ಆಪರೇಷನ್ ಸಿಂಧೂರ್(Op Sindoor) ಕಾರ್ಯಚರಣೆ ವೇಳೆ ಪಾಕಿಸ್ತಾನದಲ್ಲಿನ ಉಗ್ರರ ತಾಣಗಳ ಮೇಲೆ ದಾಳಿ ನಡೆಸುವ ವೇಳೆ, ನಮಾಜ್(namaz) ನಡೆಯುತ್ತಿದ್ದ ಸಮಯದಲ್ಲಿ ದಾಳಿ ಮಾಡದೇ ತಾಳ್ಮೆ ವಹಿಸಲಾಗಿದೆ ಎಂದು ಭಾರತ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ತಿಳಿಸಿದ್ದಾರೆ.
- ಅವರು “ಸಬ್ಕಾ ಮಾಲಿಕ್ ಏಕ್ ಹೈ” ಎಂಬ ಮಾನವೀಯ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು, ಧಾರ್ಮಿಕ ಆಚರಣೆ ನಡೆಯುವ ಸಮಯವನ್ನು ಗೌರವಿಸಲಾಗಿದೆ. ಇದರಿಂದ ಸಾಮಾನ್ಯ ನಾಗರಿಕರು ಅಥವಾ ಧಾರ್ಮಿಕ ಚಟುವಟಿಕೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಭಾರತ ಸೇನೆ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡಿದ್ದರೂ, ದಾಳಿಯ ಸಮಯವನ್ನು ಆಯ್ಕೆ ಮಾಡುವಲ್ಲಿ ಮಾನವೀಯತೆ ಮತ್ತು ಧಾರ್ಮಿಕ ಸಂವೇದನಾಶೀಲತೆಯನ್ನು ಪಾಲಿಸಲಾಗಿದೆ ಎಂಬ ಸಂದೇಶವನ್ನು ಈ ಹೇಳಿಕೆ ಒತ್ತಿಹೇಳುತ್ತದೆ.
ಈ ಹೇಳಿಕೆ ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದ ಯೋಧರ ಪತ್ನಿಯರ ಸಿಂಧೂರ ಅಳಿಸಿಹೋದ ಪ್ರತೀಕಾರವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು.ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೈಬಾ (LeT) ಸಂಘಟನೆಗಳ ತರಬೇತಿ ಶಿಬಿರಗಳ ಮೇಲೆ ದಾಳಿ ಮಾಡಲಾಯಿತು. ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯು ಉಗ್ರರ ಮೂಲಸೌಕರ್ಯಗಳನ್ನು ನಾಶಪಡಿಸಿತು.
