ಮನಸು ಮೃದಂಗ
(ಲೇಖನಗಳ ಸಂಕಲನ)
ಲಿಂಗಾಂತರ
ಒಂದು ದಿನ ದೂರದರ್ಶನದಲ್ಲಿ ಬೆಳ್ಳಂಬೆಳಗ್ಗೆಯೇ ಹಿಂಸಾತ್ಮಕ ದೃಶ್ಯವೊಂದು ರಾರಾಜಿಸುತ್ತಿತ್ತು. ರಕ್ಕಸ ತಂದೆ ತಲ್ವಾರ್ನಿಂದ ಮಗಳ ರುಂಡವನ್ನು ಬೆರ್ಪಡಿಸಿ, ಕೂದಲನ್ನು ಹಿಡಿದು ಚೆಂಡಿನಂತೆ ರುಂಡವನ್ನು ತಿರುಗಿಸುತ್ತಾ ಅತ್ತಿಂದ ಇತ್ತಾ ಇತ್ತಿಂದ ಅತ್ತಾ ಅತಿಮಾನುಷ ಶಕ್ತಿಯನ್ನು ಪಡೆದವನಂತೆ ವಿಚಿತ್ರವಾಗಿ ಹುಚ್ಚನಂತೆ ಆಡುತ್ತಿದ್ದ. ತಡೆಯಲು ಬಂದವರಿಗೆ ಕೈಯಲ್ಲಿ ಹಿಡಿದ ತಲ್ವಾರ್ನ್ನು ತೋರಿಸುತ್ತಾ, ಕೂಗುತ್ತಾ ಒಡಾಡುತಿದ್ದ. ಈ ದೃಶ್ಯವನ್ನು ಕಂಡ ಅಲ್ಲಿಯ ಜನರು ಭಯಭೀತರಾಗಿ ಓಡುತಿದ್ದರು. ಈಕೆಯ ರುಂಡವನ್ನು ಕತ್ತಿರಿಸುವ ಮುನ್ನ ಅಲ್ಲಿಯ ಜನರು ಎಷ್ಠೇ ಪ್ರಯತ್ನಪಟ್ಟು ತಡೆಯಲು ಯತ್ನಿಸಿದರೂ ಈ ಕೃತ್ಯವನ್ನು ತಡೆಯಲು ಅಸಾಧ್ಯವಾಯಿತು.
ಈ ನೇರ ದೃಶ್ಯಾವಳಿ ನನ್ನನ್ನು ಮೂಕವಿಸ್ಮಯವಾಗಿಸಿತು. ಇದನ್ನೆಲ್ಲ ಕಣ್ಣಾರೆ ನೋಡಿದ ಜನ ಅವನನ್ನು ಹುಚ್ಚನೆಂದೇ ಭಾವಸಿದ್ದರು. ಆ ಕೃತ್ಯದ ಹಿಂದೆ ಅಡಿಗಿದ್ದ ಅವನ ಮನೋ ವೇದನೆ ಅಲ್ಲಿ ನೆರಿದಿದ್ದ ಜನರಿಗೆ ಅರಿವಾಗರಿಲಿಲ್ಲ ಎಂಬುದು ನನ್ನ ಭಾವನೆ. ಏನೇ ಆದರೂ ಹತ್ಯೆ ಹತ್ಯೆಯೆ. ವಾಹಿನಿಯ ದೃಶ್ಯ ನನ್ನನ್ನು ಇಪ್ಪತೈದು ವರ್ಷಗಳ ಹಿಂದಿನ ಘಟನೆಯ ನೆನಪಿಗೆ ಕೊಂಡೊಯಿತು. ಆ ಘಟನೆ ನನ್ನ ಇಡೀ ವೃತ್ತಿಯ ಜೀವಮಾನದಲ್ಲಿ ಮರೆಯಲಾಗದ ಘಟನೆ.
