ತುಮಕೂರು:ಕಡಿಮೆ ಖರ್ಚಿನಲ್ಲಿ ಜಿಲ್ಲೆಯ ಜನರಿಗೆ ಹೃದಯಕ್ಕೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆ ನೀಡುವುದು ನಮ್ಮ ಧ್ಯೇಯ,ಒತ್ತಡದ ಜೀವನ ಕಡಿಮೆ ಮಾಡಬೇಕು,ನಿಗಧಿತ ವ್ಯಾಯಾಮ,ಉತ್ತಮ ಆಹಾರ,ಮನೆಯ ಆಹಾರ ಸೇವಿಸುವುದು ಸೇರಿದಂತೆ ಉತ್ತಮ ಹವ್ಯಾಸ ರೂಢಿಸಿಕೊಂಡರೆ ಹೃದಯ ಚೆನ್ನಾಗಿರುತ್ತದೆ ಎಂದು ಖ್ಯಾತ ಹೃದಯ ತಜ್ಞ ಡಾ||ಭಾನುಪ್ರಕಾಶ್.ಹೆಚ್.ಎಂ.ರವರು ತಿಳಿಸಿದರು.
ಅವರು ನೂತನವಾಗಿ ತುಮಕೂರು ನಗರದ ಕೆ.ಆರ್.ಬಡಾವಣೆಯಲ್ಲಿ ನಿರ್ಮಿಸಿರುವ ಮಿಡಿತ ಹೃದ್ರೋಗ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ನಾನು ಕಳೆದ 10 ವರ್ಷಗಳಿಂದ ಹೃದಯ ತಜ್ಞನಾಗಿ ಜಯದೇವ ಆಸ್ಪತ್ರೆ,ಫೋರ್ಟಿಸ್,ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಈಗ ನಾನೇ ಸ್ವಂತ ಆಸ್ಪತ್ರೆಯನ್ನು ತೆರೆಯುತ್ತಿದ್ದೇನೆ,ಬಡ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ಬೆಲೆಗೆ ಗುಣಮಟ್ಟದ ಸೇವೆಯನ್ನು ನೀಡುವುದು ನನ್ನ ಗುರಿ,ಹೃದಯ,ಕವಾಟ,ಐಸಿಯು,ಕ್ಯಾಥ್ ಲ್ಯಾಬ್,ಓಟಿ,ಉತ್ತಮ ರೂಂ,ಖಾಸಗಿ ರೂಂ,ಹೀಗೆ ಎಲ್ಲ ಬಗೆಯ ಸೇವೆಗಳು ಲಭ್ಯವಿದೆ,ಇದರೊಂದಿಗೆ ದಾದಿಯರು,ಎಕೋ,ಟಿಎಂಟಿ ಮಾಡಿಸಲು,ಹೀಗೆ ಎಲ್ಲ ಬಗೆಯ ಸೇವೆಗಳು ಲಭ್ಯವಿದ್ದು ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು,ಬೆಂಗಳೂರಿನಲ್ಲಿ ದೊರೆಯಬಹುದಾದ ಎಲ್ಲ ಸೇವೆಗಳು ತುಮಕೂರಿನಲ್ಲಿ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು.
ನವೆಂಬರ್ 30 ಭಾನುವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಸಿದ್ಧಲಿಂಗಸ್ವಾಮೀಜಿಗಳ ಪಾದಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುವುದು,11 ಗಂಟೆಗೆ ಪೂಜ್ಯರ ದಿವ್ಯಸಾನಿಧ್ಯದಲ್ಲಿ ಗೃಹಸಚಿವ ಡಾ||ಜಿ.ಪರಮೇಶ್ವರ್ ರವರು ಉದ್ಘಾಟಿಸುವರು,ಕೇಂದ್ರ ರೈಲ್ವೇ ಖಾತೆ ರಾಜ್ಯಸಚಿವ ವಿ.ಸೋಮಣ್ಣ ಅಧ್ಯಕ್ಷತೆ ವಹಿಸುವರು,ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಎನ್.ರಾಜಣ್ಣ,ಜಿ.ಬಿ.ಜ್ಯೋತಿಗಣೇಶ್,ಬಿ.ಸುರೇಶ್ ಗೌಡ,ಡಾ||ಪರಮೇಶ್.ಎಸ್,ಡಾ||ಪ್ರಭಾಕರ್ ಕೋರೆಗಲ್ ಮುಂತಾದವರು ಆಗಮಿಸುವರು ಆದ್ದರಿಂದ ತುಮಕೂರಿನ ಮಹಾಜನತೆ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮನ್ನು ಆಶೀರ್ವದಿಸಬೇಕೆಂದು ಡಾ||ಭಾನುಪ್ರಕಾಶ್.ಹೆಚ್.ಎಂ.ರವರು ಮನವಿ ಮಾಡಿದರು.
– ಕೆ.ಬಿ.ಚಂದ್ರಚೂಡ
