ತುಮಕೂರು:ಇತ್ತೀಚಿನ ದಿನಗಳಲ್ಲಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಶೇರು ಮಾರುಕಟ್ಟೆ ಎಂದರೇನು ಹೂಡಿಕೆ ಮಾಡುವುದು ಹೇಗೆ ಟ್ರೇಡಿಂಗ್ ಪ್ರಕ್ರಿಯೆ, ಸೂಚ್ಯಾಂಕಗಳು ಮತ್ತು ಮಾರುಕಟ್ಟೆಯ ಏರಿಳಿತಗಳನ್ನು ಹೇಗೆ ನಿಭಾಯಿಸಬೇಕು ಎಂಬಂತಹ ಮೂಲಭೂತ ವಿಷಯಗಳ ಕುರಿತು ಸಂಕ್ಷಿಪ್ತವಾಗಿ ವಾಣಿಜ್ಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಟಿ.ಕೆ ದುರ್ಗಾಪ್ರಸಾದ್ ಹೇಳಿದರು.
ನಗರದ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಎಂ.ಕಾಂ. ಸ್ನಾತಕೋತ್ತರ ವಿಭಾಗದಿಂದ ನಾವಿಗೇಟಿಂಗ್ ಸೆಕ್ಯೂರಿಟಿ ಮಾರ್ಕೆಟ್ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ||ಟಿ.ಬಿ.ನಿಜಲಿಂಗಪ್ಪನವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಐ.ಕ್ಯು.ಎ.ಸಿ ಕೋಆರ್ಡಿನೇಟರ್ ಶ್ರೀಮತಿ ಹೆಚ್.ಜಿ. ಸರ್ವಮಂಗಲ ಪಿ.ಜಿ. ಕೋ-ಆರ್ಡಿನೇಟರ್ ಶ್ರೀಮತಿ ರತ್ನಮ್ಮ.ವೈ.ಎಸ್. ಅಧ್ಯಾಪಕರುಗಳಾದ ಡಾ.ಜ್ಯೋತಿ, ಜ್ಯೋತಿ.ಜೆ.ಟಿ ಮತ್ತು ಶ್ರೀಮತಿ ಸುಗುಣರವರು ಉಪಸ್ಥಿತರಿದ್ದರು.
– ಕೆ.ಬಿ. ಚಂದ್ರಚೂಡ

[…] […]