ಅಂದು ಹೊಸ ಸಿಇಒ ಆಗಮನದ ಸಿದ್ಧತೆಯಲ್ಲಿ ಎಲ್ಲ ಸಿಬ್ಬಂದಿ ತೊಡಗಿದ್ದರೆ, ಹರೀಶ್ ಮಾತ್ರ ಹೆಂಡತಿಯೊಂದಿಗಿನ ಮನಸ್ಥಾಪದಿಂದ ನೊಂದು , ಕೆಲಸದಲ್ಲಿ ಮನಸ್ಸಿಲ್ಲದೇ ಮನಸ್ಸಿನಲ್ಲಿ ಕೆಲಸ ನಿರ್ವಹಿಸುತ್ತಿದ್ದವನನ್ನು ಗಮನಿಸಿದ ಉಷಾ,
” ಇವತ್ತಾದರೂ ಕೆಲಸವನ್ನೂ ಸರಿಯಾಗಿ ಮಾಡಿ, ಇಲ್ಲ ಅಂದರೆ ಮೊದಲ ದಿನವೇ ಸಿಇಒಯಿಂದ ಬೈಸಿಕೊಳ್ಳಬೇಕಾಗುತ್ತದೆ. Be carefull ಹರೀಶ್” ಎಂದು ಎಚ್ಚರಿಸಿದಳು.
ಹರೀಶ್, “ಹು” ಎಂದವನು ತಾನು ಎಚ್ಚರಗೊಂಡಂತೆ ತೋರಿಸಿಕೊಂಡು ಕೆಲಸದಲ್ಲಿ ತೊಡಗಲು ಯತ್ನಿಸಿದ.
ಸ್ವಲ್ಪ ಹೊತ್ತಿನಲ್ಲೇ ಹೊಸ ಸಿಇಒ ಕಚೇರಿಗೆ ಆಗಮಿಸಿದರು. ಸಿಬ್ಬಂದಿಯೆಲ್ಲ ಹೂಗುಚ್ಚಗಳೊಂದಿಗೆ ಸ್ವಾಗತಕ್ಕೆ ಧಾವಿಸಿದರು.
ಹರೀಶ್ ಮಾತ್ರ ನಿಂತಲ್ಲೇ ಅಲ್ಲಾಡದೆ ನಿಂತಿದ್ದ. ಇದು ಕನಸೋ ನನಸೋ ಎಂಬ ಭ್ರಾಂತಿಗೆ ಒಳಗಾಗಿದ್ದ. ಅವನಿಗೆ ಗೊತ್ತಿಲ್ಲದೆ ಅವನ ಬಾಯಿಂದ “ಪಾರ್ವತಿ…” ಎಂಬ ಹೆಸರು ಉಚ್ಚರಿಸಲ್ಪಟ್ಟಿತ್ತು…..10 ವರ್ಷಗಳ ಹಿಂದೆನ ಸೃತಿಪಟಲ ತೆರೆದುಕೊಂಡಿತ್ತು…
ತನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದ ಹುಡುಗಿ, ಸಿಲ್ವರ್ ಕಮೀಸ್ ತೊಟ್ಟ ತೆಳ್ಳನೆಯ ದುಪ್ಪಟ್ಟ ಹಾಕಿ ಮುದ್ದಾಗಿ ಮುಗ್ದ ಕಂಗಳ ಹುಡುಗಿಯನ್ನು ಇಡೀ ಕಾಲೇಜೇ ಪ್ರೀತಿಸುತ್ತಿದ್ದರೂ, ಅವಳು ಮಾತ್ರ ಹರೀಶ್ ನ್ನು ಬಿಟ್ಟು ಬೇರೆ ಹುಡುಗರನ್ನು ಕಣ್ಣೆತ್ತಿ ನೋಡಿದವಳಲ್ಲ. ಕಾಲೇಜಿನ ಕ್ಯಾಂಪಸ್ ಲ್ಲಿ ತನಗೆ ಸಿಕ್ಕ ಕೆಲಸವನ್ನು ಹರೀಶ್ ಗಾಗಿ ಬಿಟ್ಟುಕೊಟ್ಟಿ, ಹರೀಶ್ ಜೊತೆಗಿನ ಮುಂದಿನ ಜೀವನದ ಕನಸಲ್ಲಿ ದಿನಕಳೆಯುತ್ತಿದ್ದವಳನ್ನು, ಕೆಲಸಕ್ಕಾಗಿ ಬೇರೆ ಊರಿಗೆ ಹೋದ ಹರೀಶ್, ನಿಧಾನವಾಗಿ ದೂರವಾಗತೊಡಗಿದ. ಪಾರ್ವತಿಯನ್ನು ಮರೆತು ಮನೆಯವರು ತೋರಿಸಿದ ಹುಡುಗಿಯನ್ನು ಕೈ ಹಿಡಿಯಲು ಮುಂದಾದನು. ಈ ಸುದ್ದಿಯಿಂದ ಪಾರ್ವತಿಗೆ ದೊಡ್ಡ ಅಘಾತವೇ ಆಗಿತ್ತು….!
ಹರೀಶ್ ಇದ್ದ ಫ್ಲಾಟ್ ಗೆ ಬಂದ ಪಾರ್ವತಿ, ಏಕಾಏಕಾ ಅವನ ಕಾಲಿಡಿದು,
“ನಂಗೆ ನೀವು ಬೇಕು ರೀ….ಯಾಕ್ರೀ ಹೀಗೆ ಮಾಡಿತ್ತೀದ್ದೀರಾ…, ನಿಮ್ಮನ್ನು ಬಿಟ್ಟು ಬದಕೋ ಶಕ್ತಿ ಇಲ್ಲ ರೀ. ನಮ್ಮ ಬದುಕು ತುಂಬಾ ಚೆನ್ನಾಗಿದೆ ರೀ …ಪ್ಲೀಸ್ ರೀ . ಹೀಗೆ ಮಾಡಬೇಡಿ. ನಂಗೆ ನೀವು ಬೇಕು. ನಿಮ್ಮನ್ನ ಬಿಟ್ಟುಕೊಡಕೆ ಆಗಲ್ಲ ನನಗೆ. ನೀವು ಬೇಕು ರೀ… ರೀ ಪ್ಲೀಸ್ ರೀ” ಅಂತ ಒಂದೇ ಸಮನೇ ಆಳುತ್ತ ಬೇಡಿಕೊಂಡಳು.
ಸಮಾಧಾನ ಮಾಡೋ ನೆಪದಲ್ಲಿ, ಹರೀಶ್ ಅವಳನ್ನೋನ್ನು ಅಪ್ಪಿಕೊಂಡು, “ನೋಡು, ಅಳಬೇಡ ಹೀಗೆ ಅತ್ತರೇ ಅಗುತ್ತಾ ಹೇಳು., ಯಾಕೆ ಅಳುತ್ತಿಯಾ ಬಂಗಾರಿ. ನೋಡು ನಾನು ಬೇಕು ಅಂದ್ರೇ ಅವಳನ್ನಾ ಕೇಳಬೇಕಲ್ಲ ನೀನು……ಅವಳನ್ನಾ ಒಪ್ಪಿಸು. ನಾನು ನೀನು ಅವಳು ಮೂರು ಜನ ಚೆನ್ನಾಗಿರೋಣ. ಫ್ಲೀಸ್ ಒಪ್ಪಿಸು ಅವಳನ್ನಾ” ಅಂತ ಹೇಳದ.
ಪಾರ್ವತಿಗೆ ಹರೀಶ್ ನಾ ಮಾತು ಕೇಳಿ ನಿಂತಲ್ಲಿ ಕುಸಿದು ಹೋದಳು.
“ಇವನೇನಾ ನನ್ನ ಹರೀಶ್? ನನ್ನ ಗಂಡ ಅಂತ ಪೂಜಿಸಿದ್ದವನೇನಾ?”.ತನ್ನ ಸರ್ವಸ್ವವನ್ನೂ ಕೊಟ್ಟು, ಹಗಲುರಾತ್ರಿ ಅವನೇ ಉಸಿರು ಅನ್ಕೊಂಡಿದ್ದವಳಿಗೆ, ಇವತ್ತು ಅವನು, ಇನ್ನೊಬ್ಬಳಿಗಾಗಿ ತನ್ನನೇ ಬಿಟ್ಟುಕೊಡೋಕೆ ರೇಡಿಯಾಗಿದ್ದ…ಹೆಂಡತಿ ಅಂತ ಕರಿತಿದ್ದವನೂ, ಇನ್ನಾ ಯಾರನ್ನೋ ಹೆಂಡತಿ ಅಂತ ಕರಿಯೋಕೆ ಶುರೂ ಮಾಡಿ, ತನ್ನನ್ನ ಇಟ್ಟಿಕೊಂಡವಳಾಗಿ ಇರತ್ತಿಯಾ ಅಂತ ಕೇಳಿದ್ದ. ಒಂದು ಕ್ಷಣವೂ ಅಲ್ಲಿ ನಿಲ್ಲದೇ, ಹಿಂದೆ ತಿರುಗಿ ನೋಡದೇ ಅಲ್ಲಿಂದ ಹೊರಟುಹೋದಳು.
ಇಂದು ಅದೇ ಪಾರ್ವತಿ ಅವನ ಕಚೇರಿಯಲ್ಲಿ ಸಿಇಒ ಆಗಿ ನಿಂತಿದ್ದಳು. ನಿಂತಲ್ಲಿ ನಿಂತ ಹರೀಶ್ ನನ್ನು ಉಷಾ ಬಂದು ಎಚ್ಚರಿಸಿದ್ದಳು. ಸ್ವಾಗತಿಸಲು ಕಳಿಸಿದಳು.
