
ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ, ಗುಪ್ತಾಂಗದಲ್ಲಿತ್ತು ಬ್ಲೇಡ್
ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ಸರ್ಜಿಕಲ್ ಬ್ಲೇಡ್ ತುರುಕಿರುವ ದುರುಳರು
ಸುಮಾರು 20 ವರ್ಷದ ಆಸುಪಾಸಿನ ಯುವತಿಯೊಬ್ಬಳ ಗುಪ್ತಾಂಗದಲ್ಲಿ ಸರ್ಜಿಕಲ್ ಬ್ಲೇಡ್ ಪತ್ತೆಯಾದಂತ ಘಟನೆ ಮುಂಬಯಿ ಗೋರೆಗಾಂವ್ ನಲ್ಲಿ ನಡೆದಿದೆ.
ಜನವರಿ 20 ರಂದು ತನ್ನ ಚಿಕ್ಕಪ್ಪನೊಂದಿಗೆ ಲಕ್ನೋನಿಂದ ಬಂದಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಬಾಂದ್ರಾ ನಿಲ್ದಾಣವನ್ನು ತಲುಪಿದ ನಂತರ ಅವಳು ಗೋರೆಗಾಂವ್ಗೆ ಪ್ರಯಾಣ ಬೆಳೆಸಿದಳು. ಈ ಅವಧಿಯಲ್ಲಿ, ತನ್ನ ಮೇಲೆ ಅತ್ಯಾಚಾರವೆಸಗಲಾಯಿತು ಮತ್ತು ಬಲವಂತವಾಗಿ ಬ್ಲೇಡ್ ಹಾಕಿದ್ದಾರೆ ಎಂದು ತಿಳಿಸಿದ್ದಾಳೆ.
ಆದರೆ ಆಕೆ ಗೋರೆಗಾಂವ್ಗೆ ಹೇಗೆ ತಲುಪಿದ್ದೇನೆ ಎಂಬುದರ ಕುರಿತು ಸರಿಯಾಗಿ ಮಾಹಿತಿ ನೀಡಿಲ್ಲ.
ಈ ಸಂಬಂಧ ಬಹು ಪೊಲೀಸ್ ತಂಡಗಳು ಪ್ರಕರಣದ ತನಿಖೆ ನಡೆಸುತ್ತಿವೆ, ಬಾಂದ್ರಾ ಮತ್ತು ಗೋರೆಗಾಂವ್ ನಡುವಿನ ನಿಲ್ದಾಣಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆಕೆಯ ಪ್ರಯಾಣದ ಇತಿಹಾಸವನ್ನು ಖಚಿತಪಡಿಸಲು ವಿಮಾನ ನಿಲ್ದಾಣದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.