Time is the healer of all problems
ಆಲೋಚನೆಗಳು ಮತ್ತು ಭಾವನೆಗಳು ಮೇಲ್ನೋಟಕ್ಕೆ ಒಂದೇ ಅನಿಸಿದರೂ ಅವುಗಳು ಮೂಲದಲ್ಲಿ ಒಂದು ಸಣ್ಣ ವ್ಯತ್ಯಾಸವಿದೆ.
ಆಲೋಚನೆಗಳು ವಿಷಯದ ಪ್ರಾರಂಭಿಕ ಹಂತವಾದರೆ, ಭಾವನೆಗಳು ಅದರ ಒಳಗಿನ ಹಂತ. ಆಲೋಚನೆಗಳು ತರ್ಕದಲ್ಲಿದ್ದರೆ ಭಾವನೆಗಳು ತರ್ಕದಿಂದ ದೂರವಿರುತ್ತದೆ. ಅದೇ ರೀತಿ ಒಳ್ಳೆ ಭಾವನೆಗಳು ಯಾವಾಗಲು ಮನಸಿಗೆ ಸುಖವನ್ನು ನೀಡುತ್ತಿರುತ್ತವೆ.
ಯಾವುದೇ ವಿಷಯದ ಆಲೋಚನೆಯಿಂದ ಮನಸ್ಸು ಬೇಗ ದೂರವಿರಬಹುದು. ಆದರೆ ಭಾವನೆಗಳಿಂದ ಮನಸ್ಸು ಬೇಗ ದೂರವಾಗಲು ಸಾಧ್ಯವಿಲ್ಲ ಎಂಬ ಅನ್ನಿಸಿಕೆ ಎಲ್ಲರಲ್ಲೂ ಇದೆ. ಆದರೆ ಅದು ಸಾಧ್ಯ. ಹೇಗಂತರಾ ಬನ್ನಿ ಹೇಳತ್ತೀನಿ…
ಆಲೋಚನೆ ರೈಲಿನ ಇಂಜಿನ್ ಅಂದುಕೊಂಡರೆ ಭಾವನೆ ಎನ್ನುವುದು ರೈಲಿನ ಹಿಂದಿನ ಬೋಗಿ ಆಗಿರುತ್ತದೆ. ರೈಲು ಮುಂದೆ ಸಾಗಿದಾಗ ಇಂಜಿನ್ ಮುಂದೆ ಸಾಗುತ್ತದೆ. ಅದರಂತೆ ಹಿಂದಿನ ಬೋಗಿ ಅದನ್ನಾನುಸರಿಸುತ್ತದೆ. ಆಲೋಚನೆ ಮುಗಿದ ನಂತರ ಭಾವನೆಗಳ ಏರಿಳಿತಗಳು ಕಡಿಮೆಯಾಗುತ್ತ ಬರುತ್ತದೆ.
ಭಾವನೆಗಳಿಂದ ಹೊರ ಬರುವುದು ತಡವಾದರೂ, ಸಹ ಖಂಡಿತವಾಗಿ ಹೊರ ಬರಲು ಸಾಧ್ಯವಿದೆ, ಅದು ಯಾವಾಗ ಅಂದ್ರೆ, ಈ ಎಲ್ಲಾ ಭಾವನೆಗಳಿಂದ ಹೊರಬರಬೇಕು ಎಂಬ ಮನಸ್ಥಿತಿ ಇದ್ದಾಗ. ಹಾಗೇ ಆ ಮನಸ್ಥಿತಿ ಇಲ್ಲದಿದ್ದರೂ, ಕಾಲದ ಕೈಗೆ ಆ ಭಾವನೆ ಸಿಕ್ಕಾಗ, ಅದು ನಿಮ್ಮನ್ನು ಬಲವಂತ ವಾಗಿಯಾದರು ಹೊರ ಎಳೆದುತರುತ್ತದೆ. ಇದೇ ಸಮಯಕ್ಕಿರುವ ಅಗಾಧವಾದ ಶಕ್ತಿ.
- – ಕೀರ್ತಿ ಎಂ.
