“ಸರಿಯಾದವ”

ಇಂದಿನ ಸಮಾಜದಲ್ಲಿ ಸಮಾನತೆಯ ಜಿಜ್ಞಾಸೆ ತೀವ್ರವಾಗಿ ಬೆಳೆಯುತ್ತಿದ್ದು, ಅಸಮಾನತೆ, ಭಯ, ಶೋಷಣೆ ಮತ್ತು ರಾಜಕೀಯ ಕುಚಕ್ರಗಳು ಜನಸಾಮಾನ್ಯನ ಬದುಕಿನಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಧರ್ಮ, ಜಾತಿ, ಆರ್ಥಿಕ ಸ್ಥಿತಿ ಇವುಗಳ ಹೆಸರಿನಲ್ಲಿ ಮಾನವೀಯತೆ ನಡುಗುತ್ತಿದೆ. ಮುಗ್ಧ ಜನರ ಶೋಷಣೆಯೊಂದಿಗೆ, ಸ್ವಾರ್ಥದ ರಾಜಕೀಯ ಮತ್ತು ಭ್ರಷ್ಟವ್ಯವಸ್ಥೆ ಸಮಾಜದ ನೈತಿಕ ಮೌಲ್ಯಗಳನ್ನು ಕುಸಿಸುತ್ತಿವೆ. ಹಾದಿ ತಪ್ಪದ ಬದುಕು, ಪರಿಶ್ರಮ, ಜ್ಞಾನ ಮತ್ತು ಪ್ರಾಮಾಣಿಕತೆ ಮೂಲಕ ದೇಶವನ್ನು ಬಲಿಷ್ಠಗೊಳಿಸುವ ಅಗತ್ಯವಿದೆ ಎಂಬ ತೀವ್ರ ಚಿಂತನೆಯ ಪ್ರತಿಬಿಂಬ ಇಲ್ಲಿದೆ.