ತುಮಕೂರು- ವೀರಶೈವ ಸಹಕಾರ ಬ್ಯಾಂಕಿನ ಕೇಂದ್ರ ಕಚೇರಿ ಆವರಣದಲ್ಲಿ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 7ನೇ ಪುಣ್ಯಸ್ಮರಣೆ ಆಚರಿಸಿ ದಾಸೋಹ ದಿನ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷರಾದ ಕೆ.ಮಲ್ಲಿಕಾರ್ಜುನಯ್ಯ, ನಿರ್ದೇಶಕರುಗಳಾದ ಟಿ.ಜೆ.ಗಿರೀಶ್,ಷಣ್ಮುಖ,ಬದ್ನಾಳ್ ಮಂಜುನಾಥ್,ಚಂದ್ರಶೇಖರ್,ಶ್ರೀಕಂಠಸ್ವಾಮಿ,ಮಲ್ನಾಡ್ ಸಂತೋಷ್ ಮತ್ತು ಇತರೆ ನಿರ್ದೇಶಕರುಗಳು, ವೀರಶೈವ ಸಮಾಜದ ಉಪಾಧ್ಯಕ್ಷರು ಹಾಗೂ ಬ್ಯಾಂಕಿನ ಸಿಇಓ , ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
