ತುಮಕೂರು: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ನೆನಪು ಮಾಡಿಕೊಳ್ಳುವ ದಿನವೇ ಸರ್ವೋದಯ ದಿನವಾಗಿದೆ. ಈ ದಿನವನ್ನು ನ್ಯಾಯಾಂಗ ಇಲಾಖೆ ಸ್ವಚ್ಚತಾ ದಿನವನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ನೂರುನ್ನಿಸ ತಿಳಿಸಿದ್ದಾರೆ.
ನಗರದ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀಶಾರದದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ,ಪಾವಗಡ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತುಮಕೂರು, ಜಿಲ್ಲಾ ಕುಷ್ಠ ರೋಗ ನಿರ್ಮೂಲಾನಾಧಿಕಾರಿಗಳು, ತುಮಕೂರು ಹಾಗೂ ಡೇಮಿಯನ್ ಫೌಂಡೇಷನ್, ಚನೈ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸರ್ವೋದಯ ದಿನಾಚರಣೆ, ಹುತಾತ್ಮರ ದಿನಾಚರಣೆ ಹಾಗೂ ಸ್ಪರ್ಶ ಕುಷ್ಠರೋಗ ಜಾಗೃತಿ ಆಂದೋಲನ ಅಂಗವಾಗಿ ಕುಷ್ಠ ರೋಗಿಗಳಿಗೆ ವಿವಿಧ ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಮಹನೀಯರ ತ್ಯಾಗ, ಬಲಿದಾನದ ಕುರಿತು ಮಕ್ಕಳಿಗೆ ತಿಳಿಸಬೇಕಾಗಿದೆ ಎಂದರು.
ಸ್ವಚ್ಛತೆ ಎಂಬುದು ಕೇವಲ ದೇಹ ಮತ್ತು ಮನಸ್ಸಿಗೆ ಸಂಬAಧಿಸಿದಲ್ಲದೆ, ಆದು ಆತ್ಮದ ಶುದ್ಧಿಗೂ ಸೇರಿದ್ದಾಗಿದೆ.ಯಾರ ಆತ್ಮ ಶುದ್ಧಿ ಇರುತ್ತದೆಯೋ, ಅವರು ಇತರರಿಗೆ ಮಾದರಿಯಾಗಿರುತ್ತಾರೆ.ದೇಹ ಮತ್ತು ಆತ್ಮದ ಶುದ್ಧಿಗಾಗಿ ಅನೇಕ ಔಷಧಗಳನ್ನು ಬಳಸುತ್ತೇವೆ.ಆದರೆ ಆತ್ಮದ ಶುದ್ಧಿಗೆ ಯಾವ ಔಷಧವೂ ಇಲ್ಲ.ಇತರರನ್ನು ನಮ್ಮಂತೆ ಕಾಣುವ,ಅಶಕ್ತರು, ಬಡವರನ್ನು ಕಂಡರೆ ಸಹಾಯ ಹಸ್ತ ಚಾಚುವ ಗುಣ ಆತ್ಮಶುದ್ದಿಗೆ ಮೂಲಮಂತ್ರವಾಗಿದೆ.ಅದು ಮನುಷ್ಯನಲ್ಲಿನ ರಾಕ್ಷಸತ್ವಗುಣವನ್ನು ತೊಲಗಿಸಿ, ದೈವತ್ವ ಗುಣಗಳನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಕೈಲಾದಷ್ಟು ಬಡವರಿಗೆ, ಆಶಕ್ತರಿಗೆ ಸಹಾಯ ಮಾಡೋಣ ಎಂದು ನ್ಯಾಯಾಧೀಶರು ಸಲಹೆ ನೀಡಿದರು.
