ಹಾಸನ: ನಗರದ ಶಿವ್ಯಾ ಐವಿಎಫ್ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರು ತ್ರಿವಳಿ ಮಕ್ಕಳಿಗೆ ಯಶಸ್ವಿಯಾಗಿ ಜನ್ಮ ನೀಡಿದ್ದಾರೆ. ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಭವ್ಯ ಸುನಿಲ್ ಅವರ ನೇತೃತ್ವದಲ್ಲಿ ನಡೆದ ಚಿಕಿತ್ಸೆ ಯಶಸ್ವಿಯಾಗಿ ಮುಗಿದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಡಾ. ಸುನಿಲ್ ಅವರು ಮಕ್ಕಳ ತಜ್ಞರಾಗಿದ್ದು, ಮೂರೂ ಮಕ್ಕಳೂ ಗಂಡು ಮಕ್ಕಳು. ತಾಯಿ ಮತ್ತು ಮಗುಗಳು ಆರೋಗ್ಯವಾಗಿದ್ದು, ವೈದ್ಯಕೀಯ ಸಿಬ್ಬಂದಿಯ ನಿಗಾ ವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಇಬ್ಬರು ಹೆಣ್ಣು ಮಕ್ಕಳು ಮತ್ತು ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದ ಘಟನೆ ನಡೆದಿದೆ.
ನಗರದಲ್ಲಿ ಎರಡು ಅಪರೂಪದ ತ್ರಿವಳಿ ಜನನದ ಪ್ರಕರಣಗಳು ಸ್ವಲ್ಪ ದಿನಗಳ ಅಂತರದಲ್ಲೇ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