ರಾಷ್ಟ್ರೀಯ ಮಾನಸಿಕ ನರ ವಿಜ್ಞಾನ ಕೆಂದ್ರದಲ್ಲಿ ನಾನು ಡಿಪ್ಲಮೊ ಪದವಿಯನ್ನು ಮಾಡುತ್ತಿದ್ದಾಗ ನನಗೆ “klein felters syndrome” ” ಕಾಯಿಲೆಯ ಲಕ್ಪ್ಷಣ ಚಿಕಿತ್ಸಾ ಚರ್ಚಾ ವಿಷಯವನ್ನು ನನ್ನ ಪ್ರೋಫೆಸರ್ ನನಗೆ ನೀಡಿದ್ದರು. ಈ ಸಿಂಡ್ರೋಮ್ನಿಂದಾಗಿ ಒಬ್ಬರಲ್ಲೆ ದ್ವಿಲಿಂಗ ಜನಕಾಂಗಳನ್ನು ಒಳಗೊಂಡು ಗರ್ಭದಲ್ಲೆ ಬಂದಿರುವಂತಹ ತೊಂದರೆಗಳನ್ನು, ಜೀವತಂತು ಆಥವ ವಂಶವಾಹಿನಿಗಳ ನ್ಯೂನತೆಗಳಿಂದ ಆದಂತಹ ಜನಕಾಂಗಗಳ ಬೆಳವಣಿಗೆಯ ರಚನಾ ಸಮಸ್ಯೆಗಳನ್ನು, ಸಲಿಂಗ ಕಾಮವನ್ನು, ಕಾಮ ವಿಕೃತಗಳನ್ನು, ಲಿಂಗ ಸರಿಯಿದ್ದರೂ ಲಿಂಗ ಬದಲಾವಣಾ ಬಯಕೆಗಳ ಅನೇಕ ಪುಸ್ತಕಗಳನ್ನು ಹಾಗು ಪತ್ರಿಕೆಗಳನ್ನು ಅಧ್ಯಯನ ಮಾಡಿ ಈ ವಿಚಾರವಾಗಿ ಸಾಕಷ್ಟು ತಿಳಿದಿದ್ದೆ. ಲಿಂಗ ತಾರತಮ್ಯ, ಲಿಂಗ ನಡುವಳಿಕಾ ನ್ಯೂನತೆಗಳು, ಲಿಂಗ ಭಾವನ ಘರ್ಷಣೆ, ಕೆಲವು ವಿಕೃತಗಳಲ್ಲದ ಲೈಂಗಿಕ ಮನೋ ರೋಗಗಳನ್ನು ಅಧ್ಯಯನ ಸಹಾ ಮಾಡಿದ್ದೆ. ಈ ಅಧ್ಯಯನದಿಂದ ನನ್ನ ಖಾಸಗಿ ವೈದ್ಯ ವೃತ್ತಿಗೆ ಪ್ರತಿಕೂಲವೇ ಆಯಿತು.
ಮರ್ನಾಲ್ಕು ವರ್ಷಗಳು ಸಂದಿರಬಹುದು ನನ್ನ ವೃತ್ತಿ ಸೇವೆಯನ್ನು ಪ್ರಾರಂಭಿಸಿ, ಈ ಸಮಯ ನನ್ನ ವೃತ್ತಿಯ ಪರಿಪಕ್ವತಾ ಕೊರತೆಯಿಂದ ಲಿಂಗ ಬದಲಾವಣಾ ಬಯಕೆಗೆ ಸಂಬಂಧಪಟ್ಟಂತಹ ವಿದ್ಯಾರ್ಥಿನಿಗೆ ಸಲಹೆ ನೀಡಿ ಅಡಿಕೆ ಕತ್ತರಿಯ ಮಧ್ಯೆ ಸಿಕ್ಕಿಕೂಂಡ ಅನುಭವವನ್ನು ತಿಳಿಸುವೆ. ಇಂತಹ ವೃತ್ತಿ ತೊಂದರೆ ಯಾವ ವೃತ್ತಿಯಲ್ಲೂ ಸಹ ಆಗಬಹುದು, ಅದರಲ್ಲೂ ವಿಶೇಷವಾಗಿ ವೈದ್ಯ ವೃತ್ತಿಯಲ್ಲಿ ಹೆಚ್ಚು ಕಾಣುವೆವು.
