ಇಂದಿನ ಸಮಾಜದಲ್ಲಿ ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸ ಸಾಧ್ಯವಿಲ್ಲ ಅನ್ನೋಷ್ಟು ಜನ ಸಾಮಾನ್ಯರು ಅವರ ಮೇಲೆ ಅವಲಂಬಿತರಾಗಿದ್ದಾರೆ. ಮದುವೆ, ಸಂಸಾರ, ಮನೆ ಖರೀದಿ, ದಿನನಿತ್ಯದ ಖರೀದಿಗಳಲ್ಲಿ ಸಹ ಇವರ ದಾಖಲೆಯಿದೆ. ಸಂಸಾರ ಕಲಹಗಳಿಂದ ಹಿಡಿದು ಮನಸ್ಸು ಬದಲಾವಣೆಗೂ ಮಧ್ಯವರ್ತಿಗಳೇ ನಿರ್ಧಾರಕ. ನೈತಿಕತೆ, ಬಾಂಧವ್ಯ, ನ್ಯಾಯವನ್ನು ಬದಿಗೆ ತಳ್ಳಿ ಅವರು ಹಣಕ್ಕಾಗಿ ತಮ್ಮ ‘ಸೇವೆ’ಗಳನ್ನು ಒದಗಿಸುತ್ತಾರೆ. ಕೆಲವರು ಸಮಸ್ಯೆಗಳನ್ನು ಬಗೆಹರಿಸುವ ಹೆಸರಿನಲ್ಲಿCourt ಗೇ ಹೋಗುವ ಮೊದಲು ಅಥವಾ ನಂತರ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಅವರು ಸಮಾಜದ ಗಣ್ಯರ ಒಡನಾಟದಲ್ಲಿ ನಂಬಿಕೆ ಹುಟ್ಟಿಸಿ, ಹಣ ಲೂಟಿಯಲ್ಲಿ ತೊಡಗಿದ್ದಾರೆ. ಜನರ ಆತಂಕ, ನಿರುಪಾಯ ಪರಿಸ್ಥಿತಿಗಳನ್ನು ಅವರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ, ನಾವು ನಮ್ಮನ್ನು ನಾವು ಪ್ರಶ್ನಿಸಬೇಕಾಗಿದೆ: ಅವರುಗಳಿಲ್ಲದೇ ನಾವಿಲ್ಲವೇ?
Copy and paste this URL into your WordPress site to embed
Copy and paste this code into your site to embed