
ಶವಪರೀಕ್ಷೆಯ ವರದಿಯಿಂದ ಸತ್ಯ ಬಹಿರಂಗ
ಶವಪರೀಕ್ಷೆಯ ವರದಿಯಿಂದ ಸತ್ಯ ಬಹಿರಂಗ
ಕಾನ್ಪುರ: ಒಬ್ಬ ಮಹಿಳೆ ತನ್ನ ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನು ಕೊಲೆ ಮಾಡಿದ್ದಾಳೆ. ನಂತರ ಅವಳು ತನ್ನ ಗಂಡನ ಪ್ಯಾಂಟ್ ಜೇಬಿನಲ್ಲಿ 8 ವಯಾಗ್ರ ಪ್ಯಾಕ್ಗಳನ್ನು ಇಟ್ಟಿದ್ದಳು. ಈ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ ತನ್ನ ಪತಿ ಸತ್ತಿದ್ದಾನೆ ಎಂದು ಆಕೆ ಬಿಂಬಿಸಿದ್ದಳು.
ಆರಂಭದಲ್ಲಿ, ಪೊಲೀಸರು ಇದೇ ಸತ್ಯಕಥೆ ಎಂದು ನಂಬಿದ್ದರು. ಆ ಮಹಿಳೆ ಸತ್ಯವನ್ನೇ ಹೇಳುತ್ತಿರಬೇಕು ಎಂದು ಪೊಲೀಸರು ಭಾವಿಸಿದ್ದರು. ಆದರೆ, ಶವಪರೀಕ್ಷೆಯ ವರದಿ ಬಂದಾಗ ಸತ್ಯ ಹೊರಬಂದಿತು.
ಆರಂಭದಲ್ಲಿ, ಪೊಲೀಸರು ಇದೇ ಸತ್ಯಕಥೆ ಎಂದು ನಂಬಿದ್ದರು. ಆ ಮಹಿಳೆ ಸತ್ಯವನ್ನೇ ಹೇಳುತ್ತಿರಬೇಕು ಎಂದು ಪೊಲೀಸರು ಭಾವಿಸಿದ್ದರು. ಆದರೆ, ಶವಪರೀಕ್ಷೆಯ ವರದಿ ಬಂದಾಗ ಸತ್ಯ ಹೊರಬಂದಿದೆ.
ಏನಿದು ಘಟನೆ ?
ಪತ್ನಿ ತನ್ನ ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನು ಕೊಂದ ಘಟನೆ ಕಾನ್ಪುರದಲ್ಲಿ ನಡೆದಿದೆ. ಅಬಿದ್ ಅಲಿ ಎಂಬ ವ್ಯಕ್ತಿ ತನ್ನ ಪತ್ನಿ ಶಬಾನಾ ಮತ್ತು ಮಗನೊಂದಿಗೆ ಕಾನ್ಪುರದಲ್ಲಿ ವಾಸಿಸುತ್ತಿದ್ದರು. ಜನವರಿ 19ರಂದು, ಶಬಾನಾ ಪೊಲೀಸ್ ಠಾಣೆಗೆ ಹೋಗಿ ತನ್ನ ಪತಿ ವಯಾಗ್ರದ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಳು. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಪರಿಶೀಲಿಸಿದಾಗ ಮೃತ ಅಬಿದ್ನ ಜೇಬಿನಲ್ಲಿ 8 ಪ್ಯಾಕೆಟ್ ವಯಾಗ್ರದ ಮಾತ್ರೆಗಳು ಕಂಡು ಬಂದವು. ಅಲ್ಲದೆ, ಅಬಿದ್ನ ದೇಹದ ಮೇಲೆ ಹೊಡೆತ ಅಥವಾ ಇರಿತದ ಗಾಯಗಳಂತಹ ಯಾವುದೇ ಗುರುತುಗಳು ಕಂಡು ಬಂದಿರಲಿಲ್ಲ. ಆದ್ದರಿಂದ, ಶಬಾನಾ ಅಂದರೆ ಅಬಿದ್ನ ಪತ್ನಿ ಸತ್ಯವನ್ನು ಹೇಳುತ್ತಿದ್ದಾಳೆ ಎಂದು ಪೊಲೀಸರು ಭಾವಿಸಿದ್ದರು.