ತುಮಕೂರು: ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್ಗೆ ಕರ್ನಾಟಕದಿಂದ ಒಟ್ಟು 06 ಎನ್.ಎಸ್.ಎಸ್. ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು ಇದರಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ತುಮಕೂರು ನಗರದ ವಿದ್ಯೋದಯ ಕಾನೂನು ಕಾಲೇಜಿನ 5 ವರ್ಷದ ಬಿ.ಎ.ಎಲ್.ಎಲ್.ಬಿ. 9ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ಎನ್.ಎಸ್.ಎಸ್. ವಿದ್ಯಾರ್ಥಿನಿಯಾದ ಕುಮಾರಿ ಅತ್ಫ್ ಎಂ. ರವರು ಆಯ್ಕೆಯಾಗಿರುತ್ತಾರೆ.
ಮೊಟ್ಟ ಮೊದಲನೇ ಬಾರಿಗೆ ವಿಶ್ವವಿದ್ಯಾಲಯದಿಂದ ಹಾಗೂ ಈ ವರ್ಷ ತುಮಕೂರು ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿನಿಯಾಗಿರುವುದು ಹೆಮ್ಮೆಯ ವಿಷಯವಾಗಿರುತ್ತದೆ.
ಇದನ್ನು ಓದಿ: ತುಮಕೂರು- ಕನ್ನಡಿಗರು ನೆಲ,ಜಲ,ಭಾಷೆಗಾಗಿ ಹೋರಾಡಿ-ಶಾಸಕ ಜಿ.ಬಿ.ಜ್ಯೋತಿಗಣೇಶ್
ಈ ಒಂದು ಸಾಧನೆಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪ್ರೊ.ಡಾ.ಸಿ.ಬಸವರಾಜು ಕುಲಪತಿಗಳು, ಶ್ರೀ ಐ.ಬಿ. ಬಿರಾದರ್, ಎನ್.ಎಸ್.ಎಸ್. ಸಂಯೋಜಕರು, ನವನಗರ ಹುಬ್ಬಳ್ಳಿ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್.ಎಸ್. ಕೆಂಪಣ್ಣನವರು, ಮ್ಯಾನೇಜಿಂಗ್ ಟ್ರಸ್ಟಿಗಳಾದ ಹೆಚ್.ಎಸ್.ರಾಜುರವರು, ಪ್ರೊ.ಕೆ.ಚಂದ್ರಣ್ಣನವರು ಮತ್ತು ಶ್ರೀಮತಿ ಶಮಾ ಸೈಯದಿ ಪ್ರಾಂಶುಪಾಲರು, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ.ಕಿಶೋರ್ ವಿ., ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ಎನ್.ಎಸ್.ಎಸ್. ಸಮಿತಿ ಸದಸ್ಯರು,ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.
– ಕೆ.ಬಿ.ಚಂದ್ರಚೂಡ