ಒಂದು ದಿವಸ ಪ್ರತಿದಿನ ಕಾಲೇಜಿಗೆ ಬಂದು ಹೋಗುವ ಒಬ್ಬ ವಿದ್ಯಾರ್ಥಿನಿ ನನ್ನ ಬಳಿ ಸಲಹೆ ನಿಮಿತ್ತ ಬಂದಿದ್ದಳು. ಅವಳ ಅಳಲೆಂದರೆ “ನನ್ನ ಹುಟ್ಟು ಹೆಣ್ಣಾಗಿದ್ದರೂ ಗಂಡಾಗಬೇಕೆಂಬ ಬಯಕೆ ಡಾಕ್ಷ್ಟೇ “. ಜೀವತಂತುವಿನ ಪ್ರಕಾರ ಆಕೆಯ ಸ್ವರೂಪ ಹೆಣ್ಣೆಂದು ಸಾಭೀತು ಪಡಿಸಿದರೂ ಅವಳ ಮನೋ ನಿಷ್ಠೆಯು ಗಂಡಾಗ ಬೇಕೆಂಬ ಚಿತ್ತ ಭಾವ ಚಂಚಲತೆಯಿಂದ ಬಳಲುತ್ತಿತ್ತು. ಈಕೆಯ ಪ್ರಕಾರ ಒಬ್ಬ ಗಂಡು ಏನೆಲ್ಲಾ ಮಾಡಲು ಸಾಧ್ಯವೊ ಅದೆಲ್ಲವನ್ನು ಮಾಡುತ್ತಿದ್ದಳು. ಅಂದರೆ ಬೀಡಿ ಸೇದುವುದು, ನಿಕ್ಕರ್ ಹಾಗು ಪ್ಯಾಂಟ್ ಧರಿಸುವುದು, ಮರ ಹತ್ತುವುದು, ತನ್ನ ಉಬ್ಬಿರುವ ಸ್ತನಗಳು ಕಾಣದಂತೆ ಗಟ್ಟಿಯಾಗಿ ಬಟ್ಟೆ ಸುತ್ತಿ ರವಿಕೆ ಧರಿಸುವುದು, ಅವಳ ಲೈಂಗಿಕಾ ಆಸಕ್ತಿ ಹುಡುಗಿಯರ ಮೇಲೆ ಹೊರತು ಹುಡುಗರ ಕಡೆ ಕಣ್ಣೆತ್ತಿಯೂ ಸಹ ನೋಡುತ್ತಿರಲಿಲ್ಲ.
ಇದು ಯುವಕಾಸಕ್ತಿ ಅಲ್ಲದೆ ತಾನು ಮಗುವಾಗಿದ್ದಲಿಂದಲು ಗಂಡು ಹುಡಗರ ಆಟ ಹಾಗು ಚಟುವಟಿಕೆಗಳಲ್ಲಿ ಒತ್ತು ನೀಡುತ್ತಿದ್ದಳು. ಈಕೆಯನ್ನು ನಾನು ಅನುಭೂತಿ ಹಾಗು ಸಹಾನುಭೂತಿಗಳಿಂದ ವ್ಯವಹರಿಸಿ ಪೋಷಕರನ್ನು ಕರೆತರಲು ತಿಳಿಸಿ ಕಳಿಸಿದೆ. ಆಕೆ ತಂದೆಗೆ ಇವಳ ಮನೋ ಇಂಗಿತ ಹಾಗು ಕಾತುರಗಳನ್ನು ತಿಳಿಸಿ ಮತ್ತು ಅವಳ ಅಂತರಾಳದ ಬಯಕೆಯನ್ನು ನೀಗಿಸಲು ಅವಳ ಸ್ವ ಇಚ್ಚೆಗೆ ಅನುಗುಣವಾಗಿ ಜನಕಾಂಗಗಳ ಮಾರ್ಪಾಟು ಮಾಡುವ ಶಸ್ತç ಚಿಕಿತ್ಸೆಗೆ ಸಲಹೆ ನೀಡಿದ್ದೆ. ಈ ಶಸ್ತ್ರ ಚಿಕಿತ್ಸೆಗೆ ತಾಯಿಯೂ ಸಹ ಒಪ್ಪಿಗೆ ನೀಡಿದ್ದರು. ಆಕೆಯು ಕೆಲವು ವೇಳೆ ತನ್ನ ನೆಂಟರಮನೆಯಲ್ಲೇ ವಾಸ್ತವ್ಯ ಹೂಡುವಳಾಗಿದ್ದರಿಂದ ಆಕೆಯ ನೆಂಟರ ಹುಡಿಗಿಯ ಜೊತೆ ಪ್ರೇಮಾ ಪಾಶದಲ್ಲಿ ಬಿದ್ದಿದ್ದಳು. ಈ ಪ್ರೀತಿಗೆ ಆಕೆಯ ಒಪ್ಪಿಗೆಯೂ ಕೂಡ ಇತ್ತು. ಪೋಷಕರಿಗೆ ಮಾತ್ರ ಈ ವಿಷಯ ತಿಳಿದಿತ್ತು ಮತ್ತು ಎಲ್ಲವು ಗೌಪ್ಯವಾಗಿಯೆ ನೆಡೆದಿತ್ತು.
