ತುಮಕೂರು: ಆಗ್ನೇಯ ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಅವರು ನಗರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದರು. ಪಕ್ಷದ ಮುಖಂಡರು, ಬೆಂಬಲಿಗರೊAದಿಗೆ ನಗರದ ವಿವಿಧೆಡೆ ಪದವೀಧರ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.
ಇದಕ್ಕೂ ಮೊದಲು ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ತಮ್ಮ ಪತ್ನಿ ಅಮೂಲ್ಯ ಹಾಗೂ ಹಲವು ಕಾಂಗ್ರೆಸ್ ಮುಖಂಡರೊಂದಿಗೆ ಶಶಿಹುಲಿಕುಂಟೆಮಠ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಮುಖಂಡರು ಪಕ್ಷದ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಘೋಷಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್, ಅಭ್ಯರ್ಥಿಯಾದ ನಂತರ ಆಗ್ನೇಯ ಪದವೀಧರರ ಕ್ಷೇತ್ರದಾದ್ಯಂತ ಸಾಕಷ್ಟು ಬಾರಿ ಪ್ರವಾಸ ಮಾಡಿ ಸಚಿವರು, ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಹಾಗೂ ಪದವೀಧರ ಮತದಾರರನ್ನು ಭೇಟಿ ಮಾಡಿ ತಮಗೆ ಬೆಂಬಲ ನೀಡುವಂತೆ ಕೋರಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಉತ್ತಮ ಅವಕಾಶ ನಿರ್ಮಾಣವಾಗಿದೆ ಎಂದು ಹೇಳಿದರು.
ತಮ್ಮ ಬೆಂಬಲದ ಅನೇಕ ತಂಡಗಳು ಹೆಚ್ಚು ಮಂದಿ ಪದವೀಧರರ ಮತದಾರರ ನೋಂದಣೆ ಮಾಡಿಸಿ ಸಹಕಾರಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು, ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ಹಂತಹಂತವಾಗಿ ಈಡೇರಿಸುತ್ತಾ ಜನರ ವಿಶ್ವಾಸ ಗಳಿಸಿರುವುದು ತಮ್ಮ ಗೆಲುವಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಅವರು ಶಶಿ ಹುಲಿಕುಂಟೇಮಠ್ ಅವರಿಗೆ ಶುಭ ಕೋರಿ ಗೆಲುವಿಗೆ ಎಲ್ಲಾ ರೀತಿಯ ಸಹಕಾರ ನಿಡುವುದಾಗಿ ಹೇಳಿದರು. ಬೇರೆ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಯನ್ನು ಮೊದಲು ಘೋಷಣೆ ಮಾಡಿರುವುದು ಪ್ರಚಾರ ಮಾಡಲು ಕಾಲಾವಕಾಶ ದೊರಕಿದೆ ಎಂದರು.
ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, ಆಗ್ನೇಯ ಪದವಿಧರರ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಆರಂಭಿಸಿರುವ ಶಶಿ ಹುಲಿಕುಂಟೆಮಠ್, ಮತದಾರರ ಒಲವು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಗೆಲುವಿಗೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಒಟ್ಟಾಗಿ ಒಗ್ಗಟ್ಟಾಗಿ ಕೆಲಸ ಮಾಡಿ ಅವರನ್ನು ಮೇಲ್ಮನೆಗೆ ಕಳಿಸಲಾಗುವುದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಟಿ.ಎಂ.ಮಹೇಶ್, ಸೈಯದ್ ನಯಾಜ್, ಎನ್.ಮಹೇಶ್, ಗುರುಪ್ರಸಾದ್, ಫಯಾಜ್ ಅಹ್ಮದ್, ಟಿ.ಆರ್.ಬಸವರಾಜು, ಶಿವಪ್ರಕಾಶ್, ಸಿ.ಎನ್.ಸುಗುಣಾದೇವಿ, ಕೆ.ಟಿ.ಮಂಜುನಾಥ್, ಪ್ರದೀಪ್ಕುಮಾರ್ ದಾಸೋಹಶಿವಣ್ಣ, ಅಂಬರೀಶ್, ಹೆಬ್ಬೂರುಶ್ರೀನಿವಾಸಮೂರ್ತಿ, ಸುಜಾತ, ಜಯಶಂಕರ್, ಸಂತೋಷ್ಕುಮಾರ್, ಅನಿಲ್ಕುಮಾರ್, ಚರಣ್ರಾಜ್, ಮೋಹನ್ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
