ಆಲೂರು : ಲಾರ್ಡ್ ಬೆಡನ್ ಪೊವೆಲ್ ಜನ್ಮ ದಿನಾಚರಣೆಯನ್ನು ಸಂಸ್ಥಾಪನಾ ದಿನವನ್ನಾಗಿ ಆಚರಿಸುವುದರೊಂದಿಗೆ, ಈ ದಿನ ಜಾಥ ಅಥವಾ ರ್ಯಾಲಿಗಳನ್ನು ಹಮ್ಮಿಕೊಂಡು ಘೋಷಣಾ ವಾಕ್ಯಗಳನ್ನು ಕೂಗಲಾಗುತ್ತದೆ. ರ್ಯಾಲಿಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. ಭಾರತ್ ಸ್ಕೌಟ್ಸ್ & ಗೈಡ್ಸ್ ಮಕ್ಕಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವುದರೊಂದಿಗೆ ಸರ್ವಾಂಗೀಣ ವಿಕಸನಗೊಳಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.
ಅವರು ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಬೈರಾಪುರ ಎಸ್.ವಿ.ಪಬ್ಲಿಕ್ ಶಾಲೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡಿ ಲಾರ್ಡ್ ಬೆಡನ್ ಪೊವೆಲ್ ಹಾಗೂ ಲೇಡಿ ಬೆಡನ್ ಪೊವೆಲ್ ಅವರೀರ್ವರೂ ಹಟ್ಟಿದ್ದು ಫೆಬ್ರುವರಿ ೨೨ ಆದ್ದರಿಂದ ೧೭೫ ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ದಿನವನ್ನು ಸ್ಕೌಟ್ಸ್ ಗೈಡ್ಸ್ ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಮುಖೇನ ಅವರೀರ್ವರ ಜೀವನ ಸಾಧನೆಗಳನ್ನು ವಿವರಿಸಲಾಗುತ್ತದೆ. ರ್ಯಾಲಿಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಸ್ಥೆಯ ಗುರಿ – ಉದ್ದೇಶಗಳನ್ನು ಮೆಲಕುಹಾಕುವ ಕಾರ್ಯಕ್ರಮ ಇದಾಗಿದೆ. ಸಮಯಪಾಲನೆ, ಶಿಸ್ತು, ಸೇವಾ ಮನೋಭಾವನೆ, ಬ್ರಾತೃತ್ವ ಭಾವನೆ ಮುಂತಾದ ಮಹತ್ತರ ಅಂಶಗಳನ್ನು ಈ ಚಳವಳಿಯಲ್ಲಿ ಕಲಿಸಲಾಗುತ್ತದೆ. ನೆರೆಮನೆ, ನೆರೆಯೂರು, ನೆರೆರಾಜ್ಯ, ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಬೆಸೆಯುವ ಮನೋಧೋರಣೆ ಬೆಳೆಸುವುದರೊಂದಿಗೆ ವಿಶ್ವಮಾನವ ಸಂದೇಶ ಸಾರುತ್ತಾ ಧರ್ಮಾತೀತವಾಗಿ, ವರ್ಣಾತೀತವಾಗಿ, ಲಿಂಗಾತೀತವಾಗಿ ಸಮಾನತೆಯಿಂದ ಬದುಕು ಸಾಗಿಸುವುದನ್ನು ಕಲಿಸುತ್ತಾ ಸರಳವಾದ ಜೀವನಕ್ರಮವನ್ನು ಇಲ್ಲಿ ಕಲಿಯುತ್ತೇವೆ ಎಂದರು.

