ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ.ಟ್ರಸ್ಟ್ ವತಿಯಿಂದ ಗ್ರಾಮಾಂತರ ತಾಲ್ಲೋಕಿನ ಗಂಗೋನಹಳ್ಳಿಯಲ್ಲಿ ವಾಸವಾಗಿರುವ ನಿರ್ಗತಿಕರಾದ ಕೆಂಪಮ್ಮ ಅವರಿಗೆ ವಾತ್ಸಲ್ಯಮನೆಯನ್ನು ಹಸ್ತಾಂತರಿಸಲಾಯಿತು.ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಸಮಾಜಸೇವಕರಾದ ಮಾಸ್ತಿ ಗೌಡರು ನೂತನ ಮನೆಯನ್ನು ಉದ್ಘಾಟನೆ ಮಾಡಿ ಮನೆ ಹಸ್ತಾಂತರ ಮಾಡಿದರು.
ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಮಾತನಾಡುತ್ತಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬರುವ ವಾತ್ಸಲ್ಯ ಕಾರ್ಯಕ್ರಮದಲ್ಲಿ ನಿರ್ಗತಿಕರಿಗೆ ಮಾಶಾಸನ ಮತ್ತು ಇರಲು ಸೂರು ಇಲ್ಲದವರಿಗೆ ಮನೆನಿರ್ಮಾಣ ಮಾಡುವ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದ್ದು ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ದಾನಗಳ ಬಗ್ಗೆ ಹೇಳುತ್ತಾ ನಿರ್ಗತಿಕರಿಗೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಧೈರ್ಯ ನೀಡುವುದೇ ಅಭಯದಾನ ಎಂದು ತಿಳಿಸಿದರು.
ಸಮಾಜ ಸೇವಕರಾದ ಮಾಸ್ತಿಗೌಡರು ಮಾತನಾಡುತ್ತ ಸರ್ಕಾರ ಮಾಡಲು ಸಾಧ್ಯವಾಗದ ಎಷ್ಟೋ ಕೆಲಸಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತ ಬರುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಯೋಜನಾಧಿಕಾರಿ ಪ್ರಭಾಕರ್, ಗ್ರಾ.ಪಂ.ಉಪಾಧ್ಯಕ್ಷರಾದ ನರಸಿಂಹಮೂರ್ತಿ ಗ್ರಾ.ಪಂ.ಸದಸ್ಯರಾದ ನರಸಿಂಹಮೂರ್ತಿ, ಕಾರ್ಯದರ್ಶಿಗಳಾದ ಮಂಜಣ್ಣ, ತಾಲ್ಲೋಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿರೇಖಾ, ವಲಯದ ಮೇಲ್ವಿಚಾರಕರಾದ ನಾಗರಾಜು, ಸೇವಾಪ್ರತಿನಿಧಿ ಉಮಾದೇವಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
