ತುಮಕೂರು: ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಪಡೆಯಬೇಕು. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಛಲ ಬಿಡದೆ ಓದಿದರೆ ಗುರಿ ಸಾಧಿಸಬಹುದು. ಹೆಣ್ಣುಮಕ್ಕಳು ಸುಶಿಕ್ಷಿತರಾದರೆ ಪಡೆದರೆ ಸಮಾಜ, ಕುಟಂಬ ಯಶಸ್ವಿಯಾಗಿ ಸಾಗುತ್ತದೆ ಎಂದು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಧೀರಾನಂದಜೀ ಹೇಳಿದರು.
ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ ಹಾಗೂ ಜಿಲ್ಲಾ ಆರ್ಯ ಈಡಿಗ ಸಂಘದ ಸಹಯೋಗದಲ್ಲಿ ನಗರದ ಜಿಲ್ಲಾ ಆರ್ಯ ಈಡಿಗ ಸಂಘದ ಯೋಗ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.
ಹೆಣ್ಣು ಸೃಷ್ಟಿಯಲ್ಲಿ ಶಕ್ತಿ ರೂಪ. ಆ ಶಕ್ತಿಯನ್ನು ಜಾಗೃತಿಗೊಳಿಸಲು ಇಂತಹ ಆಚರಣೆಗಳು ನೆರವಾಗುತ್ತವೆ. ಹಿಂದೂ ಧರ್ಮದ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಗೆ ತನ್ನದೇ ಆದ ಮಹತ್ವವಿದೆ. ಇವುಗಳನ್ನು ಉಳಿಸಿಬೆಳೆಸುವಲ್ಲಿ ಹೆಣ್ಣುಮಕ್ಕಳ ಜವಾಬ್ದಾರಿ ಹೆಚ್ಚಾಗಿದೆ. ಕುಟುಂಬವನ್ನು, ಸಮಾಜದವನ್ನು ಪರಿವರ್ತನೆ ಮಾಡುವ ಸಾಮರ್ಥ್ಯ ಹೆಣ್ಣಿಗೆ ಇದೆ. ಹೆಣ್ಣನ್ನು ಗೌರವಿಸುವ ಈ ದೇಶದಲ್ಲಿ ಹೆಣ್ಣುಮಕ್ಕಳು ಸುಶಿಕ್ಷಿರಾಗಿ, ಸಂಸ್ಕಾರವAತರಾಗಿ ಬೆಳೆಯಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತುಮಕೂರು ಸೈಬರ್ ಕ್ರೈಂ ಡಿವೈಎಸ್ಪಿ ವಿಜಯಲಕ್ಷ್ಮಿ ಸದಾಶಿವ ಮಾತನಾಡಿ, ಹದಿಹರೆಯದ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳ ಆಕರ್ಷಣೆಯಿಂದ ದೂರ ಇರಬೇಕು ಅಥವಾ ಎಚ್ಚರಿಕೆಯಿಂದ ಬಳಸಬೇಕು. ಸೈಬರ್ ವಂಚರು ಹೆಚ್ಚಾಗುತ್ತಿದ್ದಾರೆ ಹಲವು ರೀತಿಯಲ್ಲಿ ನಿಮಗೆ ವಂಚನೆ ಮಾಡುತ್ತಾರೆ. ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಜೆ.ಪಿ.ಎನ್.ಪಿ ಮಹಾ ಪೋಷಕರಾದ ಲತಾ ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಟಿ.ಎ.ಪಿ. ಶೆಣೈ ಅತಿಥಿಯಾಗಿ ಭಾಗವಹಿಸಿದ್ದರು.
ಎಂ. ನಾಗರಾಜು, ಜೆ.ಪಿ. ಶಿವಣ್ಣಮಲ್ಲಸಂದ್ರ, ಆರ್.ನಾರಾಯಣಸ್ವಾಮಿ, ಎಂ.ಎನ್. ನರಸಿಂಹಮೂರ್ತಿ, ಹೆಚ್.ಎಂ.ಕುಮಾರ್, ಎಲ್ಐಸಿ ನಾರಾಯಣ್, ಓ.ಎಲ್. ಪುರುಷೋತ್ತಮ್, ರವೀಂದ್ರಕುಮಾರ್, ಎನ್.ಆಂಜನೇಯಲು, ಟಿ.ಎನ್. ದಾಕ್ಷಾಯಿಣಿ, ಗೌರಮ್ಮ ಶಾಂತಕುಮಾರ್, ಎನ್. ಮಂಜುನಾಥ್, ಎ.ಎನ್. ಮಂಜುನಾಥ್, ಬಿ.ಎಸ್. ನಾರಾಯನಸ್ವಾಮಿ, ಕುಂದೂರು ಮುರಳಿ ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
