Gold Rates: ಕಳೆದ ಒಂದು ವಾರದಿಂದ ಷೇರು ಪೇಟೆಯ ಏರುಪೇರಿನಿಂದ ಚಿನ್ನದ ದರದಲ್ಲಿ ಗಣನೀಯವಾಗಿ 300ರಿಂದ 900 ರೂ. ರವರೆಗೂ ಹೆಚ್ಚಳ ಕಂಡುಬಂದಿದೆ. ಇದು ಚಿನ್ನ ಖರೀದಿದಾರರನ್ನು ಅಕ್ಷರಶಃ ಚಿಂತೆಗೆ ದೂಡಿದೆ. ಇನ್ನೇನು ಮದುವೆ, ಶುಭಕಾರ್ಯಗಳ ಸೀಸನ್ ಶುರುವಾಗುವ ಸಮಯ ಹತ್ತಿರವಾಗುತ್ತಿದ್ದಂತೆಯೇ ಇತ್ತ ಚಿನ್ನದ ದರಗಳು ಗಗನಕ್ಕೇರುತ್ತಿವೆ. ಪ್ರಸ್ತುತ ವರದಿಗಳ ಪ್ರಕಾರ, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಈಗ 98,100 ರೂ. ಆಗಿದೆ. ಈ ಸಂಗತಿ ‘ಚಿನ್ನ’ದ ಗ್ರಾಹಕರನ್ನು ಕಂಗಾಲಾಗಿಸಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
- ರಾಷ್ಟ್ರ ರಾಜಧಾನಿಯಲ್ಲಿ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 89,350 ರೂ. ಆಗಿದ್ದರೆ, 24 ಕ್ಯಾರೆಟ್ನ ಬೆಲೆ 97,460 ರೂ. ತಲುಪಿದೆ.
- ಮುಂಬೈ, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 89,200 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 97,310 ರೂ. ಆಗಿದೆ.
- ಇನ್ನು ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 89,200 ರೂ. ಆಗಿದ್ದರೆ, 24 ಕ್ಯಾರೆಟ್ನ ಬೆಲೆ 97,310 ರೂ.ಗೆ ತಲುಪಿದೆ.
ಬೆಳ್ಳಿ ಬೆಲೆ ಸ್ಥಿರ
- ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,00,000 ರೂ. ದಾಖಲಾಗಿದೆ.
- ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,10,000 ರೂ. ಇದೆ.
- ಇನ್ನು ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಇಂದು ಬೆಳ್ಳಿ ಬೆಲೆ ಸ್ವಲ್ಪ ಏರಿಕೆ ಕಂಡಿದೆ. ಈ ಮೂಲಕ ಆಯಾ ನಗರಗಳಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,10,000 ರೂ. ತಲುಪಿದೆ.