ಜಾಜ
ಹೀಗಿದ್ದಾಗ ಕೆಲವು ತಿಂಗಳುಗಳ ನಂತರ ದಿನಪತ್ರಿಕೆ ಒಂದರಲ್ಲಿ “ಸಹಭಾಗಿತ್ವ ಆತ್ಮಹತ್ಯೆಯ” ವಿಚಾರದ ಮಾಹಿತಿ ದೂಡ್ಡ ಅಕ್ಷರದಲ್ಲಿ ಮುದ್ರಿತಗೊಂಡಿತ್ತು. ಆ ಮಾಹಿತಿಯ ಪ್ರಕಾರ ಲಿಂಗ ಪರಿವರ್ತನಾಪೇಕ್ಷಿ ಸಾವಿನ ಜೊತೆ ಸೆಣಸಾಡಿ ಬದುಕುಳಿದಳು. ಆದರೆ ‘ಸಪಿಂಡ’ ಎಂಬ ನಾಮಾಂಕಿತಳು ಯಮ ಲೋಕ ಸೇರಿದ್ದಳು. ವಿಷಯವನ್ನು ಓದಿ ಖೇದವಾದರೂ ನನ್ನ ಮನಸ್ಸಿನಲ್ಲಿ ನನ್ನ ಆ ಲಿಂಗ ಬದಲಾವಣೆಯ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಯಿತಲ್ಲಾ ಎನ್ನೊ ಕೊರಗು ನನ್ನಲ್ಲಿಯೇ ಉಳಿದು ಹೋಯಿತು. ಆದರೆ ನನ್ನನ್ನು ಬಲವಾಗಿ ಕಾಡಿದ ವಿಷಯ “ಸಲಿಂಗ ಕಾಮಿಗಳ ಅತ್ಮಹತ್ಯೆ” ಗೆ ಕಾರಣ ಮುಗ್ದತೆಯ ಮುದ್ರಣ ಹಾಗು ಮುದ್ರಣಕಾರ. ಈ ರೀತಿಯಾದಂತಹ ಲೈಂಗಿಕ ನ್ಯೂನತೆಗಳ ಬಗ್ಗೆ ಅರಿವಿಲ್ಲದಿರುವುದರಿಂದ ಈ ರೀತಿ ಮಾಹಿತಿ ಒದಗಿಸಿದ್ದನೆನ್ನುವ ಊಹೆ ನನ್ನದು.
ಕೆಲವು ತಿಂಗಳ ನಂತರ ಅದೇ ಪತ್ರಿಕೆಯ ಒಬ್ಬ ಪತ್ರಕರ್ತ ತನ್ನ ಖಿನ್ನತೆಗೆ ನನ್ನ ಬಳಿ ಸಲಹೆಗೆಂದು ಬಂದ್ದಿದ್ದ. ಮೊದಲೇ ತಿಳಿಸಿದ ಹಾಗೆ ವೃತ್ತಿಯ ಸೂಕ್ಷ್ಮವನ್ನು ಅರಿಯದ ನಾನು ಅವನಲ್ಲಿ ಜನ ಸಾಮಾನ್ಯರಿಗೆ ತಿಳುವಳಿಕೆಗೋಸ್ಕರ ಲಿಂಗ ಬದಲಾವಣೆ ಬಯಕೆಯ ರೂಪ ರೇಖೆಗಳನ್ನು ಹಾಗು ಲಕ್ಷಣಗಳನ್ನು ತಿಳಿಸಿ ಎಂದು ಮನವಿ ಮಾಡಿದ್ದೆ. ಮಾರನೆ ದಿನ ನಾನು ಹೇಳಿದ್ದನ್ನು ಸ್ವಲ್ಪವೂ ತಿರುಚದೆ, ಮರೆ ಮಾಚದೆ ಹೇಳಿದ ಹಾಗೆಯೇ ಮುದ್ರಿಸಿದ್ದರು. ನನ್ನ ಮನವಿಯೇನೊ ಸರಿ, ಆದರೆ ಆಕೆಯ ತಮ್ಮನು ಸಹ ಸಲಿಂಗ ಕಾಮಿ ಎಂಬ ವಿಷಯವನ್ನು ನಾನು ಗೌಪ್ಯವಾಗಿ ಇಡಬೇಕಾಗಿತ್ತು. ಈ ಎಡವಟ್ಟಿನಿಂದ ಆಕೆಯ ಪೋಷಕರು ನನ್ನನ್ನು ಕಾನೂನು ಮೆಟ್ಟಿಲೇರಲು ಸೂಚಿಸಿ ಪಟ್ಟಣದಲ್ಲಿ ಹಲಾಹಲಾಬ್ಬಿಸಿದ್ದರು. ಕೊನೆಗೆ ನನ್ನ ತಪ್ಪು ಅರಿವಾಗಿ ಮೌಕಿಕ ಕ್ಷಮಾಪಣೆಯನ್ನು ಈಕೆಯ ಪೋಷಕರಿಗೆ ತಿಳಿಸಿ ಹಾಗು ನನ್ನ ಆಪ್ತ ವಕೀಲ ಮಿತ್ರರ ಮತ್ತು ವೈದ್ಯ ಮಿತ್ರರ ಸಹಾಯದಿಂದ ನನ್ನ ಸಂದಿಗ್ದ ಪರಿಸ್ಥಿತಿ ಕೊನೆಗೆ ತಿಳಿಯಾಯಿತು.
