ತುಮಕೂರು : ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಇಂದು ತುಮಕೂರು ನಗರದ ಅಮಾನಿಕೆರೆ ಆವರಣದಲ್ಲಿರುವ ಸಂವಿಧಾನ ಪೀಠಿಕೆ ಪುತ್ಥಳಿಯ ಮುಂಭಾಗದಲ್ಲಿ 76ನೇ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ನಮ್ಮ ದೇಶದಲ್ಲಿ ಈ ಹಿಂದೆ ಇದ್ದಂತಹ ಅನಿಷ್ಠ ಪದ್ಧತಿಯಾದ ಅಸ್ಪೃಶ್ಯತೆ, ಜಾತಿ ಬೇಧಬಾವ, ವರ್ಣ ಬೇದ ಸೇರಿದಂತೆ ಇನ್ನಿತರೆ ತುಳಿತಕ್ಕೆ ಒಳಗಾಗಿದ್ದಂತಹ ಅಸಂಖ್ಯಾತ ಜನರಿಗೆ ಒಂದು ಸಂವಿಧಾನ ಎಂಬ ಅಸ್ತçವನ್ನಾಗಿ ನೀಡಿದ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರವರು, ಅವರು ನಮ್ಮಗಳಿಗೆ ನೀಡಿದ ಈ ಪವಿತ್ರ ಗ್ರಂಥದಿಂದ ಇಂದು ಅಸಂಖ್ಯಾತ ಜನರು ನಿರ್ಭಯ, ನಿರ್ಭೀತ, ಸಮನ್ವಯತೆ, ಸಹಬಾಳ್ವೆ ಇಂದ ಜೀವನ ನಡೆಸಲು ಸಾಧ್ಯವಾಗುತ್ತಿದೆ, ಅಲ್ಲದೇ ಅಂಬೇಡ್ಕರ್ರವರಿಂದ ರಚಿತವಾದ ಈ ಸಂವಿಧಾನವನ್ನು ಅನೇಕದ ದೇಶಗಳು ಮಾದರಿಯನ್ನಾಗಿ ಸ್ವೀಕರಿಸಿವೆ, ಜೊತೆಗೆ ವಿಶ್ವದಲ್ಲೇ ಅತ್ಯುನ್ನತ ಮಹತ್ವ ಪಡೆದಿದೆ, ಇಂತಹ ಗ್ರಂಥವನ್ನು ನಮ್ಮ ಭಾರತ ಸರ್ಕಾರಕ್ಕೆ ಅಂಬೇಡ್ಕರ್ರವರು ನವೆಂಬರ್ 26ರಂದು ಸಮರ್ಪಣೆ ಮಾಡಿದ ದಿನವನ್ನೇ ಸಂವಿಧಾನ ಸಮರ್ಪಣಾ ದಿವಸ್ ಆಗಿ ಆಚರಿಸಿಕೊಂಡು ಬರುತ್ತಿದ್ದೇವೆಂದು ತಿಳಿಸಿದರು.
ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯರಾದ ಕೆ.ಗೋವಿಂದರಾಜು ಮಾತನಾಡಿ ಹಲವಾರು ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿಂದ ಕೂಡಿದ್ದಂತಹ ನಮ್ಮ ದೇಶದಲ್ಲಿ ಸಮಗ್ರ ಏಕತೆಯಿಂದ ಮುನ್ನಡೆಸಬೇಕು ಎಂಬ ಸದಾಶಯದೊಂದಿಗೆ ಅಂದಿನ ಭಾರತ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ರವರಿಗೆ ಒಂದು ಮಹತ್ವಕಾರ್ಯವನ್ನು ವಹಿಸಿಕೊಟ್ಟಿದ್ದರು, ಸಮಾಜದಲ್ಲಿನ ಸ್ವಯಂ ತುಳಿತಕ್ಕೆ ಒಳಗಾಗಿದ್ದ ಅಂಬೇಡ್ಕರ್ರವರು ತಮ್ಮ ಜೀವನದಲ್ಲಿ ಆದಂತಹ ಘಟನೆಗಳು ಸೇರಿದಂತೆ ಪ್ರಸ್ತತದ ವಿದ್ಯುನ್ಮಾನಗಳನ್ನು ನೋಡಿ, ಹಲವಾರು ದೀನ ದಲಿತರ ಶೋಷಣೆಗಳನ್ನು ಸಹಿಸಿಕೊಳ್ಳಲು ಆಗದೇ, ಸಮಾಜದಲ್ಲಿ ಪ್ರತಿಯೊಬ್ಬ ಜೀವಿಯು ಸರ್ವ ಸಮಾನವಾಗಿ ಬದುಕಬೇಕು ಅದಕ್ಕಾಗಿ ಒಂದು ಹೊಸ ಕಾನೂನು ಆಗಬೇಕು, ಆ ಕಾನೂನು ಕಾರ್ಯರೂಪಕ್ಕೆ ಬರಬೇಕು ಅದಕ್ಕೆ ಸರ್ವ ಸಮಾನತೆಯ ಮಾನ್ಯತೆ ದೊರೆಯಬೇಕು ಎಂಬ ಛಲದಿಂದಲೇ ಭಾರತದ ಸಂವಿಧಾನವನ್ನು ರಚಿಸಲು ಮುಂದಾದರು, ಅದನ್ನು ಸುದೀರ್ಘ ಕಾಲ ಅಧ್ಯಯನ ಮಾಡಿ ರಚನೆ ಮಾಡಿ ನಮ್ಮ ಭಾರತ ಸರ್ಕಾರಕ್ಕೆ ಸಮರ್ಪಿಸಿದರಲ್ಲದೇ ಅದು ಸರ್ವರೂ ಒಪ್ಪುವಂತಹ ರೀತಿಯಲ್ಲಿ ಇದ್ದ ಕಾರಣ ಅದು ಅಂದು ಕಾರ್ಯರೂಪಕ್ಕೆ ಬಂದಿತು, ಜೊತೆಗೆ ಇಂದಿಗೂ ಅದನ್ನು ಪ್ರತಿಯೊಬ್ಬರೂ ಅನುಸರಿಸಿಕೊಂಡು ಬರುತ್ತಿದ್ದೇವೆಂದು ತಿಳಿಸಿದರು.
ಇಸ್ರತ್ ಉನ್ನಿಸಾ, ಲಕ್ಷ್ಮೀನಾರಾಯಣ ಎಸ್, ಟೈಲರ್ ಜಗದೀಶ್, ಇಂದ್ರ ಕುಮಾರ್ ಡಿ.ಕೆ, ಇಲ್ಲಸ್ ಅಹ್ಮದ್, ಇಮ್ರಾನ್ ಅಹಮದ್, ದಿಬ್ಬೂರು ಶ್ರೀನಿವಾಸ್, ಮಾರ್ಗೋ ವೆಂಕಟೇಶ್, ಮಾರ್ಕೆಟ್ ಮಣ್ಣೆಪ್ಪ, ಜುಬೇರ್ ಪಾಷಾ, ರಂಗಸ್ವಾಮಯ್ಯ ಕೆ.ಎಸ್, ಕಿರಣ್ ವೈ.ಎಸ್, ಮನು ಟಿ, ಗಂಗಾಧರ್ ಜಿ.ಆರ್, ಗೂಳೂರು ರಾಜಣ್ಣ, ಮೋಮಿನ್ ಅಹ್ಮದ್, ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
