ತುಮಕೂರು:ಹಿಂದುಳಿದ ವರ್ಗಗಳ ಒಕ್ಕೂಟ ತುಮಕೂರು ಜಿಲ್ಲೆ ಇವರ ವತಿಯಿಂದ ನಗರದ ಶ್ರೀದೇವಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಭಾಂಗಣದಲ್ಲಿ ಅ.4ರಂದು ಶನಿವಾರ ಬೆಳಿಗ್ಗೆ 11ಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಹಕಾರ ರಂಗದಲ್ಲಿ ಉನ್ನತ ಹುದ್ದೆಗೆ ನಿಯುಕ್ತಿಗೊಂಡ ಒಕ್ಕೂಟದ ಪದಾಧಿಕಾರಿಗಳು ಹಾಗೂ ನೂತನ ವಿಧಾನಪರಿಷತ್ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಹಕಾರ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರು ನೆರವೇರಿಸಲಿದ್ದು, ಈ ವೇಳೆ ಜಿಲ್ಲೆಯ ಹಿಂದುಳಿದ ಸಮುದಾಯಕ್ಕೆ ಸೇರಿದ ವಿಧಾನಪರಿಷತ್ ನೂತನ ನಾಮನಿರ್ದೇಶಿತ ಶಾಸಕ ರಮೇಶ್ಬಾಬು, ಬಿಎಂಟಿಸಿ ಉಪಾಧ್ಯಕ್ಷ ನಿಖೇತ್ರಾಜ್ ಮೌರ್ಯ, ನೈಋತ್ಯ ರೈಲ್ವೆ ಸಲಹಾ ಸಮಿತಿ ನೂತನ ಸದಸ್ಯರಾದ ಟಿ.ಕೆ.ಧನಿಯಾಕುಮಾರ್, ಡಿ.ಎಂ.ಸತೀಶ್, ಮಲ್ಲಸಂದ್ರ ಶಿವಣ್ಣ, ಪಿ.ಮೂರ್ತಿ ಹಾಗೂ ಕಾಡಗೊಲ್ಲ ಅಭಿವೃದ್ಧಿ ನಿಗಮಕ್ಕೆ ನೂತನ ಅಧ್ಯಕ್ಷರಾದ ಮಹೇಶ್ ಹಾರೋಗೆರೆ ಅವರನ್ನು ಸನ್ಮಾನಿಸಲಾಗುವುದು. ಅಧ್ಯಕ್ಷತೆಯನ್ನು ಶ್ರೀದೇವಿ ಶಿಕ್ಷಣ ಸಮೂಹದ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ವಹಿಸಲಿದ್ದು, ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್ ಅವರು ಪ್ರಾಸ್ತಾವಿಕ ನುಡಿಯಾಡುವರು.
ಮುಖ್ಯ ಅತಿಥಿಯಾಗಿ ಪ್ರಜಾಪ್ರಗತಿ ಸಂಪಾದಕ ಡಾ.ಎಸ್.ನಾಗಣ್ಣ, ಹಿರಿಯ ಲೆಕ್ಕ ಪರಿಶೋಧಕ ಟಿ.ಆರ್.ಆಂಜಿನಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ಒಕ್ಕೂಟದ ಗೌರವ ಸಲಹೆಗಾರರಾದ ವೆಂಕಟಸ್ವಾಮಿ, ಒಕ್ಕೂಟದ ಉಪಾಧ್ಯಕ್ಷರುಗಳಾದ ಶಾಂತ್ಕುಮಾರ್, ಎಚ್.ವಿ.ಮಂಜೇಶ್(ಒಲಂಪಿಕ್) ಹಾಗೂ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿರುವರು. ಜಿಲ್ಲೆಯ ಹಿಂದುಳಿದ ಸಮುದಾಯದವರು, ನಾಗರಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲೆಯ ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್ ರವರು ಮನವಿ ಮಾಡಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