ನಾನು ಮೊದಲೇ ತಿಳಿಸಿದ ಹಾಗೆ ಇಂತಹ ಲೈಂಗಿಕ ಮನೋ ಚಂಚಲತೆಗಳು ಮತ್ತು ಲಿಂಗ ತಾರತಮ್ಯಗಳು ವಂಶವಾಹಿನಿಯಲ್ಲು ಅನುಗುಣವಾಗಿ ಕಾಣಬಹುದು. ಆದುದರಿಂದ ಸಾಮಾಜಿಕ ಕಾಳಜಿ ಹೊತ್ತ ವೃತ್ತಿಪರನು ಕೆಲವೊಮ್ಮೆ ಸತ್ಯವನ್ನು ಗೌಪ್ಯ ಮಾಡಬೇಕಾಗುತೆನ್ನುವ ಉದಾಹರಣೆಗೆ ನನ್ನ ಈ ಅನುಭವವೂ ಒಂದು.

ಇಂದು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯ ಸಲಿಂಗಕಾಮವನ್ನು ತನ್ನ ಅಪರಾಧ ಸ್ಥಾನದಿಂದ ತೆಗೆದು ಹಾಕಿರುವುದು ಸ್ವಾಗತಾರ್ಹ. ಇಲ್ಲಿಯವರಿಗು ಇವರಗಳು ತಾವು ಅಪರಾಧಿಗಳಂತೆ ತೆರೆಮರೆಯಲ್ಲೇ ತಮ್ಮ ಕಾಮ ತೃಷೆಯನ್ನು ತೀರಿಸಿಕೊಳ್ಳುತ್ತಿದ್ದರು. ಎಲ್ಲರು ಇವರನ್ನು ‘ಅಪರಾಧಿ’ ಹಣೆ ಪಟ್ಟಿ ನೀಡಿ ಇಲ್ಲದ ಭಾವನೆಗೆ ದೂಡಿದ್ದರು. ಇವರ ಗುಂಪಿನ ಮಾನಸಿಕ ಸ್ಥಿತಿ ದೇವರೇ ಬಲ್ಲ. ಕೆಲವು ಸರ್ಕಾರೇತರ ಮಾನವೀಯ ಹಕ್ಕು ಪ್ರತಿಪಾದಿಸುವ ಸಂಘಟನೆಗಳಿಂದ ಹಾಗು ಕಾನೂನಿನ ತಿದ್ದುಪಡಿಯ ವಿದೇಯಕದಿಂದ ಇವರನ್ನು ಸಾಮನ್ಯ ಜನರ ದಾರಿಯಲ್ಲೆ ತರಲು ಶ್ರಮವಹಿಸಿ ಹೋರಾಡಿದ್ದಾರೆನ್ನುವುದು ಎಲ್ಲರಿಗು ತಿಳಿದಿರುವ ವಿಷಯ. ಅಂದರೆ ಅವರಿಗೂ ನಮ್ಮಂತೆಯೇ ಸಮಾನ ಅವಕಾಶ ಎಲ್ಲದರಲ್ಲೂ ಸಿಗಬೇಕೆಂಬುದು. ಸಂತೋಷ, ಅವರು ಸಹ ನಮ್ಮಂತೆಯೇ ಅಲ್ಲವೇ?.
ಓದುಗರೆ ನಾವು ಇಲ್ಲಿ ಗಮಿನಿಸಬೇಕಾದ ವಿಷಯ ಒಂದಿದೆ, ಆ ವಿಷಯ ನೈಸರ್ಗಿಕ ಹಾಗು(ಅನೈಸರ್ಗಿಕ?) ಶಾಸನಬದ್ಧ ಕಾನೂನುಗಳು. ಅಂದರೆ “natural law” ” ಮತ್ತು “statuatory law”. “. ಮೊದಲನೆಯ ಕಾನೂನು ಬ್ರಹ್ಮವಿತ್ತ ಕಾನೂನು, ಇನ್ನೊಂದು ನಾವು ನಮ್ಮ ಪ್ರಜಾಪ್ರಭುತ್ವದ ಕಾನೂನಿನ ಅಡಿ ಸಮಾಜದ ಒಳತಿಗೋಸ್ಕರ ಮಾಡಿಕೂಂಡ ಕಾನೂನು. ಇಂದಿನ ಮಾನವನು ಸಕಾರಾತ್ಮಕ ಭಾವನೆಗಳನ್ನು ಹೊಂದಿ ಹಾಗು ಚಿಂತನಾ ಸಧ್ಬಾವನೆಯನ್ನು ಪಡೆದು ಸಲಿಂಗ ಕಾಮಿಗಳನ್ನು ಸಮಾಜದ ದೃಷ್ಟಿಯಲ್ಲಿ ನಮ್ಮಂತೆಯೆ ಅನ್ನುವ ಮನೋಭಾವ ಹೊಂದಿರುವುದು ಮೆಚ್ಚಬೇಕಾದ ಸಂಗತಿ. ಆದರೆ ಆ ಸೃಷ್ಠಿಕರ್ತನು ಇವರನ್ನು ಒಪ್ಪುವುದಿಲ್ಲ ಎನ್ನುವ ವಿಚಾರ ನನ್ನದು. ಕಾರಣ, ಎಲ್ಲರು ಸಲಿಂಗ ಕಾಮಿಗಳಾದರೆ ನಮ್ಮ ಸಂತಾನವೇ ನಿಲ್ಲಬಹುದೆನ್ನುವ ಭಯ ಅವನದು.
