ಬಾರಯ್ಯ ಕವಿ ಕಾಡಿಗೆ ಈಗ ಬಂದೆ
ಗ್ಯಾಸ್ ಮುಗಿದಿದೆಯೇ
ಇಲ್ಲ ವನದೇವ ಸೌದೆ ಒಲೆಗೆ ಬೆಂಕಿ ಹಾಕಿ ಬಹಳ ದಿನಗಳಾದವು
ವಿಶ್ವ ಗುರುಗಳು ಯುದ್ಧಕ್ಕೆ ಅಲ್ಪ ವಿರಾಮ ಹಾಕಿದ್ದಾರೆ
ರಾಮನಾಮ ಜಪಿಸುತ್ತಾ ವನವಾಸಕ್ಕೆ ಬಂದೆ
ಮರ ಕಡಿಯಲು ಬಂದೆಯಾ ಮೂರ್ಖ
ಹನುಮಂತ ಲಂಕೆಗೆ ಬೆಂಕಿ ಇಟ್ಟನು
ಇವರು ಆಲ್ಲಿ ಬಾಂಬ್ ಬಿಟ್ಟರು
ಮನೆಯಲ್ಲಿ ಗ್ಯಾಸ್ ಟ್ರಬಲ್ ಮಕ್ಕಳು ಉಪವಾಸ
ಹೆಂಡತಿ ಓಡಿಸಿದ್ದಾಳೆ ಅದಕ್ಕೆ ನಿನಗೆ ವನವಾಸ
ಶ್ರೀಕೃಷ್ಣ ರಾಯಬಾರಿಗೆ ಪ್ರಾರ್ಥಿಸಿಕೊ
ಅವರಿಗೆ ಭಗವದ್ಗೀತೆ ಬೋಧಿಸಿ ಯುದ್ಧ ನಿಲ್ಲಿಸಲಿ.
—
ಗೊರೂರು ಅನಂತರಾಜು,
ಹಾಸನ
9449462879
