ತುಮಕೂರು: ಶ್ರೀಮತಿ ಆಶಾ ಕೆ.ಎಸ್.ರವರು ತುಮಕೂರು ಜಿಲ್ಲೆಯ ಜಿಲ್ಲಾ ಮಕ್ಕಳ ವಿಶೇಷ (ಪೋಕ್ಸೋ) ನ್ಯಾಯಾಲಯದಲ್ಲಿ 2022 ರ ಎಪ್ರಿಲ್ ರಿಂದ 2025 ರ ಎಪ್ರಿಲ್ ವರೆಗೆ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸಿ 85 ಪೋಸ್ಕೋ ಪ್ರಕರಣಗಳಲ್ಲಿ ನೊಂದವರ ಪರವಾಗಿ ಸಮರ್ಪಕವಾದ ವಾದವನ್ನು ಮಂಡಿಸಿ ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗು ವಂತೆ ಮಾಡಿದ ಪೋಕ್ಸೋ ಸರ್ಕಾರಿ ಅಭಿಯೋಜಕರಾಗಿದ್ದ ಕೆ.ಎಸ್.ಆಶಾರವರಿಗೆ ಜಿಲ್ಲಾ ಪೋಲೀಸ್ ಇಲಾಖೆಯಿಂದ ಅಭಿನಂದಿಸಲಾಯಿತು.
ಅವರು 90 ಲಕ್ಷ ರೂ ದಂಡದ ಹಣ ವಸೂಲು ಮಾಡಲು ಹಾಗೂ ನೊಂದವರಿಗೆ 3.50 ಕೋಟಿ ರೂ ಪರಿಹಾರದ ಹಣವನ್ನು ದೊರಕಿಸಿಕೊಡುವಲ್ಲಿ & 2025 ನೇ ಸಾಲಿನ ಎಪ್ರಿಲ್ ತಿಂಗಳಲ್ಲಿ 25 ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆ ಕೊಡಿಸುವಲ್ಲಿ ಅತ್ಯಂತ ಆಸಕ್ತಿಯಿಂದ ಶ್ರಮಿಸಿದ್ದು ಸದರಿಯವರನ್ನು ಇಂದು ಪೊಲೀಸ್ ಕವಾಯತು ಮೈದಾನದಲ್ಲಿ ಬೆಳಗ್ಗೆ 8:00 ಗಂಟೆಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಐಪಿಎಸ್ ರವರು ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಹೃದಯಪೂರ್ವಕವಾಗಿ ಅಭಿನಂದಿಸಲಾಯಿತು
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ರಾನುಗುಪ್ತ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಎಂ.ಎಲ್.ಪುರುಷೋತ್ತಮ್, ಸಿ.ಗೋಪಾಲ್, ನಗರ ಡಿಎಸ್ಪಿ ಕೆ.ಆರ್.ಚಂದ್ರಶೇಖರ್, ಡಿಎಆರ್ ಡಿಎಸ್ಪಿ ಪರಮೇಶ್ ರವರುಗಳು ಉಪಸ್ಥಿತರಿದ್ದರು.ಜಿಲ್ಲಾ ಪೋಲೀಸ್ ಇಲಾಖೆಯಿಂದ ಪ್ರಶಸ್ತಿ ಮತ್ತು ಅಭಿನಂದನೆ ಸ್ವೀಕರಿಸಿದ ಕೆ.ಎಸ್.ಆಶಾರವರಿಗೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್,ಜಂಟಿ ಕಾರ್ಯದರ್ಶಿ ಧನಂಜಯ,ಹಿರಿಯ ವಕೀಲರಾದ ಜೆ.ಕೆ.ಅನಿಲ್,ಡಿ.ಸಿ.ಹಿಮಾನಂದ್,ಉಚ್ಛನ್ಯಾಯಾಲಯದ ಹಿರಿಯ ವಕೀಲರಾದ ಎಂ.ಎನ್.ಮಧುಸೂಧನ್,ಎಲ್ಲ ಹಿರಿಯ,ಕಿರಿಯ,ಮಹಿಳಾ ವಕೀಲರುಗಳು ಶುಭಾಶಯ ಕೋರಿದರು.
ವರದಿ : ಕೆ ಬಿ ಚಂದ್ರಚೂಡ್