ಇದನ್ನು ಓದಿ: ತುಮಕೂರು: ವಾರ್ತಾ ಇಲಾಖೆಯ ರೂಪಕಲಾ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ
ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರಹಾಲಪ್ಪ ಮಾತನಾಡಿ,ವೈದ್ಯರಾಗಿದ್ದ ನಮ್ಮ ತಂದೆ, ಕುಷ್ಠ ರೋಗಿಗಳ ಬಗ್ಗೆ ನಮಗೆ ತಿಳುವಳಿಕೆ ನೀಡಿದ್ದರು.ಅದೊಂದು ಗುಣಪಡಿಸಬಹುದಾದ ಖಾಯಿಲೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಹಾಗಾಗಿಯೇ ನಾವು ಕಲಿಯುವಂತಹ ಸಂದರ್ಭದಲ್ಲಿಯೇ ಜಾಗೃತಿ ಮೂಡಿತ್ತು.ಪಾವಗಡದ ಶ್ರೀಜಪಾನಂದ ಶ್ರೀಗಳ ಸೇವೆಯನ್ನು ಹತ್ತಿರದಿಂದ ನೋಡಿದಾಗ ಮತ್ತಷ್ಟು ಗೌರವ ಭಾವನೆ ಅವರ ಬಗ್ಗೆ ಮೂಡಿದೆ.ಸ್ವತಃ ಅವರ ಕುಷ್ಠ ರೋಗಿಗಳಿಗೆ ಚಿಕಿತ್ಸೆ, ಔಷಧೋಪಾಚಾರ ಮಾಡಿ,ಖಾಯಿಲೆಯನ್ನು ವಾಸಿ ಮಾಡಿದ್ದಾರೆ.ಕುಷ್ಠ ರೋಗಿಗಳ ಸೇವೆಯ ಜೊತೆಗೆ, ಕ್ಷಯ,ಕಣ್ಣು, ಹೃದ್ರೋಗ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸೇವೆ ವಿಸ್ತಾರಗೊಂಡಿದೆ.ಕು಼ಷ್ಠ ರೋಗಿಗಳ ಚಿಕಿತ್ಸೆ ಜೊತೆಗೆ, ಅವರ ಜೀವನಾಧಾರಕ್ಕೂ ಸರಕಾರ ಅನುದಾನ ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ಶ್ರೀಜಪಾನಂದ ಜೀ ಮಾತನಾಡಿ, ಇಂದು ಮಹಾತ್ಮಗಾಂಧಿ ನಮ್ಮೊಂದಿಗೆ ಇಲ್ಲ.ಕಳೆದ 35 ವರ್ಷಗಳಿಂದ ಗಾಂಧೀ ಸಂಸ್ಮರಣೆ ಮತ್ತು ಸರ್ವೋದಯ ದಿನವನ್ನು ಶ್ರೀರಾಮಕೃಷ್ಣ ಆಶ್ರಮದ ವತಿಯಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ.ಆರು ವರ್ಷಗಳಿಗೂ ಹೆಚ್ಚು ದಿನ ಜೈಲಿನಲ್ಲಿ ಕಳೆದರು.ಗಾಂಧೀಜಿ ಸಹ ಕುಷ್ಠ ರೋಗಿಗಳ ಸೇವೆಯಲ್ಲಿ ತೊಡಗಿದ್ದರು.ಇಂದು ನಮ್ಮೊಂದಿಗೆ ಮೊಬಲಿಟಿ ಇಂಡಿಯಾ ಹಾಗೂ ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯದ ಡಾ.ಕೆ.ಜಿ.ಪರುಶುರಾಮ್ ತಂಡ ಇದೆ. ಯಾರು ಆಧೀರರಾಗಬೇಡಿ ಎಂದರು.
ಕಾರ್ಯಕ್ರಮದಲ್ಲಿ ಡಿಹಚ್.ಓ.ಡಾ.ಚಂದ್ರಶೇಖರ್, ಜಿಲ್ಲಾ ಸರ್ಜನ್ ಡಾ.ಆಸ್ಗರ್ ಬೇಗ್, ಡಾ.ರವೀಂದ್ರನಾಯ್ಕ.ಕೆ, ಡಾ.ಮೋಹನ್ದಾಸ್, ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಕುಷ್ಠ ರೋಗಿಗಳಿಗೆ ಹೊಸ ವಸ್ತç, ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
– ಕೆ.ಬಿ.ಚಂದ್ರಚೂಡ

[…] […]