ಹೂ ಗುಚ್ಚ ಕೊಟ್ಟು ಸ್ವಾಗತಿಸಲು ಹೋದವನಿಗೆ ಮತ್ತೊಂದು ಶಾಕ್ ಕಾದಿತ್ತು. ಹೂಗುಚ್ಚವನ್ನು ಸ್ವೀಕರಿಸಿದಳು. ಹರೀಶ್ ಕಡೆ ನೋಡಿದರೂ ನೋಡದಂತೆ ತಿರಸ್ಕಾರದ ನೋಟವಿಟ್ಟಳು. ಆಮೇಲೆ ತನ್ನ ಪಕ್ಕದಲ್ಲಿದ್ದ ಶಿವನ ಕೈ ಹಿಡಿದು ಕಚೇರಿಯೊಳಗೆ ನಡೆದುಕೊಂಡು ಹೋದಳು.
ಶಿವ ಪಾರ್ವತಿಯನ್ನು, ಕಾಲೇಜಿನ ದಿನದಿಂದಲೂ ತುಂಬಾ ಕಾಳಜಿ ಮಾಡುತ್ತಿದ್ದ ಒಳ್ಳೇ ಸ್ನೇಹಿತನನಾಗಿದ್ದ. ಪಾರ್ವತಿಯನ್ನು ಯಾವುದೇ ಪ್ರತಿಫಲಪೇಕ್ಷೆಯಿಂದ ಪ್ರೀತಿಸುತ್ತಿದ್ದ, ಹರೀಶ್ ಪಾರ್ವತಿಯನ್ನು ಮೋಸ ಮಾಡಿದಂತ ಸಂದರ್ಭದಲ್ಲಿ, ಪಾರ್ವತಿಯಲ್ಲಿ ಮತ್ತೆ ಜೀನ್ನೋತ್ಸಾಹ ತುಂಬಿ ಅವಳ ಯಶಸ್ಸಿಗೆ ಕಾರಣನಾಗಿ, ಅವಳ ಜೀವನ ಸಂಗಾತಿಯಾಗಿದ್ದ.
ಈ ಘಟನೆಯಿಂದ ಹರೀಶ್ ಗೆ ಆಕಾಶವೇ ಕಳಚಿ ಬಿದ್ದಂತೆ ಭಾಸವಾಗಿತ್ತು, ತನ್ನನ್ನು ಪ್ರೀತಿಸಿದ ಹುಡುಗಿ ಇಂದು ತಿರಸ್ಕಾರದಿಂದ ನೋಡಿದ್ದಳು. ತನ್ನ ಮೇಲಾಧಿಕಾರಿಯಾಗಿ ತನ್ನ ಅಹಃಗೆ ಬೆಟ್ಟುಕೊಟ್ಟಿದ್ದಳು. ಪಾರ್ವತಿಗೆ ಮಾಡಿದ ಮೋಸದ ಪ್ರತಿಫಲವಾಗಿ ಅವನ ಹೆಂಡತಿ ಅವನ ಜೀವನವನ್ನು ನೆಮ್ಮದಿಯಿಲ್ಲದಂತೆ ಮಾಡಿದ್ದಳು. ಪ್ರತಿ ಮಾತಿನಲ್ಲೂ ಅಪಮಾನ, ಅನುಮಾನ.ಪ್ರತಿ ವಿಷಯವೂ ಹೆಂಡತಿಯ ಇಚ್ಚೆಯಂತೆ ಆಗಬೇಕಾಗಿತ್ತು. ಅವನು ಪುರುಷರ್ಥದ ಅಹಂಕಾರಕ್ಕೆ ಸರಿಯಾದ ಶಿಕ್ಷೆಯಾಗಿತ್ತು.
ಪ್ರೀತಿ ಅಂದರೆ ಸ್ವಾಮಿತ್ವವಲ್ಲ.
ಅದು ಗೌರವ, ನಂಬಿಕೆ, ಸಮರ್ಪಣೆ.
ಪ್ರೀತಿಯನ್ನು ತಿರಸ್ಕರಿಸಿದವನು ಜೀವನದಲ್ಲಿ ಏನನ್ನಾದರೂ ಗೆಲ್ಲಬಹುದು…
ಆದರೆ ಒಮ್ಮೆ ಕಳೆದುಕೊಂಡ ನಂಬಿಕೆಯನ್ನು ಮರಳಿ ಗೆಲ್ಲಲು ಸಾಧ್ಯವಿಲ್ಲ.
ಅಹಂಕಾರ ಕ್ಷಣಿಕ,
ಆದರೆ ಅದರ ಶಿಕ್ಷೆ ಶಾಶ್ವತ.
– ಮೌನಾತ್ಮ
