ತುಮಕೂರು: ಭಾರತ ವಿಶ್ವದ ಸಾಫ್ಟ್ವೇರ್ ಕೇಂದ್ರವಾಗಿದ್ದರೂ, ಅನೇಕ ಪದವೀಧರರು ಅನುಭವಹೀನರಾಗಿಯೇ ಉಳಿದುಕೊಂಡಿದ್ದಾರೆ. ಪದವೀಧರರಲ್ಲಿ ತಕ್ಕಮಟ್ಟದ ಕೌಶಲ್ಯವಿಲ್ಲದಿರುವುದರಿಂದ ಹಳೆಯ ತಂತ್ರಜ್ಞಾನಗಳಿಗೆ ಮರಳಬೇಕಾಗುತ್ತಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ಕುಮಾರ್ ಹೇಳಿದರು.
ನಗರದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯಲ್ಲಿ ಬಿಸಿಎ ವಿಭಾಗದ ‘ವಿ-ಟೆಕ್ನಾಕ್ರ್ಯಾಟ್ಸ್’ ಮತ್ತು ಬಿಬಿಎ ವಿಭಾಗದ ‘ವಿ-ನೆಕ್ಸೋರಾ’ ಫೋರಂಗಳ ವತಿಯಿಂದ ಸೋಮವಾರ ಆಯೋಜಿಸಲಾದ ಎರಡು ದಿನಗಳ ‘ವಿ-ಇನ್ಫಿನಿಟಿ 2025’ ಎಕ್ಸ್ಪೊವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಮತ್ತು ಯಂತ್ರಗಳು ಸರಳ ಕೆಲಸಗಳನ್ನು ಮಾಡುತ್ತಿರುವುದರಿಂದ, ಮಾನವರು ಸೃಜನಶೀಲತೆ ಮತ್ತು ಸಮಸ್ಯೆ-ಪರಿಹಾರ ಕೌಶಲ್ಯಗಳ ಮೇಲೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ಸಮಯದಲ್ಲಿಯೇ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗಬೇಕು. ಇದು ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಅಥವಾ ಸ್ವಂತ ಸ್ಟಾರ್ಟ್ಅಪ್ ಸಂಸ್ಥೆಯನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.ನಿರಂತರ ಕಲಿಕೆಯ ಮೂಲಕ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಸಕ್ರಿಯರಾಗಿರುವುದು ಭವಿಷ್ಯದ ಯಶಸ್ಸಿನ ರಹಸ್ಯವಾಗಿದೆ ಎಂದರು.

ಲಕ್ಷಾಂತರ ವಿಜ್ಞಾನ ಪದವೀಧರರು ಐಟಿ ಉದ್ಯಮಕ್ಕೆ ಅರ್ಹರಾಗಿದ್ದರೂ, ಪದವಿಯೇ ಸಾಕಾಗುವುದಿಲ್ಲ. ತಂತ್ರಜ್ಞಾನದೊಂದಿಗಿನ ನಿಮ್ಮ ಅಭಿವೃದ್ಧಿಯೇ ನಿರ್ಣಾಯಕ ಅಂಶವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಅಪ್ಲಿಕೇಶನ್ಗಳು ಮತ್ತು ಇತರ ತಾಂತ್ರಿಕ ಪರಿಹಾರಗಳ ಮೂಲಕ ವಿಶ್ವ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಕೌಶಲ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.

ಲಕ್ಷಾಂತರ ವಿಜ್ಞಾನ ಪದವೀಧರರು ಐಟಿ ಉದ್ಯಮಕ್ಕೆ ಅರ್ಹರಾಗಿದ್ದರೂ, ಪದವಿಯೇ ಸಾಕಾಗುವುದಿಲ್ಲ. ತಂತ್ರಜ್ಞಾನದೊಂದಿಗಿನ ನಿಮ್ಮ ಅಭಿವೃದ್ಧಿಯೇ ನಿರ್ಣಾಯಕ ಅಂಶವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಅಪ್ಲಿಕೇಶನ್ಗಳು ಮತ್ತು ಇತರ ತಾಂತ್ರಿಕ ಪರಿಹಾರಗಳ ಮೂಲಕ ವಿಶ್ವ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಕೌಶಲ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಮಾಗೋಡಿಬಿಯ ಸೀನಿಯರ್ ಅಕಾಡೆಮಿಯಾ ಪಾರ್ಟ್ನರ್ಶಿಪ್ ಮ್ಯಾನೇಜರ್ ಜಿ.ಎನ್.ಬಸವದರ್ಶನ ಅವರು ಮಾತನಾಡಿ, ಪ್ರತಿ ವರ್ಷ ಒಂದು ಕೋಟಿ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸುತ್ತಾರೆ, ಆದರೆ 50-55% ಮಾತ್ರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಉದ್ಯೋಗ ಪಡೆಯುತ್ತಾರೆ. ಉಳಿದವರು ಸ್ಪರ್ಧೆಯಲ್ಲಿ ಹಿಂದುಳಿದು ವಿಫಲರಾಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅಮೂಲ್ಯ.ಜಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ.ಎ. ವಿಭಾಗದ ನಿರ್ದೇಶಕರಾದ ಡಾ. ಪ್ರಸನ್ನಕುಮಾರ್ ಟಿ.ಎಂ.,ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
