ಕಾರವಾರ: ಪ್ರವಾಸಿಗರ ಬಸ್ ಅಪಘಾತಕ್ಕೀಡಾಗಿ 9 ಜನರಿಗೆ ಗಾಯಗಳಾದ ಘಟನೆ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಸಮೀಪ ನಡೆದಿದೆ.
ಗಾಯಗೊಂಡ ಪ್ರವಾಸಿಗರನ್ನು 108 ವಾಹನದಲ್ಲಿ ನೆರವು ನೀಡಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿ,ಚಿಕಿತ್ಸೆ ಕೊಡಿಸಲಾಗಿದೆ. ಚಿಕ್ಕಮಗಳೂರು ನಿಂದ ಗೋವಾ ಪ್ರವಾಸಕ್ಕೆ ಹೊರಟಿದ್ದ ಖಾಸಗಿ ಪ್ರವಾಸಿ ಬಸ್ ಹೊನ್ನಾವರ ಗೇರುಸೊಪ್ಪ ಹೆದ್ದಾರಿಯ ತಿರುವಿನಲ್ಲಿ ರಸ್ತೆ ಬದಿ ಧರೆಗೆ ಗುದ್ದಿಕೊಂಡಿದೆ. ಪರಿಣಾಮ
9 ಜನ ಪ್ರವಾಸಿಗರು ತೀವ್ರ ಗಾಯಗೊಂಡರು.
ತಕ್ಷಣ 108 ವಾಹನದ ನರ್ಸ ಗಜಲಕ್ಷ್ಮಿ,ಚಾಲಕ ಗೋಪಾಲ ನಾಯ್ಕ ಗಾಯಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಪಸ್ವಲ್ಪ ಗಾಯಗೊಂಡ ಪ್ರವಾಸಿಗರು ಮತ್ತು ಸುರಕ್ಷಿತ ವಾಗಿದ್ದವರು ಗೋವಾ ಪ್ರವಾಸವನ್ನು ಟೂರಿಸ್ಟ ರದ್ದು ಮಾಡಿ, ವಾಪಸ್ ಚಿಕ್ಕಮಗಳೂರಿಗೆ ತೆರಳಲು ಸಜ್ಜಾಗಿದ್ದಾರೆ .
