ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ತುಮಕೂರು ತಾಲೂಕಿನ ಹೆಬ್ಬೂರು ವಲಯದ ಚೋಳಾಪುರ ಗ್ರಾಮದ ವೃದ್ದೆ ಲಲಿತಮ್ಮ ಅವರಿಗೆ ವಾತ್ಸಲ್ಯ ಕಾರ್ಯಕ್ರಮದಲ್ಲಿ ಉಚಿತ ವಾತ್ಸಲ್ಯ ಮನೆಯನ್ನು ನಿರ್ಮಾಣ ಮಾಡಿದ್ದು ಕ್ಷೇಮವನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಜ್ಞಾನವಿಕಾಸ ಯೂಟ್ಯೂಬ್ ಚಾನಲ್ ನ ಸಂಸ್ಥಾಪಕರಾದ ಶ್ರೀಮತಿ ಶ್ರದ್ಧಾ ಅಮಿತ್ ರವರು ಉದ್ಘಾಟಿಸಿದರು.
ತುಮಕೂರು ಜಿಲ್ಲೆಯಲ್ಲಿ 50ನೇ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿ ಮಾತೃಶ್ರೀ ಹೇಮಾವತಿ ಅಮ್ಮನವರು ವಾತ್ಸಲ್ಯ ಸಮೀಕ್ಷೆಯ ಮೂಲಕ ಫಲಾನುಭವಿಯನ್ನು ಗುರುತಿಸಿ ಸಮೀಕ್ಷೆಯ ನಂತರ ಅವರಿಗೆ ಮಾಶಾಸನ ನೀಡಿ ಸೂರಿಲ್ಲದವರಿಗೆ ಸೂರು ಕಲ್ಪಿಸಿ ಕೊಟ್ಟಿದ್ದಾರೆ, ನೊಂದವರನ್ನು ಗುರುತಿಸಿ ಭೂಮಿಯ ಮೇಲೆ ಬದುಕುವ ಧೈರ್ಯ ತುಬುತ್ತಿದ್ದಾರೆ ಎಂದು ಹೇಳಿ ಲಲಿತಮ್ಮ ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ,ಜ್ಞಾನವಿಕಾಸ ಯೋಜನಾಧಿಕಾರಿ ಶ್ರೀಮತಿ ಸಂಗೀತ ತುಮಕೂರು ತಾಲೂಕು ಯೋಜನಾಧಿಕಾರಿ ಪ್ರಭಾಕರ್, ಊರಿನ ಗಣ್ಯರಾದ ಪ್ರೇಮ್.ಜಿ ಒಕ್ಕೂಟದ ಅಧ್ಯಕ್ಷರಾದ ಅನಿತಾ ಹಾಗೂಜಿಲ್ಲಾ ಸಮನ್ವಯಧಿಕಾರಿ ಪದ್ಮಾವತಿ ಸಮನ್ವಯಾಧಿಕಾರಿ ಶ್ರೀಮತಿ ರೇಖಾ, ಮೇಲ್ವಿಚಾರಕರಾದ ನಾಗರಾಜು, ಸೇವಾಪ್ರತಿನಿಧಿ ಸುಮಿತ್ರ ಸಂಘದ ಸದಸ್ಯರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
