ತುಮಕೂರು: ಕನ್ನಡ ಮತ್ತು ರಕ್ಷಣಾ ವೇದಿಕೆಯಿಂದ ಶನಿವಾರ ನಗರದಲ್ಲಿ ಸಾರ್ವಜನಿಕರಿಗೆ ಕನ್ನಡ ಸಾಹಿತ್ಯ ಪುಸ್ತಕ ವಿತರಿಸಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಮಿಡಿತ ಆಸ್ಪತ್ರೆಯ ಹೃದಯ ತಜ್ಞ ಡಾ.ಭಾನುಪ್ರಕಾಶ್ ಕನ್ನಡ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿದರು. ಕನ್ನಡ ನಮ್ಮ ಮಾತೃಭಾಷೆ, ಭಾಷೆಯನ್ನು ತಾಯಿಯಂತೆ ಪ್ರೀತಿಸಿ ಗೌರವಿಸಬೇಕು. ಕನ್ನಡ ನಾಡುನುಡಿ ರಕ್ಷಣೆ, ಬೆಳವಣಿಗೆಗೆ ಎಲ್ಲರೂ ಬದ್ಧರಾಗಬೇಕು ಎಂದು ಹೇಳಿದರು.

ಈ ವೇಳೆ ಸಾರ್ವಜನಿಕರಿಗೆ ಕನ್ನಡ ಸಾಹಿತ್ಯ ಕೃತಿಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಕನ್ನಡಪರ ಹೋರಾಟಗಾರರಾದ ಶ್ರೀಮತಿ ಕೋಮಲ ವೀರಭದ್ರಯ್ಯ, ಶಬ್ಬೀರ್ ಅಹ್ಮದ್, ರಾಮಣ್ಣ, ರಾಮಚಂದ್ರರಾವ್(ಚಂದ್ರು), ಎಂ.ಗೋಪಿ,ಕನ್ನಡ ಮತ್ತು ಸಂಸ್ಕೃತಿ ವೇದಿಕೆ ರಾಜ್ಯ ಗೌರವಾಧ್ಯಕ್ಷ ಕನ್ನಡಪ್ರಕಾಶ್, ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಆನಂದ್, ಜಿಲ್ಲಾಧ್ಯಕ್ಷ ಬಸವರಾಜು, ಧನಿಯಾಕುಮಾರ್,ಟಿ.ಶ್ರೀನಿವಾಸ್,ಹೆಬ್ಬೂರುಶ್ರೀನಿವಾಸಮೂರ್ತಿ, ಆದಿಲ್ ಬಾಷಾ, ಅನುಶಾಂತರಾಜು, ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
