ಶಿವನನ್ನು ಪೂಜಿಸುವುದು, ಶಿವನ ಧ್ಯಾನವನ್ನು ಮಾಡುವುದರಿಂದ ಮಾಡಿದ ಪಾಪ ಕರ್ಮಗಳೆಲ್ಲ ಕಳೆದು ಮಂಗಳಕರ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಶಿವನನ್ನು ಸರಳವಾಗಿ ಪೂಜಿಸಿದರೂ ಅವನು ಶೀಘ್ರದಲ್ಲೇ ಫಲ ನೀಡುತ್ತಾನೆ. ಶಿವನಿಗೆ ಧಾತುರಾ ತುಂಬಾ ಪ್ರಿಯವಾದ ಹೂವಾಗಿದೆ.
ಈ ಈ ಧಾತುರ ಹೂವಿನ ಬಗ್ಗೆ ರುದ್ರ ಸಂಹಿತೆಯಲ್ಲಿ ವಿವರಿಸಲಾಗಿದೆ. ಈ ಹೂವು ಕೇವಲ ಶಿವನಿಗೆ ಪ್ರಿಯವಾದದ್ದು ಮಾತ್ರವಲ್ಲ, ಇದರಲ್ಲಿ ಹಲವಾರು ಆಯುರ್ವೇದ ಶಕ್ತಿ ಅಡಗಿದೆ. ಅನೇಕ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಈ ಹೂವಿನಲ್ಲಿದೆ. ಶಿವನ ಬೆವರಿನಿಂದ ಧಾತುರ ಸಸ್ಯ ಹುಟ್ಟಿತು ಎಂಬ ಪ್ರತೀತಿಯು ಪುರಾಣಗಳಲ್ಲಿದೆ.
ಪ್ರಕೃತಿಯಲ್ಲಿ ಕಂಡುಬರುವ ಅನೇಕ ಮರಗಳು, ಎಲೆಗಳು, ಹೂವುಗಳು ನಮ್ಮ ಆರೋಗ್ಯದ ಸಮಸ್ಯೆಗೆ ಪರಿಹಾರ ನೀಡುತ್ತವೆ. ಪ್ರಾಚೀನ ಕಾಲದಿಂದಲೂ ರೋಗಗಳಿಗೆ ಚಿಕಿತ್ಸೆಯಾಗಿ ಆಯುರ್ವೇದವನ್ನು ಅವಲಂಬಿಸಿದ್ದೇವೆ. ದತ್ತೂರಿ ಗಿಡ ಕೂಡ ಆಯುರ್ವೇದದಲ್ಲಿ ಬಳಸಲಾಗುವ ಅತ್ಯಂತ ಶಕ್ತಿಯುತ ಸಸ್ಯಗಳಲ್ಲಿ ಒಂದಾಗಿದೆ. ದತ್ತೂರಿ ಗಿಡ ಆಯುರ್ವೇದದಲ್ಲಿ ಔಷಧೀಯವಾಗಿ ಮತ್ತು ಹಿಂದೂ ಧರ್ಮದಲ್ಲಿ ಧಾರ್ಮಿಕವಾಗಿ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.
ದತ್ತೂರಿ ಎಲೆಗಳ ಹೊಗೆಯನ್ನು ತೆಗೆದುಕೊಳ್ಳುವುದರಿಂದ ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಉಂಟಾಗುವದಿಲ್ಲ. ಶೀತ ಮತ್ತು ಕೆಮ್ಮಿಗೆ ದತ್ತೂರಿ ಎಲೆಗಳಿಂದ ತಯಾರಿಸಿದ ಕಷಾಯವನ್ನು ಕುಡಿಯಬಹುದು. ತಕ್ಷಣವೇ ಪರಿಹಾರ ದೊರೆಯುತ್ತದೆ.
ದತ್ತೂರಿ ಎಲೆಗಳನ್ನು ಬಿಸಿಮಾಡಿ ನೋವಿರುವ ಜಾಗಕ್ಕೆ ಹಚ್ಚುವುದರಿಂದ ಕೀಲು ನೋವು, ಊತ ಕಡಿಮೆಯಾಗುತ್ತದೆ. ನೋವು ಹೆಚ್ಚಾಗಿರುವ ದತ್ತೂರಿ ಎಲೆ ಬಿಸಿ ಮಾಡಿ ಕಟ್ಟಬಹುದು. ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ದತ್ತೂರಿ ಎಣ್ಣೆಯನ್ನು ಮಸಾಜ್ ಮಾಡಲು ಬಳಸಲಾಗುತ್ತದೆ.
ದತ್ತೂರಿ ಎಲೆಗಳ ಪೇಸ್ಟ್ನ್ನು ಹುಣ್ಣು, ಮೊಡವೆ ಮತ್ತು ಚರ್ಮದ ಸೋಂಕುಗಳಿಗೆ ಹಚ್ಚಿದರೆ ಅವು ಗುಣವಾಗುತ್ತವೆ. ದತ್ತೂರಿ ಎಲೆಯ ಕಷಾಯ ಕುಡಿಯುವುದರಿಂದ ಕ್ಯಾನ್ಸರ್ ಕೋಶಗಳು ಬೆಳೆಯುವುದಿಲ್ಲ. ಬಿಪಿ, ಶುಗರ್ ಕೂಡ ಬರುವುದಿಲ್ಲ.
ದತ್ತೂರಿ ಗಿಡದ ಬೇರನ್ನು ಹಲ್ಲು ನೋವಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ದತ್ತೂರಿ ಗಿಡದ ಬೇರಿನಿಂದ ತಯಾರಿಸಿದ ಎಣ್ಣೆ ಪಾದಗಳಿಗೆ ಹಚ್ಚಿ ಮಲಗುವುದರಿಂದ ಮೈ ಕೈ ನೋವು ಕೂಡ ಗುಣವಾಗುತ್ತದೆ.
ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