ನಮ್ಮ ಪೀಳಿಗೆ ಸರ್ವನಾಶವಾದರೆ ಈ ಬ್ರಹ್ಮನನ್ನು ಅರಿಯುವವರಾದರು ಯಾರು? ಈ ಸ್ಥಿತಿ ಒದಗಿ ಬಂದಲ್ಲಿ ಇದನ್ನು ನಿಜವಾದ “ಪ್ರಳಯ”ವೆನ್ನಬಹುದು. ಈ ಕಾರಣದಿಂದಲೇ ಬ್ರಾಹ್ಮಣಸಾಹಿ (ಜ್ಞಾನಉಳ್ಳವರು)ಗಳು ಸಪಿಂಡ ಕಾಮವನ್ನು ಒಪ್ಪದೇ ಇರುವುದು. ನಾ ಹೇಳಿದ್ದು ನನ್ನ ಅಭಿಪ್ರಾಯವಷ್ಠೆ, ತಿಳಿದುಕೊಳ್ಳುವುದು, ತಿಳಿದುಕೊಳ್ಳದೆ ಇರುವುದನ್ನು ಒದುಗರ ಇಚ್ಚೆಗೆ ಬಿಡುವೆನು.
ಮೊದಲೆ ತಿಳಿಸಿದ ಲಿಂಗ ಬದಲಾವಣೆ ಬಯಕೆಯ ಹೊಂದಿದ್ದಾಕೆಯ ಸ್ವರ್ಗಿಯಾ ಪ್ರೇಯಸಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನನ್ನ ಬಳಿ ಬಂದು ಇಬ್ಬರು ದೂರ ಓಡಿಹೋಗಿ ಮದುವೆ ಮಾಡಿಕೊಳ್ಳವ ಇಚ್ಚೆಯನ್ನು ತಿಳಿಸಿದ್ದಳು. ಮದುವೆಗೆ ಇಬ್ಬರ ಸಮ್ಮತಿಯೂ ಇತ್ತು. ಆದರೆ ಸಲಿಂಗ ಮದುವೆ ಕಾನೂನು ಬಾಹಿರ ಹಾಗು ಶಿಕ್ಷಾರ್ಹ. ಈ ಕಾರಣದಿಂದ ಹತ್ತಿರದ ಪಟ್ಟಣದಲ್ಲಿದ್ದ ಪ್ಲಾಸ್ಟಿಕ್ ಸರ್ಜನ್ ((plastic surgeon) ಒಬ್ಬರನ್ನು ವಿಚಾರಿಸಿ ಲಿಂಗ ಬದಲಾವಣೆ ಬಯಸಿದ್ದಾಕೆಯನ್ನು ಮನ ಒಲಿಸಿ ಹಾಗು ಪೋಷಕರ ಒಪ್ಪಿಗೆ ಪಡೆದು ಲಿಂಗ ಪರಿವರ್ತನಾ ಶಸ್ತ್ರ ಚಿಕಿತ್ಸೆಗೆ ಕಷ್ಠಪಟ್ಟು ಒಪ್ಪಿಸಿದ್ದೆ. ನನ್ನ ಉಬ್ಬಿದ ಉಸಿರುಬುರಡೆಯಂತಹ ಮನೊ ಸಲಹಾ ಚೇತನವನ್ನು ಇವರ ಆತ್ಮಹತ್ಯೆಯ ನಡುವಳಿಕೆ ಆ ಗಳಿಗೆಯಲ್ಲೇ ಟುಸ್ಸ್ ಎನಿಸಿತು. ನನ್ನ ಪ್ರಯತ್ನವೆಲ್ಲಾ ‘ಹೊಳೆಯಲ್ಲಿ ಹುಣುಸೆ ಹಣ್ಣು ತೊಳೆದಂತಾ’ಯಿತು. ನನ್ನ ಮನಿಸ್ಸಿನ ಮೂಲೆಯಲ್ಲಿ “ಇದು ಆಗಬಾರಿದಿತ್ತು” ಎನ್ನೊ ನೊವ್ವು ಇಂದಿಗೂ ಉಳಿದುಬಿಟ್ಟಿದೆ.
