ತುಮಕೂರು: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಡಿಗಾಗಿತಮ್ಮತನು, ಮನ, ಧನ ಹಾಗೂ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವ ಸರ್ವೋದಯ ದಿನವನ್ನು ಹುತಾತ್ಮರ ದಿನವನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ರಾಷ್ಟçಪಿತ ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್ಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರಾದ ಮುರುಳೀಧರ ಹಾಲಪ್ಪ,ಸರ್ವೋದಯ ದಿನದ ಹೆಸರಿನಲ್ಲಿ ಭಾರತೀಯರ ಹಕ್ಕು ಮತ್ತು ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸುವ ಕೆಲಸವನ್ನು ಇಡೀ ದೇಶದಾದ್ಯಂತಆಚರಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಸಹ ದೇಶಕ್ಕಾಗಿ ಮಡಿದ ನಮ್ಮ ನಾಯಕರುಗಳನ್ನು ಸ್ಮರಿಸಲು ಹುತಾತ್ಮರ ದಿನವನ್ನು ಆಚರಿಸುತ್ತಿದೆ ಎಂದರು.
ಇದನ್ನು ಓದಿ: ತುಮಕೂರು: ಕುಷ್ಠ ರೋಗಿಗಳನ್ನು ಸದಾ ಪ್ರೀತಿಯಿಂದ ಕಾಣಿ- ಮುರಳೀಧರಹಾಲಪ್ಪ
ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು, ಬ್ರಿಟೀಷರ ಕಪಿಮುಷ್ಠಿಯಿಂದ ಭಾರತೀಯರನ್ನು ಬಿಡಿಸಲು ಹೋರಾಡಿ, ತಮ್ಮ ಪ್ರಾಣಾರ್ಪಣೆ ಮಾಡಿದ ಮಹನೀಯರನ್ನು ಸ್ಮರಿಸುವುದು ಸರ್ವೋದಯ ದಿನದ ಉದ್ದೇಶ. ಕಾಂಗ್ರೆಸ್ ಪಕ್ಷಕ್ಕೆ ಸರ್ವೋದಯ ದಿನ ಆಚರಿಸಲು ಹೆಚ್ಚಿನ ಅರ್ಹತೆ ಇದೆ. ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು, ಮುಖಂಡರು ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯೇಜಿಸಿದ್ದಾರೆ. ತಮ್ಮ ಪ್ರಾಣಕ್ಕಿಂತ ದೇಶದ ರಕ್ಷಣೆ ಮುಖ್ಯ ಎಂಬುದನ್ನು ಇಂದಿರಾಗಾಂಧಿ ಅಪರೇಷನ್ ಬ್ಲೂ ಸ್ಟಾರ್ ಮೂಲಕ,ಶ್ರೀಲಂಕಕ್ಕೆ ಭಾರತೀಯ ಶಾಂತಿ ಪಾಲನಾ ಪಡೆಯನ್ನು ಕಳುಹಿಸುವ ಮೂಲಕ ರಾಜೀವಗಾಂಧಿ ಅವರುಗಳು ತೊರಿಸಿಕೊಟ್ಟಿದ್ದಾರೆ.ಇವರ ಆದರ್ಶಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾದರಿಯಾಗಬೇಕು.ನಾವುಗಳು ಮೇಲ್ನೋಟಕ್ಕೆ ಕಾಂಗ್ರೆಸ್ ಕಾರ್ಯಕರ್ತರಾಗದೆ, ಮನಸ್ಸಿನಿಂದ ಕಾಂಗ್ರೆಸ್ ಪಕ್ಷದಕಾರ್ಯಕರ್ತರಾಗಬೇಕೆಂದರು.
ಡಿಸಿಸಿ ಅಧ್ಯಕ್ಷರಾದ ಚಂದ್ರಶೇಖರಗೌಡ ಅಧ್ಯಕ್ಷತೆ ವಹಿಸಿದ್ದರು ಗಂಗಹನುಮಯ್ಯ,ನರಸೀಯಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್,ಜಿಲ್ಲಾ ವಕ್ತಾರರಾದ ಸುಜಾತ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
