಯೋಜನೆಗಳ ಮುಖಾಂತರ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಯ ರಸ್ತೆಗಳಲ್ಲಿ ಸಾಲು ಗಿಡಗಳನ್ನು ನೆಡಲಾಗಿದೆ.

ನಂತರ ಗಿಡಗಳ ರಕ್ಷಣೆಗೆ ಬೇಲಿಯನ್ನು ಹಾಕಲಾಗಿತ್ತು. ಈಗ ಮರಗಳು ಹೆಮ್ಮರವಾಗಿ ಬೆಳೆದಿವೆ. ಆ ರಕ್ಷಣಾ ತಂತಿ ಬೇಲಿಗಳು ಮರದ ಬುಡ, ಕಾಂಡದ ಒಳಗೆ ಸೇರಿಕೊಂಡಿದ್ದು, ಮರದ ಬೆಳವಣಿಗೆಗೆ ತೊಂದರೆಯಾಗಿವೆ. ಈ ಒಂದು ತಡೆ ರಿಂಗುಗಳನ್ನು ತೆರವು ಮಾಡಿಕೊಡಬೇಕೆಂದು ಈ ಮೂಲಕ ಕೋರುತ್ತೇವೆ ಎಂದರು.
ಇದಕ್ಕೆ ಸ್ಪಂದಿಸಿದ ಆಯುಕ್ತರು ಅತಿ ಶೀಘ್ರದಲ್ಲಿ ತೆರವು ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಂಘಟನೆಯ ಕಾರ್ಯಕಾರಿ ಮಂಡಳಿಯ ಜಿ.ಎಸ್.ಅವಿನಾಶ್, ಪಾಲಾಕ್ಷ, ಯತೀಶ್ ಕುಮಾರ್ ಶೆಟ್ಟಳ್ಳಿ, ಪವನ್ ಕಾಗಿನರೆ, ರಾಕೇಶ್ಗೌಡ, ಶರತ್ ಶೆಟ್ಟಿ ಮೊದಲಾದವರಿದ್ದರು.

[…] ಹಾಸನ ನಗರದಲ್ಲಿ ಗಿಡಗಳ ಬೆಳವಣಿಗೆಗೆ ಅಡ್ಡಿ… […]