ತಿರುವನಂತಪುರ: ಕೇರಳದಲ್ಲಿ 104 ಶಾಲೆಗಳು ಡ್ರಗ್ಸ್ ಹಾಟ್ ಸ್ಪಾಟ್ ಎಂದು ಗುರುತು !

ಹಾಟ್‌ಸ್ಪಾಟ್ ಶಾಲೆಗಳನ್ನು ಅಬಕಾರಿ ಕಣ್ಗಾವಲಿನಲ್ಲಿ ಇರಿಸಲಾಗುವುದು ಮತ್ತು ಅಗತ್ಯವಿದ್ದರೆ ಪೊಲೀಸರ ಸಹಾಯವನ್ನು ಪಡೆಯಲಾಗುವುದು. ಮಾದಕ ವಸ್ತುಗಳ ಗೀಳಿಗೆ ಸಿಲುಕಿರುವ ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳ ದಂಧೆಯಿಂದ ಮುಕ್ತಗೊಳಿಸಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ ಎಂದು ಬಹು ಮೂಲಗಳು ತಿಳಿಸಿವೆ.