
ಭಾರತವು ವೈವಿಧ್ಯಮಯ ಸಂಸ್ಕೃತಿಗಳನ್ನು ಮತ್ತು ಸಂಪ್ರದಾಯಗಳನ್ನು ಹೊಂದಿರುವ ಭೂಮಿಯಾಗಿದೆ. ಹಾಗೆಯೇ ಅಪಾರ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ದೇಶದಲ್ಲಿ ಸಾವಿರಾರು ದೇವಾಲಯಗಳಿವೆ, ಮಸೀದಿ, ಚರ್ಚ್ಗಳಿದೆ. ದೇವಾಲಯಗಳು ಸಂಪತ್ತಿನ ವಿಚಾರದಲ್ಲಿಯೂ ನಾವು ಆಶ್ಚರ್ಯಪಡುವಂತಿದೆ. ನಾವಿಂದು ಈ ಲೇಖನದಲ್ಲಿ ದೇಶದ ಟಾಪ್ 10 ಶ್ರೀಮಂತ ದೇವಾಲಯಗಳು ಮತ್ತು ಅವುಗಳ ಆದಾಯದ ವಿವರಗಳನ್ನು ತಿಳಿದುಕೊಳ್ಳೋಣ.
1. ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಆಂಧ್ರಪ್ರದೇಶ:
8ನೇ ಶತಮಾನದ ಈ ದೇವಾಲಯವು ದಿನಕ್ಕೆ ಸುಮಾರು 5 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸುತ್ತದೆ.
*******************************
2. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳ:
16ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು ಸುಮಾರು 20 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದೆ.
***************************************
- 3. ಸಿದ್ಧಿವಿನಾಯಕ ದೇವಸ್ಥಾನ, ಮಹಾರಾಷ್ಟ್ರ:
ಮುಂಬೈನಲ್ಲಿ ಇರುವ ಈ ಗಣೇಶ ದೇವಾಲಯವು ವಾರ್ಷಿಕವಾಗಿ ಸುಮಾರು 125 ಕೋಟಿ ರೂಪಾಯಿಗಳ ಆದಾಯವನ್ನು ಹೊಂದಿದೆ.
************************************************************
4. ಶಿರಡಿ ಸಾಯಿಬಾಬಾ ದೇವಸ್ಥಾನ, ಮಹಾರಾಷ್ಟ್ರ:
ಶಿರಡಿಯಲ್ಲಿ ಇರುವ ಈ ದೇವಾಲಯವು ವಾರ್ಷಿಕವಾಗಿ ಸುಮಾರು 320 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸುತ್ತದೆ.
**************************************************
5. ಸ್ವರ್ಣ ದೇವಸ್ಥಾನ (ಗೋಲ್ಡನ್ ಟೆಂಪಲ್), ಪಂಜಾಬ್:
ಅಮೃತಸರದಲ್ಲಿರುವ ಈ ಸಿಖ್ ದೇವಾಲಯವು ದಿನಕ್ಕೆ ಸುಮಾರು 1 ಲಕ್ಷ ಭಕ್ತರನ್ನು ಆಕರ್ಷಿಸುತ್ತದೆ.
****************************************************
6. ಮೀನಾಕ್ಷಿ ದೇವಸ್ಥಾನ, ತಮಿಳುನಾಡು:
ಮಧುರೈನಲ್ಲಿ ಇರುವ ಈ ದೇವಾಲಯವು ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.
********************************************************
7. ಗುರುವಾಯೂರ್ ದೇವಸ್ಥಾನ, ಕೇರಳ:
ಗುರುವಾಯೂರಿನಲ್ಲಿ ಇರುವ ಈ ಕೃಷ್ಣ ದೇವಾಲಯವು ದಿನಕ್ಕೆ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.
**********************************************************
8. ಸೋಮನಾಥ ದೇವಸ್ಥಾನ, ಗುಜರಾತ್:
ವೆರಾವಲ್ನಲ್ಲಿ ಇರುವ ಈ ಶಿವ ದೇವಾಲಯವು ಐತಿಹಾಸಿಕ ಮಹತ್ವವನ್ನು ಹೊಂದಿದೆ.
***********************************************************
9. ವೈಷ್ಣೋ ದೇವಿ ದೇವಸ್ಥಾನ, ಜಮ್ಮು ಮತ್ತು ಕಾಶ್ಮೀರ:
ಕತ್ರಾದಲ್ಲಿ ಇರುವ ಈ ದೇವಾಲಯವು ವರ್ಷಕ್ಕೆ ಸುಮಾರು 8 ಮಿಲಿಯನ್ ಯಾತ್ರಿಕರನ್ನು ಆಕರ್ಷಿಸುತ್ತದೆ.
**********************************************************
10. ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯ,ನವದೆಹಲಿ.
ನವದೆಹಲಿಯಲ್ಲಿ ಇರುವ ಈ ದೇವಾಲಯವು ತನ್ನ ವಾಸ್ತುಶಿಲ್ಪಕ್ಕಾಗಿ ಪ್ರಸಿದ್ಧವಾಗಿದೆ.
ಈ ದೇವಾಲಯಗಳು ಕೇವಲ ಆಧ್ಯಾತ್ಮಿಕ ಕೇಂದ್ರಗಳಲ್ಲ, ಆರ್ಥಿಕ ಶಕ್ತಿ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತಿವೆ.