
ರಾಜ್ಯದ ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿ ಯೋಜನೆ (guarantee scheme ) ಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮೀ, ಶಕ್ತಿ ಯೋಜನೆ, ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ ಯೋಜನೆಗಳ ಲಾಭವನ್ನು ಕರ್ನಾಟಕದಲ್ಲಿ ಕೋಟ್ಯಾಂತರ ಮಂದಿ ಪಡೆಯುತ್ತಿದ್ದಾರೆ.
ಆದ್ರೀಗ ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಹೊಸ ರೂಲ್ಸ್ ಜಾರಿಗೆ ತರಲು ಮುಂದಾಗಿದೆ.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು (guarantee scheme) ರಾಜ್ಯ ಸರಕಾರಕ್ಕೆ ಹೊರೆಯಾಗಿ ಪರಿಣಮಿಸಿದೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಎರಡು ಕಂತುಗಳ ಹಣ ಬಾಕಿ ಉಳಿದಿದೆ. ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಗೆ ಹಣ ಹೊಂದಿಕೆ ಮಾಡಲು ಪರದಾಡುತ್ತಿದೆ.
ಹೀಗಾಗಿಯೇ ಪ್ರತೀ ತಿಂಗಳು ಕೂಡ ಗೃಹಲಕ್ಷ್ಮೀ ಯೋಜನೆಯ ಜಮೆಯಲ್ಲಿ ವಿಳಂಭವಾಗುತ್ತಿದೆ. ಶಕ್ತಿಯೋಜನೆಯ ಲಾಭವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಕೆಎಸ್ಆರ್ಟಿಸಿ ಬಸ್ಸುಗಳಲ್ಲಿಯೂ ಕೂಡ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ.
ಮಹಿಳೆಯರ ಜೊತೆಗೆ ಕೆಎಸ್ಆರ್ಟಿಸಿ ನಿಗಮಗಳು ಕೂಡ ಭರ್ಜರಿ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಸರಕಾರ ಸಾರಿಗೆ ನಿಗಮಗಳಿಗೆ ಬಾಕಿ ಹಣ ಪಾವತಿಸಲು ವಿಳಂಭ ಮಾಡುತ್ತಿದೆ. ಇನ್ನು ಗೃಹಜ್ಯೋತಿ ಯೋಜನೆಯಡಿಯಲ್ಲಿ ಪ್ರತೀ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದರೂ ಕೂಡ ಕೆಪಿಟಿಸಿಎಲ್ಗೆ ಹಣ ಪಾವತಿಸೋದು ಬಾಕಿ ಉಳಿದಿದೆ.
ಯುವನಿಧಿ ಯೋಜನೆಯನ್ನು ಸರಕಾರ ಅರ್ಧಕ್ಕೆ ಕೈ ಬಿಟ್ಟಿರುವಂತೆ ಕಾಣಿಸುತ್ತಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಹಣದ ಬದಲು ಅಕ್ಕಿ ನೀಡಲು ಸರಕಾರ ಚಿಂತನೆ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಸರಕಾರದ ಬೊಕ್ಕಸಕ್ಕೆ ಹೊಡೆತ ಬೀಳುತ್ತಿರುವುದನ್ನು ಅರಿತ ಸರಕಾರ ಗ್ಯಾರಂಟಿ ಯೋಜನೆಗಳ ರೂಲ್ಸ್ ನಲ್ಲಿ ಬದಲಾವಣೆಯನ್ನು ತರಲು ಚಿಂತನೆ ನಡೆಸಿದೆ.
ಗ್ಯಾರಂಟಿ ಯೋಜನೆಗಳು ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೂ ದೊರೆಯುತ್ತಿದ್ದು, ಸರಕಾರ ಮುಂದಿನ ದಿನಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಮಾತ್ರವೇ ಯೋಜನೆಯನ್ನು ನೀಡಬೇಕು ಎನ್ನುವ ಸಲಹೆ ಕೇಳಿಬಂದಿದೆ.
ಇದೇ ಕಾರಣಕ್ಕೆ ಕರ್ನಾಟಕ ಸರಕಾರದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಗ್ಯಾರಂಟಿ ಯೋಜನೆಗಳನ್ನು ಬಿಪಿಎಲ್ ಕಾರ್ಡುದಾರರ ಕುಟುಂಬಗಳಿಗೆ ಮಾತ್ರವೇ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಗೃಹ ಸಚಿವರು ನೀಡಿರುವ ಹೇಳಿಕೆ ಸದ್ಯ ಕರ್ನಾಟಕ ರಾಜ್ಯದಲ್ಲಿ ಬಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಚುನಾವಣಾ ಪೂರ್ವದಲ್ಲಿ ತಾವು ಕೊಟ್ಟಿರುವ ಮಾತಿನಂತೆ ಗ್ಯಾರಂಟಿ ಯೋಜನೆಯನ್ನು ಮುಂದುವರಿಸಬೇಕು ಅಂತಾ ಕೆಲವರು ಹೇಳ್ತಾ ಇದ್ರೆ, ಇನ್ನೂ ಕೆಲವರು ಅರ್ಹರಿಗೆ ಮಾತ್ರವೇ ಗ್ಯಾರಂಟಿ ಯೋಜನೆ ಮುಂದುವರಿಸಿ ಎನ್ನುತ್ತಿದ್ದಾರೆ.
ಜೊತೆಗೆ ಗ್ಯಾರಂಟಿ ಯೋಜನೆಯ ಬೆನ್ನಲ್ಲೇ ಏರಿಕೆ ಮಾಡಿರುವ ವಿದ್ಯುತ್ ಬಸ್ ದರವನ್ನು ಇಳಿಕೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಸದ್ಯ ಕರ್ನಾಟಕ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿಗೆ ತರಲು ಚಿಂತನೆ ನಡೆಸಿದೆ. ಕೆಲವೇ ದಿನಗಳಲ್ಲಿ ರಾಜ್ಯದ ಬಜೆಟ್ ಮಂಡನೆಯಾಗಲಿದೆ.
ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಬದಲಾವಣೆಯನ್ನು ತರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಸರಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.