*ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ*
– 8 ವರ್ಷಗಳ ಬಳಿಕ ನಡೆಯಲಿರುವ ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy) ಕ್ರಿಕೆಟ್ ಟೂರ್ನಿ ಇದೇ ಫೆ.19 ರಿಂದ ಆರಂಭಗೊಳ್ಳಲಿದೆ.
– ಇದೀಗ ಐಸಿಸಿ ವಿಶ್ವಕಪ್ ವಿಜೇತರ ಪ್ರಶಸ್ತಿ(Champions Trophy prize money) ಮೊತ್ತವನ್ನು ಘೋಷಣೆ ಮಾಡಿದೆ.
– 2017 ರ ಆವೃತ್ತಿಗಿಂತ ಶೇ.53ರ ಪ್ರತಿಶತದಷ್ಟು ಮೊತ್ತ ಹೆಚ್ಚಳವಾಗಿದೆ. ಈ ಬಾರಿ ಟ್ರೋಫಿ ಗೆದ್ದ ತಂಡವು ಸುಮಾರು 19.46 ಕೋಟಿ ಪ್ರಶಸ್ತಿ ಮೊತ್ತ (USD 2.24 million) ಪಡೆಯಲಿದೆ. ಒಟ್ಟಾರೆ ಬಹುಮಾನ ಮೊತ್ತವನ್ನು 60 ಕೋಟಿಗೆ (USD 6.9 million) ಹೆಚ್ಚಿಸಲಾಗಿದೆ.
– ರನ್ನರ್ ಅಪ್ ತಂಡವು 9.75 ಕೋಟಿ (USD 1.12 million) ಮತ್ತು ಸೆಮಿಫೈನಲ್ನಲ್ಲಿ ಸೋತ ತಂಡವು 4.86 ಕೋಟಿ (USD 560,000) ಗಳಿಸಲಿದೆ. ಹಾಗೆಯೇ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿ ತಂಡಗಳಿಗೂ ₹1.08 ಕೋಟಿ (USD 125,000) ಸಿಗಲಿವೆ