ಕೆಲವು ವರ್ಷಗಳ ಹಿಂದಿನ ಘಟನೆಯೊಂದು ನೆನಪಾಯಿತು, ಸುಮಾರು ಇಪ್ಪತ್ತೊಂದು ವಯೋಮಾನದ ಇದ್ದ ಒಬ್ಬನೆ ಮಗನನ್ನು ತಂದೆ ನನ್ನ ಬಳಿ ಸಲಹೆಗೆಂದು ಕರೆತಂದಿದ್ದರು. ಅವರ ಅಹವಾಲೆಂದರೆ “ಡಾಕ್ಟ್ರೇ ನನ್ನ ಮಗನನ್ನು ಮೊದಿಲನಂತೆ ಮಾಡಬಲ್ಲಿರಾ”? ಈ ಪ್ರಶ್ನೆಗೆ ನಾನು ತಬ್ಬಿಬ್ಬಾದರೂ ಇವನನ್ನು ಪರೀಕ್ಷೆ ಮಾಡಿದ ನನಗೆ ಆಶ್ಚರ್ಯವಾಯಿತು. ತಂದೆಯ ಆಜ್ಞೆಯ ಮೇರೆಗೆ ಇವನು ಅಂಗಿಯನ್ನು ಕಳಿಚಿದಾಗ ಇವನ ಎದೆಗಳು ಹದಿನೆಂಟು ವರ್ಷದ ಹುಡುಗಿಯನ್ನು ನಾಚಿಸುವಂತಿವೆ, ತಾನು ತನ್ನ ಪ್ಯಾಂಟ್ ಕೆಳಗೆ ಮಾಡಿದಾಗ ಅವನ ಶಿಶ್ನವನ್ನು ಹಾಗು ವೃಷ್ಣ ಸಮೇತ ಅದರ ಚೀಲವನ್ನು ಸಹ ತಗೆದು ಹಾಕಲಾಗಿದೆ ಮತ್ತು ಶಸ್ತ್ರ ಚಿಕಿತ್ಸೆಯ ಮೂಲಕ ಆ ಜಾಗವನ್ನು ಹೆಣ್ಣಿನ ಜನನನಾಂಗದ ಸ್ಥಿತಿಗೆ ತರಲಾಗಿದೆ.
ಈ ಶಸ್ತ್ರ ಚಿಕಿತ್ಸಾ ಶಿಲ್ಪ ಕಲೆ ನನ್ನ ಚಿತ್ತ ರಸ “dopamine”” ನ್ನೆ ಕ್ಷಣ ಕೆಣಕಿದಂತೆ ತೋರಿತು. ಅಂದರೆ ಆ ನೋಟ ಹೆಣ್ಣಿನ ಅಂಗಾಗಳಷ್ಠೇ ನೈಜವಾಗಿತ್ತು. ಇತಿಹಾಸವನ್ನು ಕೆದಕಿದಾಗ, ಇವನು ಎರಡು ವರ್ಷಗಳ ಹಿಂದೆ ಅಪಹರಿಸಲ್ಪಟ್ಟಿದ್ದರಿಂದ ಅರಕ್ಷಕ ಠಾಣೆಯಲ್ಲಿ ಪೋಷಕರು ‘ಕಾಣೆಯಾಗಿದ್ದಾನೆ’ ಎನ್ನೊ ದೂರು ನೀಡಿದ್ದರು. ಪೋಷಕರು ಹಾಗು ಬಂದುಗಳು ಹುಡಕಾಡಿ ಸಿಗದಿದ್ದ ಕಾರಣ ಮತ್ತೆ ಹುಡಕಲು ಹೊಗರಿಲಿಲ್ಲ. ಪೋಷಕರು ಇವನನ್ನು ಮರೆತಿದ್ದರು. ಎರಡು ವರ್ಷಗಳ ತರುವಾಯಾ ಅವನೇ ಇದ್ದಕ್ಕಿದ್ದಂತೆ ಮನೆ ಮುಂದೆ ಹಾಜರ್ ಆಗಿದ್ದನ್ನು ನೊಡಿ ಆಶ್ಚರ್ಯದಿಂದ ವಿಚಾರಸಿದ ಪೋಷಕರಿಗೆ ಆಕಾಶವೆ ಕಳಿಚಿ ಬಿದ್ದಂತಾಗಿತ್ತು. ಆತ್ಮಸಮಾಲೋಚನಾ ಸಂದರ್ಭ ದಲ್ಲಿ ತಿಳಿದ್ದಿದ್ದೆಂದರೆ ಇವನನ್ನು ಹಿಜಡಾಗಳು ಅಪಹರಿಸಿ ನರೆ ರಾಜ್ಯಕ್ಕೆ ಕರೆದುಕೊಂಡು ಹೋಗಿ ನಿದ್ರೆ ಬರುವ ತಿನಿಸುಗಳನ್ನು ತಿನಿಸಿದ್ದರು. ತದನಂತರ ಏನಾಯಿತೆನ್ನುವ ಜ್ಞಾಪಕವೂ ಸಹ ಅವನಲ್ಲಿ ಇರಲಿಲ್ಲ ಎನ್ನುವದು ತಿಳಿಯಿತು. ಇವನ ಇತಿಹಾಸ ತಿಳಿಯುವ ವೇಳೆ ನನಗೆ ಸಂದಿಗ್ನ ಸ್ಥಿತಿ ಎದುರಾಗಿ ಯಾವ ಸಲಹೆಯನ್ನು ನೀಡಬೇಕೆನ್ನುವ ಗೂಂದಲದ ನೆನಪು ಮಾತ್ರ ನನ್ನಲ್ಲಿ ಉಳಿದುಬಿಟ್ಟಿದೆ. ಸ್ನೇಹಿತರೆ, ಇಲ್ಲಿ ತಿಳಿಸಿದ ಮಾನವ ಸಂಘರ್ಷದ ಹೀನ ಕೃತ್ಯಕ್ಕೆ ಯಾರು ಹೊಣೆ?
ಪ್ರವಾಸೋಧ್ಯಮವೇ ಕಾಯಕವೆಂದುಕೊಂಡಿರುವ ಕೆಲವು ರಾಷ್ಠçಗಳಲ್ಲಿ ಹೆಣ್ಣೆ ಆದಿ ಶಕ್ತಿಯೆಂದು ಪೂಜಿತ್ತಾರೆ. ಈ ದೇಶಗಳಲ್ಲಿ ಅನೇಕ ಯುವಕರು ಲಿಂಗ ಬದಳಾವಣೆಯನ್ನು ಬಯಸಿ ಹೆಣ್ಣಾಗಿ ಪರಿವರ್ತನೆಗೂಳ್ಳುವರು. ಅವರ ಉದ್ದೇಶ ಆಕರ್ಷಣೆಯೊ, ದುಡಿಯುವ ಹಂಬಲವೊ, ಆಕರ್ಷಣೆಯೊ, ಮನೋ ನ್ಯೂನತೆಯೊ, ಪ್ರವಾಸರಿಗೆ ಮನರಂಜನೆಯ ನೀಡುವ ಉದ್ದೇಶವೋ ತಿಳಿಯದು.
ನಾನು ನೋಡಿದ ಅಂತಹ ದೇಶ ಥೈಲಾಂಡ್. ಈ ದೇಶದಲ್ಲಿ ಲಿಂಗ ಪರಿವರ್ತನೆ ಹೊಂದಿದ ಹುಡಗರನ್ನು “Lady boy” ” ಎಂದು ಕರಿಯುವರು. ಇವರನ್ನು ವೈದ್ಯಕೀಯ ಭಾಷೆಯಲ್ಲಿ “ಟ್ರಾನ್ಸ್ ಜೆಂಡರ್ (trans gender)” ” ಎಂದು ಕರೆಯುವರು. ಅನೇಕ ಆಟಗಾರರು, ನಟ ಮತ್ತು ನಟಿಯರು, ಸೌಂದರ್ಯ ವರ್ಧಿನಿಯರು, ಉದ್ಯಮಿಗಳು ಮತ್ತು ರಾಜಕಾರಣಿಗಳು ಈ ವಿರಾಗ ವಿರುದ್ದ ಭಾವದಿಂದ ನರಳಿ ಹೆಣ್ಣು ಗಂಡಿಗೆ ಹಾಗು ಗಂಡು ಹೆಣ್ಣಿಗೆ ಪರಿವರ್ತನಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇವರಿಗೆ ಬೇಕಾಗಿರುವುದು ಅನುಕಂಪ ಹಾಗು ಅನುಬೂತಿ ಮಾತ್ರ, ಲೈಂಗಿಕ ವಿಕೃತ ಹಣೆ ಪಟ್ಟಿಯಲ್ಲ.
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