ಎಸ್. ವಿ. ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಎಸ್.ಎನ್. ನಳಿನಾಗಿರೀಶ್ ಮಾತನಾಡಿ ಭಾರತ್ ಸ್ಕೌಟ್ಸ್ ಗೈಡ್ಸ್ ಚಳವಳಿ ಮಕ್ಕಳನ್ನು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸದೃಢಗೊಳಿಸುವುದರ ಜೊತೆಗೆ ಪಠ್ಯ ಮತ್ತು ಪಠ್ಯೇತರ ಚಟವಟಿಕೆಗಳಲ್ಲಿ ಸಕ್ರಿಯರಾಗುವುದಕ್ಕೆ ಸಹಕಾರಿಯಾಗಿದೆ. ಶಾಲೆಯ ಶಿಸ್ತನ್ನು ದುಪ್ಪಟ್ಟುಗೊಳಿಸುತ್ತದೆ. ಎಲ್ಲಾ ಮಕ್ಕಳು ಈ ಚಳವಳಿಯಲ್ಲಿ ನೀಡುವ ಜೀವನ ಶಿಕ್ಷಣವನ್ನು ಅರ್ಥಮಾಡಿಕೊಂಡು ಅಳವಡಿಸಿಕೊಂಡರೆ ಈ ಸಂಸ್ಥೆಯ ಉದ್ದೇಶ ಸಾಕಾರಗೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ಶಿಕ್ಷಣ ಸಂಯೋಜಕ ತಿಮ್ಮಶೆಟ್ಟಿ, ತಾಲ್ಲೂಕು ಖಜಾಂಚಿ ಬಿ.ಎಸ್. ಹಿಮ, ತಾಲ್ಲೂಕು ಸಹ ಕಾರ್ಯದರ್ಶಿ ಎಚ್.ಡಿ.ಕುಮಾರ್, ಫ್ಲಾಕ್ ಲೀಡರ್ ಎಂ.ಎಲ್.ಎಲಿಜಬೆತ್, ಬೈರಾಪುರ ಶಾಲೆಯ ಮುಖ್ಯ ಶಿಕ್ಷಕ ಶಂಕರಶೆಟ್ಟಿ, ಎಚ್.ಸಿ. ಜ್ಯೋತಿ ಅಮೃತೇಶ್, ಎಸ್.ವಿ.ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಎಂ. ಎನ್. ಸುನಿಲ್ ಮುಂತಾದವರು ಮಾತನಾಡಿದರು.

ರ್ಯಾಲಿಯಲ್ಲಿ ಎಸ್.ವಿ. ಪಬ್ಲಿಕ್ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ರೋಸ್ ಮೇರಿ, ನವ್ಯಶ್ರೀ, ಗೈಡ್ ಕ್ಯಾಪ್ಟನ್ ಸುಮಿತ್ರ, ಸ್ಕೌಟ್ ಮಾಸ್ಟರ್ ದೇವರಾಜ್, ಸತೀಶ್; ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ಸ್ ಶಿಲ್ಪಾಕೃತಿ, ಎಂ. ಚಂದ್ರಕಲಾ, ಸೌಮ್ಯ ಎಚ್.ಎನ್; ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ಕಾವ್ಯ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈರಾಪುರ ಗೈಡ್ ಕ್ಯಾಪ್ಟನ್ ಅಶ್ವಿನಿ; ಆಲೂರು ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಕಬ್ ಮಾಸ್ಟರ್ ಕೆ.ಜೆ. ರಾಮಚಂದ್ರು, ಗೈಡ್ ಕ್ಯಾಪ್ಟನ್ ರೋಹಿಣಿ ಬಿ.ಎಂ, ಲೇಡಿ ಸ್ಕೌಟ್ ಮಾಸ್ಟರ್ ಕೆ.ಎ. ಶಕುಂತಲಾ; ಬೈರಾಪುರ ಶಾಲೆಯ ಸಹ ಶಿಕ್ಷಕರಾದ ಜ್ಯೋತಿಅಮೃತೇಶ್, ನಾಗರತ್ನ, ಅಂಬಿಕಾ, ಅತಿಥಿ ಶಿಕ್ಷಕಿ ಕಾವ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
